/newsfirstlive-kannada/media/media_files/2025/12/07/delhi-women-2025-12-07-17-56-23.jpg)
ಹೆಸರು ಸಿಮ್ರಿಧಿ ಮಖಿಜಾ. ದೆಹಲಿಯ ನಿವಾಸಿ ಆಗಿರುವ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿರುವ ಅವರು, ಇಲ್ಲಿನ ಸ್ಥಳೀಯ ಭಾಷೆ ಕಲೆಯುತ್ತಿರುವ ಅನುಭವ ಹಂಚಿಕೊಂಡಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಆಗಿರುವ ಅವರು, ಕನ್ನಡ ಕಲಿಯೋದು ಯಾಕೆ ಮುಖ್ಯ ಅಂತಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಮಖಿಜಾ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಮಗೆ ಯಾಕೆ ಸ್ಥಳೀಯ ಭಾಷೆಗಳು ಮುಖ್ಯ ಆಗುತ್ತವೆ ಅನ್ನೋದಕ್ಕೆ ಕಥೆ ರೂಪದಲ್ಲಿ ಒಂದು ಸಂಗತಿಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಮಂದಾನ ಜೊತೆ ಮದುವೆ ಕ್ಯಾನ್ಸಲ್, ‘ಕಠಿಣ ಕಾನೂನು ಕ್ರಮ’ ಎಂದ ಮುಚ್ಚಲ್..!
ಅವರೇ ಹೇಳುವಂತೆ..
‘ನಿಮಗೆ ಕನ್ನಡ ಬರಲ್ಲ ಅಂದ್ರೆ ನೀವು ಬೆಂಗಳೂರಿಗೆ ಬರಬೇಡಿ’. ಇದನ್ನು ಮೊದಲು ಕೇಳಿದಾಗ, ನಾನು ದೆಹಲಿ ಹುಡುಗಿ. ನಾನು ಕನ್ನಡ ಕಲಿಯುತ್ತಿಲ್ಲ ಎಂದೆನಿಸಿತು. ಆದರೆ ನಾನು ಬೆಂಗಳೂರಿಗೆ ಬಂದು 60 ದಿನಗಳು ಕಳೆದೆ. ನಾನು ಇಲ್ಲಿಗೆ ಬಂದು ಏನಾದರೂ ಹೇಳುವುದಿದ್ದರೆ ಎಲ್ಲರೂ ಕನ್ನಡ ಕಲಿಯಿರಿ ಎಂದು. ಯಾಕೆಂದರೆ.. ಅದು ಇಲ್ಲಿನ ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ..
ನಿಮಗೆ ಗೊತ್ತಾ, ನಾನು ಪ್ರತಿನಿತ್ಯ ಹೆಚ್ಎಸ್ಆರ್ನಲ್ಲಿರುವ ಹೋಟೆಲ್ಗೆ ಹೋಗುತ್ತಿದ್ದೆ. ಅಲ್ಲಿ ಊಟ, ತಿಂಡಿ ಮಾಡುತ್ತಿದ್ದೆ. ಒಂದು ದಿನ ಅಣ್ಣ ಕೇಳಿದ, ನೀವು ಯಾಕೆ ನಾಲ್ಕು ದಿನಗಳಿಂದ ಇಲ್ಲಿಗೆ ಬಂದಿಲ್ಲ. ಏನಾಯಿತು ಎಂದ? ಅದಕ್ಕೆ ನಾನು ಹೇಳಿದೆ. ಕೆಲಸ ತುಂಬಾ ಕ್ರೇಜಿ ಆಗಿತ್ತು, ಅದಕ್ಕೆ ಬಂದಿಲ್ಲ ಎಂದೆ.
ಆದರೆ ನಾನು ಅದನ್ನು ಕನ್ನಡದಲ್ಲಿ ಮಾಡಬಹುದೆಂದು ಬಯಸುತ್ತೇನೆ. ನಾನು ಅವರನ್ನು ಅವರ ಭಾಷೆಯಲ್ಲೇ ಸ್ವಾಗತಿಸಬೇಕು ಎಂದು ಬಯಸುತ್ತೇನೆ.. ಏಕೆಂದರೆ ಅದು ಒಳ್ಳೆಯ ಕೆಲಸ. ಇಲ್ಲಿರುವ ಜನರು ನಮಗೆ ಆತಿಥ್ಯ ನೀಡುತ್ತಾರೆ. ಭಾಷೆ ವಿಚಾರ ಯಾಕೆ ಇಷ್ಟೊಂದು ವಿವಾದ ಆಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಏನಾದರೂ ಹೇಳೋದಿದ್ದರೆ.. ಅದು ನನ್ನ ಸ್ನೇಹಿತರೆಲ್ಲ ಕನ್ನಡ ಮಾತನ್ನಾಡೋದು ನೋಡಿದ್ರೆ ನನಗೆ ಅಸೂಯೆ ಆಗುತ್ತೆ. ನಾನು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ. ಆಗ ಭಾಷೆಯನ್ನು ಇನ್ನಷ್ಟು ಕಲಿಯಬಹುದು. ಪ್ರಿಯರೇ, ನನಗೆ ಇನ್ನಷ್ಟು ಕಲಿಸಿ. ಇನ್ಮುಂದೆ ಭಾಷಾ ಸಂಘರ್ಷಕ್ಕೆ ಹೋಗಬೇಡಿ.. ಎಂದಿದ್ದಾರೆ.
ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಕನ್ನಡಿಗರು ತುಂಬಾ ಇಷ್ಟಪಟ್ಟಿದ್ದಾರೆ. ತಮ್ಮದೇ ಶೈಲಿಯಲ್ಲಿ ಆಕೆಯ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us