/newsfirstlive-kannada/media/media_files/2025/11/03/supreme-court-on-stray-dogs-2025-11-03-14-45-58.jpg)
ಸುಪ್ರೀಂಕೋರ್ಟ್ ನಲ್ಲಿ ಇಂದು ಬೀದಿನಾಯಿಗಳ ಹಾವಳಿ ಬಗ್ಗೆ ಮತ್ತೆ ವಿಚಾರಣೆ ನಡೆಯಿತು. ಕಳೆದ ವಿಚಾರಣೆ ವೇಳೆ ರಾಜ್ಯ ಸರ್ಕಾರಗಳು ಅಫಿಡವಿಟ್ ಸಲ್ಲಿಸಿರಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಸುಪ್ರೀಂಕೋರ್ಟ್ ನ ಇಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶನ ನೀಡಿತ್ತು. ಇದರಿಂದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ಸುಪ್ರೀಂಕೋರ್ಟ್‌ನ ಜಸ್ಟೀಸ್ ವಿಕ್ರಮನಾಥ್ ಪೀಠದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಇದರಿಂದಾಗಿ ಕೋರ್ಟ್ ಹಾಲ್ ಒಳಗೆ ತಾವು ಬರಲು ಸಾಧ್ಯವಾಗುತ್ತಿಲ್ಲ. ಈ ಕೇಸ್ ಗೆ ಸಂಬಂಧಿಸಿದ್ದವರು ಮಾತ್ರವೇ ಒಳಗೆ ಬರಲು ಸೂಚನೆ ಕೊಡಿ ಎಂದು ವಕೀಲ ಅಭಿಷೇಕ ಮನುಸಿಂಘ್ವಿ ಮನವಿ ಮಾಡಿದ್ದರು.
ಬಳಿಕ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಖಚಿತಪಡಿಸಿಕೊಂಡಿತು.
ಇನ್ನೂ ಕೆಲ ಕೇಂದ್ರಾಡಳಿತ ಪ್ರದೇಶಗಳು ಅಫಿಡವಿಟ್ ಸಲ್ಲಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಬಹಳ ಮುಖ್ಯವಾದ ಅಂಶಗಳ ಬಗ್ಗೆ ಅಫಿಡವಿಟ್ ನಲ್ಲಿ ಉಲ್ಲೇಖಿಸಿಲ್ಲ ಆ್ಯಂಟಿ ಬರ್ತ್ ಕಂಟ್ರೋಲ್ ಸೆಂಟರ್ ಗಳು, ಸಂತಾನಹರಣ ಶಸ್ತ್ರಚಿಕಿತ್ಸೆಯಾದ ಡಾಗ್ ಗಳು, ಬಜೆಟ್ ಹಂಚಿಕೆ, ಈ ವಿಷಯ, ಮಾನದಂಡಗಳ ಬಗ್ಗೆ ಗೊತ್ತಾಗದೇ ರಾಜ್ಯವಾರು ನಿರ್ಧಾರ ಕೈಗೊಳ್ಳಲಾಗಲ್ಲ. ನಮ್ಮ ಕೆಲ ಸಹೋದ್ಯೋಗಿಗಳು ಕೆಲ ಪಟ್ಟಿ ಮಾಡಿದ್ದಾರೆ ಎಂದು ವಕೀಲ ಅಭಿಷೇಕ್ ಮನುಸಿಂಘ್ವಿ ಹೇಳಿದ್ದರು.
