/newsfirstlive-kannada/media/media_files/2026/02/20/communal-tension-in-3-states-2026-02-20-18-21-52.jpg)
ಮಧ್ಯಪ್ರದೇಶ, ತೆಲಂಗಾಣದಲ್ಲೂ ಕಲ್ಲು ತೂರಾಟದ ಘಟನೆ
ಇತ್ತ ಬಾಗಲಕೋಟೆ ಗಲಾಟೆ ಹೊತ್ತಲ್ಲೇ ಅತ್ತ ತೆಲಂಗಾಣ, ಮಧ್ಯಪ್ರದೇಶದಲ್ಲೂ ಕೋಮು ಗಲಾಟೆಗಳು ನಡೆದಿವೆ.. ಹೈದ್ರಾಬಾದ್​​​​ನಲ್ಲಿ ಶಿವಾಜಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ.. ಮಧ್ಯಪ್ರದೇಶದ ಜಬ್ಬಲ್​ಪುರ ಕೂಡ ಕೋಮುದಳ್ಳುರಿಗೆ ಹೊತ್ತಿ ಉರಿದಿದೆ.. ದೇಶದ ಮೂರು ಕಡೆಗಳಲ್ಲಿ ಒಂದೇ ಕೋಮು ಗಲಾಟೆಗಳು ನಡೆದಿರೋದು ಭಾರಿ ಚರ್ಚೆಗೆ ಗುರಿ ಮಾಡಿದೆ..
ಧಾರ್ಮಿಕ ಕಾರ್ಯಕ್ರಮದ ವೇಳೆ ಘರ್ಷಣೆ.. ಸಿಕ್ಕ ಸಿಕ್ಕ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸುತ್ತಿರುವ ಪ್ರತಿಭಟನಾಕಾರರು.. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿರುವ ಪೊಲೀಸರು.. ಅಂದಹಾಗೆ ಮಧ್ಯಪ್ರದೇಶದ ಜಬ್ಬಲ್​ಪುರ ಜಿಲ್ಲೆಯ ಸಿಹೋರ ಪಟ್ಟಣ ಧಗಧಗಿಸಿದ ಪರಿ ಇದು..
ಧಾರ್ಮಿಕ ಕಾರ್ಯಕ್ರಮದ ವೇಳೆ 2 ಗುಂಪುಗಳ ಘರ್ಷಣೆ
ಕಲ್ಲು ತೂರಾಟ.. ಧ್ವಂಸ.. ಪರಿಸ್ಥಿತಿ ನಿಯಂತ್ರಣ.. ನಿಷೇಧಾಜ್ಞೆ!
ನಿನ್ನೆ ಬಾಗಲಕೋಟೆಯಲ್ಲಿ ನಡೆದಂತೆ ಮಧ್ಯಪ್ರದೇಶದ ಜಬ್ಬಲ್​ಪುರ ಜಿಲ್ಲೆಯ ಸಿಹೋರಾ ಪಟ್ಟಣದಲ್ಲೂ ಕೋಮುಗಲಾಟೆ ಭುಗಿಲೆದ್ದಿತ್ತು.. ಎರಡು ಸಮುದಾಯದವರು ಏಕಕಾಲದಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸುವ ವೇಳೆ ವಿವಾದದ ಕಿಡಿ ಹೊತ್ತಿದೆ.. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕಲ್ಲು ತೂರಾಟ ನಡೆದಿದೆ.. ಅಂಗಡಿ-ಮುಂಗಟ್ಟುಗಳನ್ನು ಧ್ವಂಸ ಮಾಡಿದ್ದು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ..
‘ಧಾರ್ಮಿಕ’ ಘರ್ಷಣೆ!
