/newsfirstlive-kannada/media/media_files/2025/08/20/delhi_cm_new-2025-08-20-11-50-59.jpg)
ನವದೆಹಲಿ: ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸುತ್ತಿರುವಾಗ ದೆಹಲಿ ಸಿಎಂ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ಸಂಬಂಧ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಿಎಂ ರೇಖಾ ಗುಪ್ತಾ ಅವರಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ (41) ಎಂದು ಗುರುತಿಸಲಾಗಿದೆ. ಆರೋಪಿ ರಾಜಸ್ತಾನ್ನ ರಾಜ್ಕೋಟ್ ಮೂಲದ ನಿವಾಸಿ ಎಂದು ಪೊಲೀಸರ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ವ್ಯಕ್ತಿಯನ್ನ ಕಸ್ಟಡಿಯಲ್ಲಿ ಇರಿಸಲಾಗಿದೆ. ಸಿಎಂ ಮೇಲೆಯೇ ಹಲ್ಲೆ ಮಾಡಿರುವುದರಿಂದ ಇದರ ಹಿಂದಿನ ಉದ್ದೇಶ ಏನು ಎಂದು ತಿಳಿಯಲು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯ ಸಿವಿಲ್ ಲೈಸೆನ್ಸ್ನಲ್ಲಿ ಇರುವಂತಹ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಾಪ್ತಾಹಿಕ ಜನ್ ಸುನ್ವಿ ಕಾರ್ಯಕ್ರಮದಲ್ಲಿ ಸಿಎಂ ರೇಖಾ ಗುಪ್ತಾ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ರಾಜೇಶ್ ಭಾಯಿ, ತನ್ನ ಸಂಬಂಧಿಯೊಬ್ಬರು ಜೈಲಿನಲ್ಲಿದ್ದು ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ಅರ್ಜಿ ತಂದಿದ್ದನು. ಆದರೆ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಬೈಕ್ಗೆ ಡಿಕ್ಕಿ ಹೊಡೆದ ನಂದಿನಿ ಹಾಲಿನ ವಾಹನ.. ಉಸಿರು ಚೆಲ್ಲಿದ MBBS ವಿದ್ಯಾರ್ಥಿಗಳು
ಜನ್ ಸುನ್ವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಹೇಳುವಂತೆ, 30 ರಿಂದ 40 ವರ್ಷದ ವ್ಯಕ್ತಿ ಒಬ್ಬರು ಕೆಲವು ಕಾಗದಗಳನ್ನು ಸಿಎಂ ರೇಖಾ ಗುಪ್ತ ಕೈಗೆ ಕೊಟ್ಟು ಜೋರಾಗಿ ಮಾತನಾಡಿ ಕೂಗಾಡಿದನು. ತಕ್ಷಣ ಸಿಎಂ ಮೇಲೆ ಕಪಾಳಮೋಕ್ಷ ಮಾಡಿದನು. ಇದರಿಂದ ಕೆಲವು ಜನರು ಅವನನ್ನ ಥಳಿಸಿದ್ದಾರೆ. ಬಳಿಕ ಆರೋಪಿನ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಆತನ ನೀಡಿದ ಹೆಸರು ಹಾಗೂ ವಿಳಾಸ ಎರಡನ್ನು ಪರಿಶೀಲನೆ ಮಾಡುವಂತೆ ಗುಜರಾತ್ ಪೊಲೀಸರನ್ನು ದೆಹಲಿ ಪೊಲೀಸರು ಸಂಪರ್ಕ ಮಾಡಿದ್ದಾರೆ. ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಅವರು ರೇಖಾ ಗುಪ್ತಾ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