/newsfirstlive-kannada/media/media_files/2025/08/04/rajasthan-cm-bhajan-lal-sharma-2025-08-04-12-43-24.jpg)
ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಚಾರ್ಟರ್ ವಿಮಾನದಲ್ಲಿ ಜೋಧಪುರ ಜಿಲ್ಲೆಯ ಪಲೋಡಿಯ ಮಿಲಿಟರಿ ಏರ್ ಬೇಸ್ ನಲ್ಲಿ ಲ್ಯಾಂಡಿಂಗ್ ಆಗಲು ದೆಹಲಿಯಿಂದ ಹೊರಟಿದ್ದರು. ಆದರೇ, ಸಿಎಂ ಭಜನ್ ಲಾಲ್ ಶರ್ಮಾ ಪ್ರಯಾಣಿಸುತ್ತಿದ್ದ ಚಾರ್ಟರ್ ವಿಮಾನ ಬೇರೊಂದು ಏರ್ ಸ್ಟ್ರಿಪ್ ನಲ್ಲಿ ಲ್ಯಾಂಡಿಂಗ್ ಆಗಿದೆ. ರಾಜಸ್ಥಾನದ ಸಿಎಂ ಭಜನ್ ಲಾಲ್ ಶರ್ಮಾ ಪ್ರಯಾಣಿಸುತ್ತಿದ್ದ ವಿಮಾನ ದಿಕ್ಕು ತಪ್ಪಿದೆ. ಹೀಗೆ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾರನ್ನು ಬೇರೆ ಏರ್ ಸ್ಟ್ರಿಪ್ ಗೆ ಕರೆದೊಯ್ದ ತಪ್ಪಿಗೆ ಇಬ್ಬರು ಪೈಲಟ್ ಗಳ ವಿರುದ್ಧ ಈಗ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಜುಲೈ 31ರಂದು ಸಿಎಂ ಭಜನ್ ಲಾಲ್ ಶರ್ಮಾ, ದೆಹಲಿಯಂದ ಪಲೋಡಿಗೆ ಚಾರ್ಟರ್ ವಿಮಾನದಲ್ಲಿ ಹೊರಟಿದ್ದರು. ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಪಲೋಡಿ ಏರ್ ಪೋರ್ಸ್ ಸ್ಟೇಷನ್ ಇದೆ. ಜೈಪುರದಿಂದ ಪಲೋಡಿಗೆ 400 ಕಿಲೋಮೀಟರ್ ದೂರ ಇದೆ. ಫಾಲ್ಕನ್ 2000 ಹೆಸರಿನ ಚಾರ್ಟರ್ ವಿಮಾನದಲ್ಲಿ ದೆಹಲಿಯಿಂದ ಟೇಕಾಫ್ ಆಗಿ ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ನಲ್ಲಿ ಲ್ಯಾಂಡಿಂಗ್ ಆಗಬೇಕಾಗಿತ್ತು. ಆದರೇ, ಪೈಲಟ್ ಗಳು ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡದೇ, ಹತ್ತಿರದಲ್ಲೇ ಇದ್ದ, ಇನ್ನೊಂದು ಏರ್ ಸ್ಟ್ರಿಪ್ ನಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಇದು ಪೈಲಟ್ ಗಳಿಗೆ ಮತ್ತು ಸಿಎಂ ಭಜನ್ ಲಾಲ್ ಶರ್ಮಾಗೆ ಲ್ಯಾಂಡಿಂಗ್ ಆದ ಬಳಿಕ ಗೊತ್ತಾಗಿದೆ. ಈ ಏರ್ ಸ್ಟ್ರಿಪ್ ಅನ್ನು ಅಪರೇಷನ್ ಸಿಂಧೂರ್ ವೇಳೆ ರಿಪೇರಿ ಮಾಡಲಾಗಿತ್ತು. ಈ ಏರ್ ಸ್ಟ್ರಿಪ್ ಗೂ ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ರನ್ ವೇಗೂ ಐದು ಕಿಲೋಮೀಟರ್ ದೂರ. ಇದು ಗೊತ್ತಾದ ಬಳಿಕ ಪೈಲಟ್ ಗಳು ಮತ್ತೆ ವಿಮಾನವನ್ನು ಟೇಕಾಫ್ ಮಾಡಿ ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ರನ್ ವೇನಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ.
