/newsfirstlive-kannada/media/media_files/2025/12/27/link-pan-card-and-aadhaar-card-2025-12-27-12-11-56.jpg)
ಪ್ಯಾನ್ ನಂಬರ್‌ಗೆ ಆಧಾರ್ ಲಿಂಕ್ ಗೆ ಡಿಸೆಂಬರ್ 31 ಕೊನೆ ದಿನ!
ನಿಮ್ಮ ಆಧಾರ್ ನಂಬರ್ ಅನ್ನು ಪ್ಯಾನ್ ನಂಬರ್ ಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಮತ್ತೊಂದು ಅವಕಾಶ ನೀಡಿದೆ. ಡಿಸೆಂಬರ್, 31, 2025 ರೊಳಗೆ ಆಧಾರ್ ನಂಬರ್ ಅನ್ನು ಪ್ಯಾನ್ ನಂಬರ್ ಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಇನ್ನೂ ನಾಲ್ಕು ದಿನಗಳೊಗಾಗಿ ನಿಮ್ಮ ಆಧಾರ್ ನಂಬರ್ ಅನ್ನು ಪ್ಯಾನ್ ನಂಬರ್ ಜೊತೆ ಲಿಂಕ್ ಮಾಡಿ, ಇಲ್ಲದಿದ್ದರೇ, ಪ್ಯಾನ್ ನಂಬರ್ ನಿಷ್ಕ್ರಿಯವಾಗಲಿದೆ.
ಆಧಾರ್ ಕಾರ್ಡ್ ನಂಬರ್ ಅನ್ನು ಪ್ಯಾನ್ ನಂಬರ್ ಜೊತೆ ಲಿಂಕ್ ಮಾಡದೇ ಇದ್ದರೇ, ಪ್ಯಾನ್ ನಿಷ್ಕ್ರಿಯವಾಗುವುದರ ಜೊತೆಗೆ ಪ್ಯಾನ್ ಆಧರಿತ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. 2017ರ ಜುಲೈ 1 ಕ್ಕೂ ಮುಂಚಿತವಾಗಿ ಪ್ಯಾನ್ ನಂಬರ್ ಪಡೆದಿರುವವರು, ತಮ್ಮ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಲಿಂಕ್ ಮಾಡುವುದು ಕಡ್ಡಾಯ.
ಇನ್ನೂ ಪ್ಯಾನ್ ನಂಬರ್ ಜೊತೆ ಆಧಾರ್ ನಂಬರ್ ಅನ್ನು ಲಿಂಕ್ ಮಾಡುವ ಸೇವೆಯು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಐಟಿ ಡಿಪಾರ್ಟ್ ಮೆಂಟ್ ಇ ಫೈಲಿಂಗ್ ಪೋರ್ಟಲ್ ನಲ್ಲಿ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಲಿಂಕ್ ಮಾಡಬಹುದು.
ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ ಗೊತ್ತಾ?
ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ
ಪ್ರೊಫೆೈಲ್ ಸೆಕ್ಷನ್ ಗೆ ಹೋಗಿ ಲಿಂಕ್ ಆಧಾರ್ ಅಪ್ಷನ್ ಮೇಲೆ ಕ್ಲಿಕ್ ಮಾಡಿ.
ಬಳಿಕ ನಿಮ್ಮ ಪ್ಯಾನ್ ಮತ್ತು ಆಧಾರ್ ನಂಬರ್ ಅನ್ನು ಟೈಪ್ ಮಾಡಿ, ನಂತರ ಸೆಲೆಕ್ಟ್ ಅನ್ನು ಒತ್ತಿ
ಬಳಿಕ ಇ ಪೇ ಟ್ಯಾಕ್ಸ್ ಮೂಲಕ ಹಣ ಪಾವತಿಸಿ ಬಟನ್ ಒತ್ತಿ, ಮುಂದುವರಿಯಿರಿ
ಇನ್ನೂ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಇನ್ ಕಮ್ ಟ್ಯಾಕ್ಸ್ ಪೋರ್ಟಲ್ ಹೋಗಿ, ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ಎಂಟರ್ ಮಾಡಿ.
ಬಳಿಕ ನಿಮ್ಮ ಪ್ಯಾನ್ ನಂಬರ್ ಗೆ ಆಧಾರ್ ನಂಬರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಡಿಸಪ್ಲೇ ಆಗುತ್ತೆ
ಒಂದು ವೇಳೆ ನಿಮ್ಮ ಆಧಾರ್ ನಂಬರ್ ನಲ್ಲಿ ಲೋಪದೋಷ ಇದ್ದರೇ, ಯುಐಡಿಎಐ ಪೋರ್ಟಲ್ ಗೆ ಹೋಗಿ ಕರೆಕ್ಷನ್ ಮಾಡಬಹುದು.
ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಲೋಪದೋಷಗಳಿದ್ದರೇ, ಎನ್‌ಎಸ್‌ಡಿಎಲ್ ಪೋರ್ಟಲ್ ಗೆ ಹೋಗಿ ಕರೆಕ್ಷನ್ ಮಾಡಬಹುದು.
ಪ್ಯಾನ್ ಸರ್ವೀಸ್ ಸೆಂಟರ್ ಗಳಲ್ಲಿ ಬಯೋಮೆಟ್ರಿಕ್ ವೆರಿಫಿಕೇಷನ್ ಅನ್ನು ಕೊಟ್ಟು ಪ್ಯಾನ್ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದು.
/filters:format(webp)/newsfirstlive-kannada/media/media_files/2025/12/27/link-pan-card-and-aadhaar-card-1-2025-12-27-12-13-30.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us