ಹಲಸು ಮತ್ತು ಹುಣಸೇಹಣ್ಣು ಬೋರ್ಡ್ ರಚನೆಗೆ ಕೇಂದ್ರ ಸರ್ಕಾರಕ್ಕೆ ದೇವೇಗೌಡರ ಮನವಿ : ಬಯಲುಸೀಮೆ ರೈತರಿಗೆ ಅನುಕೂಲ

ಕರ್ನಾಟಕದ ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಲಸು ಮತ್ತು ಹುಣಸೇಹಣ್ಣು, ಜಮ್ಮು ನೇರಳೆ ಬೆಳೆಯಲಾಗುತ್ತೆ. ಈ ಮೂರು ಹಣ್ಣುಗಳ ಬೋರ್ಡ್ ರಚಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕೇಂದ್ರದ ಕೃಷಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

author-image
Chandramohan
jackfruit and tamariand board formation request to center

ಹಲಸು, ಹುಣಸೇ, ನೇರಳೆ ಹಣ್ಣು ಬೋರ್ಡ್ ರಚನೆಗೆ ಕೇಂದ್ರ ಸರ್ಕಾರಕ್ಕೆ ಮನವಿ

Advertisment
  • ಹಲಸು, ಹುಣಸೇ, ನೇರಳೆ ಹಣ್ಣು ಬೋರ್ಡ್ ರಚನೆಗೆ ಕೇಂದ್ರ ಸರ್ಕಾರಕ್ಕೆ ಮನವಿ
  • ಮಾಜಿ ಪ್ರಧಾನಿ ದೇವೇಗೌಡರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಮನವಿ
  • ಕರ್ನಾಟಕದ ಬಯಲುಸೀಮೆಯಲ್ಲಿ ಹೆಚ್ಚಾಗಿ ಬೆಳೆಯುವ ಹಲಸು, ಹುಣಸೇ, ನೇರಳೆ ಹಣ್ಣು

ದೇಶದಲ್ಲಿ ಈಗಾಗಲೇ ಕಾಫಿ ಬೆಳೆಗಾರರ ಹಿತರಕ್ಷಣೆಗಾಗಿ ಕಾಫಿ ಬೋರ್ಡ್ ಮತ್ತು ಬಿಹಾರದ ಮಖಾನಾ ಬೆಳೆಗಾರರ ಹಿತರಕ್ಷಣೆಗಾಗಿ ಮಖಾನಾ ಬೋರ್ಡ್ ಅನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಈಗ ಅದೇ ಮಾದರಿಯಲ್ಲಿ ಕರ್ನಾಟಕದ ಹಲಸು, ಹುಣಸೇ ಹಣ್ಣು ಹಾಗೂ ಜಮ್ಮು ನೇರಳೆ ಹಣ್ಣಿನ ಬೆಳೆಗಾರರ ಹಿತರಕ್ಷಣೆಗಾಗಿ ಮಂಡಳಿಯೊಂದನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಅವರು ಕೇಂದ್ರದ ಕೃಷಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕಾ ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೂಡ  ಉಪಸ್ಥಿತರಿದ್ದು, ಶಿವರಾಜ್ ಸಿಂಗ್ ಚೌಹಾಣ್  ಅವರಿಗೆ ಕರ್ನಾಟಕದ ಬಯಲು ಸೀಮೆಯ ರೈತರು  ಬೆಳೆಗಳ ಅಭಿವೃದ್ದಿ ಹಾಗೂ ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರದಿಂದ ಮಂಡಳಿ ಸ್ಥಾಪಿಸುವಂತೆ ಒತ್ತಾಯ ಮಾಡಿದ್ದಾರೆ.
ಈ ವೇಳೆ ದೇವೇಗೌಡರು ಹಲಸಿನ ಹಣ್ಣು ಅನ್ನು ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರೀತಿಯಿಂದ ನೀಡಿದ್ದಾರೆ. ದೇವೇಗೌಡರ ಆಪ್ತ ಕಾರ್ಯದರ್ಶಿಗಳಾದ ಚಂದ್ರಶೇಖರ್ ಹಾಗೂ ಅಂಜನಿಗೌಡ ಅವರು ಈ ವೇಳೆ ಉಪಸ್ಥಿತರಿದ್ದರು. 

jackfruit and tamariand board formation request to center (1)





ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ,  ರಾಮನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲಸಿನ ಹಣ್ಣು ಅನ್ನು ರೈತರು ಬೆಳೆಯುತ್ತಾರೆ. ಬಯಲು ಸೀಮೆಯ ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಹುಣಸೇ ಹಣ್ಣು ಅನ್ನು ಹೆಚ್ಚಾಗಿ ಬೆಳೆಯಲಾಗುತ್ತೆ. ಬಯಲು ಸೀಮೆ ಜಿಲ್ಲೆಗಳಲ್ಲಿ ಜಮ್ಮು ನೇರಳೆ ಹಣ್ಣು  ಅನ್ನು ಬೆಳೆಯಲಾಗುತ್ತೆ. 
ಈ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡಿದರೇ, ದೇಶಾದ್ಯಂತ ಒಳ್ಳೆಯ ಮಾರುಕಟ್ಟೆ ಲಭಿಸಿದರೇ, ಬಯಲು ಸೀಮೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹಲಸು ಮತ್ತು ಹುಣಸೇಹಣ್ಣು ಬೋರ್ಡ್ ರಚನೆಗೆ ಈಗ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಜಿ ಪ್ರಧಾನಿ ದೇವೇಗೌಡರು ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ ಫೆಬ್ರವರಿ 1 ರ ಕೇಂದ್ರದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಘೋಷಣೆ ಮಾಡುತ್ತಾ ಎಂಬ ಕುತೂಹಲ ಸೃಷ್ಟಿಯಾಗಿದೆ.  ಕಳೆದ ವರ್ಷದ ಕೇಂದ್ರದ ಬಜೆಟ್ ನಲ್ಲಿ ಬಿಹಾರದ ಮಖಾನಾ ಬೆಳೆಗಾಗಿ ಮಖಾನಾ ಬೋರ್ಡ್ ರಚನೆಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಜೆಡಿಎಸ್ ಪಕ್ಷವು ಈಗ ಎನ್‌ಡಿಎ ಅಂಗಪಕ್ಷ.  ಹಾಗಾಗಿ ಜೆಡಿಎಸ್ ಮನವಿಯನ್ನು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ.

jackfruit and tamariand board formation request to center (2)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Devegowda requeted central government to form jackfruit and tamariand board
Advertisment