ಎರಡು ರನ್ ವೇಗಳ ಡೈರೆಕ್ಷನ್, ಭೌಗೋಳಿಕ ಸ್ಥಳ ನೋಡಲು ಒಂದೇ ರೀತಿ ಇದ್ದವು. ಹೀಗಾಗಿ ಪೈಲಟ್ ಗಳಿಗೆ ಗೊಂದಲ ಆಗಿದೆ. ಜೊತೆಗೆ ಪೈಲಟ್ ಗಳಿಗೆ ನಿಖರವಾಗಿ ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ನ ರನ್ ವೇನಲ್ಲೇ ಲ್ಯಾಂಡಿಂಗ್ ಆಗಬೇಕೆಂದು ಸರಿಯಾಗಿ ತಿಳಿಸಿರಲಿಲ್ಲ. ಪಲೋಡಿಯಲ್ಲಿ ಲ್ಯಾಂಡಿಂಗ್ ಎಂದು ತಿಳಿಸಿದ್ದಾರೆ. ಹೀಗಾಗಿ ಪೈಲಟ್ ಗಳು ಪಲೋಡಿಯ ಏರ್ ಪೋರ್ಸ್ ಸ್ಟೇಷನ್ ನಿಂದ 5 ಕಿ.ಮೀ. ದೂರದ ಮತ್ತೊಂದು ಏರ್ ಸ್ಟ್ರಿಪ್ ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿದ್ದಾರೆ. ಪಲೋಡಿ ಏರ್ ಪೋರ್ಸ್ ಸ್ಟೇಷನ್ ನಲ್ಲಿ ಲ್ಯಾಂಡಿಂಗ್ ಆದ ಬಳಿಕ ಸಿಎಂ ಭಜನ್ ಲಾಲ್ ಶರ್ಮಾ, ತಮ್ಮ ಕಾರ್ಯಕ್ರಮ ಮುಗಿಸಿಕೊಂಡು ಅದೇ ಫಾಲ್ಕನ್ 2000 ಹೆಸರಿನ ಚಾರ್ಟರ್ ವಿಮಾನದಲ್ಲೇ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ವಾಪಸಾಗಿದ್ದಾರೆ.
ಈ ಘಟನೆಯ ಬಗ್ಗೆ ಡಿಜಿಸಿಎ ತನಿಖೆ ಆರಂಭಿಸಿದೆ. ಪ್ಲೈಟ್ ಅಪರೇಟರ್ ಈ ಬಗ್ಗೆ ಡಿಜಿಸಿಎಗೆ ದೂರು ನೀಡಿದ್ದಾರೆ. ರಾಂಗ್ ಏರ್ ಪೋರ್ಟ್ ನಲ್ಲಿ ವಿಮಾನ ಲ್ಯಾಂಡಿಂಗ್ ಆಗಿತ್ತು ಎಂದು ಪ್ಲೈಟ್ ಅಪರೇಟರ್, ಡಿಜಿಸಿಎಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಡಿಜಿಸಿಎ, ರಾಂಗ್ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡಿದ ಇಬ್ಬರು ಪೈಲಟ್ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ತಾತ್ಕಾಲಿಕವಾಗಿ ಡಿರೋಸ್ಟರ್ ಮಾಡಿದೆ. ಅಂದರೇ, ಪೈಲಟ್ ಗಳಿಗೆ ಸದ್ಯಕ್ಕೆ ತನಿಖೆ ಮುಗಿಯುವವರೆಗೂ ವಿಮಾನ ಹಾರಾಟದ ಕೆಲಸವನ್ನು ನೀಡಲ್ಲ. ಬೇರೆ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡಿದ ತಪ್ಪಿಗೆ ಪೈಲಟ್ ಗಳು ಇಬ್ಬರು ತಾತ್ಕಾಲಿಕವಾಗಿ ಕೆಲಸ ಇಲ್ಲದೇ ಖಾಲಿ ಕೂರಬೇಕಾದ ಸ್ಥಿತಿ ಬಂದಿದೆ.