/newsfirstlive-kannada/media/media_files/2025/12/05/indigo-flights-proublem-solved-2025-12-05-13-55-47.jpg)
ಇಂಡಿಗೋ ಪೈಲಟ್ ಕೊರತೆ ನೀಗಿಸಲು ನಿಯಮದಿಂದ ವಿನಾಯಿತಿ ನೀಡಿಕೆ
ಕೇಂದ್ರ ಸರ್ಕಾರವು ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮವನ್ನು ಭಾಗಶಃ ಹಿಂತೆಗೆದುಕೊಂಡಿದೆ. ಇಂಡಿಗೋ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾದ ಹಿನ್ನಲೆಯಲ್ಲಿ ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದ ಜಾರಿಯನ್ನು ಹಿಂತೆಗೆದುಕೊಂಡಿದೆ. ಡಿಜಿಸಿಎ ಅಪರೇಷನ್ ನ ಅಸಿಸ್ಟೆಂಟ್ ಡೈರೆಕ್ಟರ್ ಹಿಮಾಂಶು ಶ್ರೀವಾಸ್ತವ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಲ್ಲಿ 1 ಸಾವಿರ ವಿಮಾನ ಸಂಚಾರ ರದ್ದು ಆದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇಂಡಿಗೋ ಮನವಿ ಮೇರೆಗೆ ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಇದರಿಂದ ಪೈಲಟ್ ಗಳು ಹೆಚ್ಚಿನ ಗಂಟೆ ವಿಮಾನ ಹಾರಾಟ ನಡೆಸಲು ಲಭ್ಯವಾಗುತ್ತಾರೆ . ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದಿಂದ ಒಂದು ವಾರಕ್ಕೆ 2 ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಬೇಕಾಗಿತ್ತು . ಈಗ ಈ ನಿಯಮ ಕಡ್ಡಾಯ ಜಾರಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪೈಲಟ್ ಗಳ ಕೊರತೆಯ ಸಮಸ್ಯೆಯು ಸ್ಪಲ್ಪ ಮಟ್ಟಿಗೆ ಬಗೆಹರಿದು ಪ್ರಯಾಣಿಕರ ಸಂಕಷ್ಟ ಸ್ಪಲ್ಪ ಪರಿಹಾರದ ನಿರೀಕ್ಷೆ ಇದೆ.
ಇನ್ನೂ ಇಂಡಿಗೋ ಪ್ರಯಾಣಿಕರ ಪರದಾಟ, ಪೈಲಟ್ ಗಳ ಕೊರತೆ ಹಾಗೂ ಅದನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/12/04/indigo-airlines-cancelled02-2025-12-04-18-06-27.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us