ಸಿಹೋರಾದ ಆಜಾದ್ ಚೌಕ್​​ ಭಾಗದಲ್ಲಿ ನಡೆದಿರುವ ಗಲಾಟೆ
ದುರ್ಗಾ ದೇವಸ್ಥಾನದಲ್ಲಿ ಭಕ್ತರು ಆರತಿ ನಡೆಸುತ್ತಿದ್ದಾಗ ಗಲಾಟೆ
ಕ್ಷುಲ್ಲಕ ವಿಚಾರಕ್ಕೆ ಕಲ್ಲು ತೂರಾಟ ನಡೆಸಿ ಹಿಂಸಾತ್ಮಕ ಘರ್ಷಣೆ
ಘರ್ಷಣೆ ನಡೆಯುತ್ತಿದ್ದಕ್ಕೆ ಸ್ಥಳಕ್ಕೆ ಧಾವಿಸಿದ್ದ ಪೋಲೀಸ್ ಪಡೆ
ಲಾಠಿಚಾರ್ಜ್ ಮಾಡಿ ಗುಂಪುಗಳನ್ನು ಚದುರಿಸಿದ ಪೊಲೀಸರು
( ಮಧ್ಯಪ್ರದೇಶದ ಸಿಹೋರಾದ ಆಜಾದ್ ಚೌಕ್​​ ಭಾಗದಲ್ಲಿ ಗಲಾಟೆ ನಡೆದಿದೆ.. ದುರ್ಗಾ ದೇವಸ್ಥಾನದಲ್ಲಿ ಭಕ್ತರು ಆರತಿ ಮಾಡುತ್ತಿರುವ ವೇಳೆ ಘರ್ಷಣೆ ಶುರುವಾಗಿದೆ.. ಕ್ಷುಲ್ಲಕ ವಿಚಾರಕ್ಕೆ ಕಲ್ಲು ತೂರಾಟ ನಡೆಸಿ ಹಿಂಸಾತ್ಮಕ ಘರ್ಷಣೆ ನಡೆಸಿದ್ದಾರೆ.. ಘರ್ಷಣೆ ನಡೆಯುತ್ತಿದ್ದಕ್ಕೆ ಸ್ಥಳಕ್ಕೆ ಧಾವಿಸಿದ್ದ ಪೋಲೀಸ್ ಪಡೆ ಗಲಾಟೆ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದೆ.. ಬಳಿಕ ಲಾಠಿಚಾರ್ಜ್ ಮಾಡಿ ಗುಂಪುಗಳನ್ನು ಚದುರಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.. )
ಸದ್ಯ ಘರ್ಷಣೆಯಲ್ಲಿ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.. ಕೋಮುಸೂಕ್ಷ್ಮ ಸಿಹೋರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಕಣ್ಗಾವಲು ಹೆಚ್ಚಿಸಲಾಗಿದೆ. ಯಾವುದೇ ಸಂಭಾವ್ಯ ದುಷ್ಕರ್ಮಿಗಳು ಶಾಂತಿಗೆ ಭಂಗ ತರುವುದನ್ನು ತಡೆಯಲು ಪೊಲೀಸರು ಹೆಚ್ಚಿನ ಎಚ್ಚರಿಕೆಯನ್ನು ಕಾಯ್ದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸ್ತಿದ್ದಾರೆ..
ಹೈದ್ರಾಬಾದ್​ನಲ್ಲಿ ಶಿವಾಜಿ ಮೆರವಣಿಗೆ ವೇಳೆ ಗಲಾಟೆ!
ಯೂಟ್ಯೂಬರ್​ ಮೇಲೆ ಹಲ್ಲೆ.. ಗಲಾಟೆ, ಆಶ್ರುವಾಯು!
ಇತ್ತ ತೆಲಂಗಾಣ ರಾಜಧಾನಿ ಹೈದ್ರಾಬಾದ್​​ನಲ್ಲೂ ಛತ್ರಪತಿ ಶಿವಾಜಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ.. ಹೈದರಾಬಾದ್‌ನ ಅಂಬರ್‌ಪೇಟೆ ಜಾಮಾ ಮಸೀದಿಯ ಸುತ್ತಮುಲ ಪ್ರದೇಶದಲ್ಲಿ ಬಳಿ ಯೂಟ್ಯೂಬರ್ ಒಬ್ಬ ವಿಡಿಯೋ ಮಾಡ್ತಿದ್ದನ್ನು ವಿರೋಧಿಸಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಇದೇ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಆ ಪ್ರದೇಶದ ಮೂಲವೇ ಹಾದು ಹೋಗ್ತಾ ಇತ್ತು.. ಈ ವೇಳೆ ಎರಡೂ ಸಮುದಾಯಗಳ ನಡುವೆ ಗಲಾಟೆ ಜೋರಾಗಿ ಪರಸ್ಪರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ರು.. ಅಶ್ರುವಾಯು ಸಿಡಿಸುವ ಮೂಲಕ ಜನರನ್ನು ಚದುರಿಸಿದ್ರು.. ಸದ್ಯ ಪರಿಸ್ಥಿತಿ ಶಾಂತವಾಗಿದ್ದು ಯಾರಿಂದೂ ದೂರು-ಪ್ರತಿದೂರುಗಳು ಬಂದಿಲ್ಲ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..
ಒಟ್ಟಾರೆ, ಇತ್ತೀಚೆಗೆ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ವೇಳೆ ಕಿಡಿಗೇಡಿಗಳು ಕಿಡಿ ಹೊತ್ತಿಸುತ್ತಿರುವುದು ಆತಂಕಕಾರಿ.. ಸಮಾಜದ ಶಾಂತಿಗೆ ಭಂಗ ತರುವ ಶಕ್ತಿಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕುವ ಅವಶ್ಯಕತೆ ಇದೆ.
/filters:format(webp)/newsfirstlive-kannada/media/media_files/2026/02/20/communal-tension-in-3-states-2-2026-02-20-18-23-49.jpg)
ನ್ಯೂಸ್​​ಫಸ್ಟ್ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us