ಕಾನ್ಪಿಡೆಂಟ್ ಚೇರ್ ಮೆನ್ ರಾಯ್‌ ಸೆಲ್ಪ್ ಶೂಟ್ ಮಾಡಿಕೊಂಡಂತೆ ಕಾಣ್ತಿದೆ - ಕಮೀಷನರ್ ಸೀಮಂತ್ ಕುಮಾರ್ ಸಿಂಗ್‌

ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಸೆಲ್ಪ್ ಶೂಟ್ ಮಾಡಿಕೊಂಡಂತೆ ಕಾಣುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಮೀಷನರ್ ಪರಿಶೀಲನೆ ನಡೆಸಿದ್ದಾರೆ. ಕಮೀಷನರ್ ಹೇಳಿದ್ದು ಏನೇನು? ಇಲ್ಲಿದೆ ಓದಿ.

author-image
Chandramohan
CONFIDENT owner suicide commissioner reaction
Advertisment


ಕಾನ್ಪಿಡೆಂಟ್‌ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಇಂದು ಬೆಂಗಳೂರಿನಲ್ಲಿ ಗುಂಡು  ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರಿಚ್ಮಂಡ್ ಸರ್ಕಲ್‌ ಬಳಿಯ ಕಾನ್ಪಿಡೆಂಟ್ ಗ್ರೂಪ್ ಕಚೇರಿಗೆ ಇಂದು ಸಂಜೆ ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿದ್ದರು. ಘಟನಾ ಸ್ಥಳವನ್ನು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಪರಿಶೀಲಿಸಿದ್ದಾರೆ. 

ಬಳಿಕ ಮಾಧ್ಯಮಗಳ ಜೊತೆೆ ಪೊಲೀಸ್ ಕಮೀಷನರ್ ಮಾತನಾಡಿದ್ದಾರೆ. ಕಾನ್ಪಿಡೆಂಟ್ ಗ್ರೂಪ್ ಚೇರ್ ಮೆನ್ ಸಿ.ಜೆ.ರಾಯ್ ಸೆಲ್ಪ್ ಶೂಟ್ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

 
ಇಂದು ಮಧ್ಯಾಹ್ನ 3.15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಕಳೆದ 3 ದಿನದಿಂದ ಐ.ಟಿ. ಇಲಾಖೆಯ ದಾಳಿ ನಡೆಯುತ್ತಿತ್ತು. ಕೇರಳದಿಂದ ಐ.ಟಿ. ಇಲಾಖೆಯ ಅಧಿಕಾರಿಗಳು ಬಂದಿದ್ದರು. ಈಗ ಯಾವುದೇ ಐ.ಟಿ. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇಲ್ಲ. ನಮ್ಮ  ಪೊಲೀಸರು ಐ.ಟಿ. ಇಲಾಖೆಯಿಂದಲೂ ಮಾಹಿತಿ ಪಡೆಯುತ್ತಾರೆ.  ಸಿ.ಜೆ.ರಾಯ್ ಕುಟುಂಬದವರು ವಿದೇಶದಲ್ಲಿದ್ದು, ಈಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.  ಅವರಿಂದಲೂ ಮಾಹಿತಿ ಪಡೆಯುತ್ತೇವೆ. ಮೇಲ್ನೋಟಕ್ಕೆ ಇದು ಸೆಲ್ಪ್ ಶೂಟ್ ಆಗಿರುವಂತೆ ಕಾಣುತ್ತಿದೆ ಎಂದು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್  ಸಿಂಗ್ ಹೇಳಿದ್ದಾರೆ. 

ಈಗ ಅಸಹಜ ಸಾವಿನ ಕೇಸ್ ದಾಖಲಿಸಬೇಕೋ, ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಬೇಕೋ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕಾನ್ಪಿಡೆಂಟ್ ಗ್ರೂಪ್ ಡೈರೆಕ್ಟರ್ ಒಬ್ಬರು ದೂರು ನೀಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. .

Income tax department raid Confident group Police commissioner seemanth kumar singh confident group owner CJ ROY suicide
Advertisment