/newsfirstlive-kannada/media/media_files/2025/10/31/ivf-for-jail-inmates-2025-10-31-17-26-58.jpg)
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ, 15 ವರ್ಷಗಳ ಪ್ರತ್ಯೇಕ ಸೆರೆವಾಸದ ನಂತರ, ಮತ್ತೊಂದು ಜೀವವನ್ನು ಸೃಷ್ಠಿಸುವ ಅಪರೂಪದ ಅವಕಾಶವನ್ನು ಪ್ರೇಮಿಗಳಿಗೆ ಗುಜರಾತಿನ ಹೈಕೋರ್ಟ್ ಕಲ್ಪಿಸಿ ಐತಿಹಾಸಿಕ ತೀರ್ಪು ನೀಡಿದೆ.
ಸೇಜಲ್ ಬರಿಯಾ ಎಂಬ ಮಹಿಳೆ ತನ್ನ ಪ್ರಿಯಕರ ಜಯೇಂದ್ರ ದಾಮೋರ್ ಜೊತೆಗೂಡಿ ಮಾಜಿ ಪ್ರಿಯಕರನನ್ನು ಹತ್ಯೆ ಮಾಡಿದ್ದಳು. ಮಾಜಿ ಪ್ರಿಯಕರ ಪಿನಕಿನ್​ ಪಟೇಲ್ ನಿಂದ ದೂರವಾದ ನಂತರವೂ ಆಕೆಯನ್ನು ಪೀಡಿಸುತ್ತಿದ್ದನು. ಈ​ ಕಾರಣಕ್ಕೆ ಸೇಜಲ್​ ಬರಿಯಾ ನನ್ನ ನೂತನ ಪ್ರಿಯಕರ ಜಯೇಂದ್ರ ದಾಮೋರ್ ಜೊತೆಗೂಡಿ ಗುಜರಾತಿನ ಪಾವಗಡದ ಅತಿಥಿಗೃಹಕ್ಕೆ ಪಿನಕಿನ್ ಪಟೇಲ್​ ನನ್ನು ಕರೆದೊಯ್ದು ಸಂಚು ರೂಪಿಸಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಗೋಧ್ರಾ ಜಿಲ್ಲಾ ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಶಿಕ್ಷೆ ನೀಡಿದ್ದು, ಪ್ರತ್ಯೇಕವಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಸದ್ಯ ನಲವತ್ತರ ಅಸು ಪಾಸಿನ ವಯಸ್ಸಾದ ಜೋಡಿಯೂ ಕೃತಕ ಗರ್ಭಧಾರಣೆ ಮೂಲಕ ಮಗುವನ್ನು ಪಡೆಯುವ ಬಯಕೆಯನ್ನು ನ್ಯಾಯಾಲಯಕ್ಕೆ ತಿಳಿಸಿದರು. ಬಂಜೆತನ ನಿವಾರಣೆ ಚಿಕಿತ್ಸೆಗಾಗಿ ಸೇಜಲ್ ಬರಿಯಾ ಅವರನ್ನು ಮೊದಲು 2023 ರಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಸೇಜಲ್ ಬರಿಯಾ ಜೊತೆಗಿರಲು ಜಯೇಂದ್ರ ದಾಮೋರ್​ಗೆ ಇದೇ ಅಕ್ಟೋಬರ್ 16 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು.
ಅಕ್ಟೋಬರ್ 25 ರಂದು ಇಬ್ಬರೂ ಮತ್ತೆ ನ್ಯಾಯಾಲಯದ ಮುಂದೆ ಹಾಜರಾದಾಗ, ನ್ಯಾಯಮೂರ್ತಿ ಎಚ್.ಡಿ. ಸುತಾರ್ ನವೆಂಬರ್​ 2 ರವರೆಗೆ ಪೆರೋಲ್​ ಅವಧಿಯನ್ನು ವಿಸ್ತರಿಸಿದರು. ಸಹಾನುಭೂತಿಯಿಂದ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಮೂರ್ತಿಗಳು, ಪೆರೋಲ್​ ಅವಧಿ ಮುಗಿದ ತಕ್ಷಣ ಅರ್ಜಿದಾರರು ಸಂಬಂಧಪಟ್ಟ ಜೈಲು ಪ್ರಾಧಿಕಾರದ ಮುಂದೆ ಶರಣಾಗಬೇಕು ಎಂದು ಆದೇಶಿಸಿದ್ದಾರೆ. ಜೀವಾವಧಿ ಶಿಕ್ಷೆಗೊಳಪಟ್ಟ ಅಪರಾಧಿಗಳಿಬ್ಬರು ಮಗು ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಇಡೀ ದೇಶದಲ್ಲಿ ಮೊದಲು.
/filters:format(webp)/newsfirstlive-kannada/media/media_files/2025/10/31/gujarat-highcourt-2025-10-31-17-30-01.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us