ಬಳಿಕ ಸುಪ್ರೀಂಕೋರ್ಟ್ ಜಸ್ಟೀಸ್ ವಿಕ್ರಮನಾಥ್, ಕೆಲ ರಾಜ್ಯಗಳು ಸೋಮಾರಿಯಾಗಿವೆ. ನಾವು ಈ ಅಫಿಡವಿಟ್ ಗಳನ್ನ ಪರಿಶೀಲಿಸುತ್ತೇವೆ. ನಂತರ ಆದೇಶ ನೀಡುತ್ತೇವೆ. ಮುಂದಿನ ವಿಚಾರಣೆ ವೇಳೆ ಈ ಕೇಸ್ ನಲ್ಲಿ ಮಧ್ಯಪ್ರವೇಶ ಮಾಡುವವರ ವಾದ ಹಾಗೂ ಸಂಬಂಧಪಟ್ಟ ಎಲ್ಲರ ವಾದವನ್ನು ಆಲಿಸುತ್ತೇವೆ. ನಾವು ಇಂದು ಯಾವುದೇ ವೈಯಕ್ತಿಕ ಕೇಸ್ ಅನ್ನು ಆಲಿಸುತ್ತಿಲ್ಲ ಎಂದು ಹೇಳಿದ್ದರು.
ಇನ್ನೂ ಹಿರಿಯ ವಕೀಲೆ ಕರುಣಾ ನಂದಿ ಅವರು ವಾದಿಸಿ, AWBI ( Anilmal welfare board of india) ಸಂಘಟನೆಯನ್ನು ಈ ಕೇಸ್ ಗೆ ಭಾಗಿದಾರರನ್ನಾಗಿ ಮಾಡಿಕೊಳ್ಳಬಹುದು ಎಂದರು.
ಕೊನೆಗೆ ಸುಪ್ರೀಂಕೋರ್ಟ್ ಇಂದಿನ ಆದೇಶ ನೀಡಿತು. ಎಲ್ಲ ರಾಜ್ಯಗಳ ವಕೀಲರು ವಿಚಾರಣೆಗೆ ಹಾಜರಾಗಿದ್ದಾರೆ. ರಾಜ್ಯಗಳು ಸುಪ್ರೀಂಕೋರ್ಟ್ ಆದೇಶ ಪಾಲನೆಯ ಅಫಿಡವಿಟ್ ಸಲ್ಲಿಸಿದ್ದಾರೆ. ಎಲ್ಲ ಮುಖ್ಯ ಕಾರ್ಯದರ್ಶಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ವಕೀಲ ಗೌರವ್ ಅಗರವಾಲ್ ಈ ಎಲ್ಲ ಅಫಿಡವಿಟ್ ಗಳ ಸಾರಾಂಶವನ್ನು ಬುಧವಾರ ಸಲ್ಲಿಸುತ್ತಾರೆ. ವಕೀಲರಿಗೆ ಚೆಕ್ ಲಿಸ್ಟ್ ಸಲ್ಲಿಸಬೇಕು.
ಮುಖ್ಯ ಕಾರ್ಯದರ್ಶಿಗಳು ಮುಂದಿನ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡದೇ ಇದ್ದಲ್ಲಿ, ಮುಖ್ಯ ಕಾರ್ಯದರ್ಶಿಗಳು ಖುದ್ದಾಗಿ ಹಾಜರಾಗುವುದು ಅಗತ್ಯ . ನಾಯಿದಾಳಿಯ ಸಂತ್ರಸ್ತರ ಅರ್ಜಿಗಳನ್ನು ಆಲಿಸಲಾಗುತ್ತೆ. ನಾಯಿ ದಾಳಿ ಸಂತ್ರಸ್ತರು ಠೇವಣಿ ಇಡುವ ಅಗತ್ಯವಿಲ್ಲ. AWBI( Animal welfare Board of india) ಸಹ ಈ ಕೇಸ್ ಭಾಗಿದಾರರು. ಅವರಿಗೆ ನೋಟೀಸ್ ನೀಡಲಾಗುತ್ತೆ ಎಂದು ಸುಪ್ರೀಂಕೋರ್ಟ್ ಇಂದು ತನ್ನ ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ನವಂಬರ್ 7ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ಅಂದು ಮಹತ್ವದ ಆದೇಶ ನೀಡುವ ನಿರೀಕ್ಷೆ ಇದೆ.
/filters:format(webp)/newsfirstlive-kannada/media/media_files/2025/08/11/dogs-1-2025-08-11-13-37-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us