/newsfirstlive-kannada/media/media_files/2025/10/18/gold_price-2025-10-18-13-55-50.jpg)
/newsfirstlive-kannada/media/media_files/2025/10/19/gold_new-2025-10-19-13-28-41.jpg)
ನಿತ್ಯ ಚಿನ್ನದ ಬೆಲೆ ಏರಿಕೆ
ಇವತ್ತು ಚಿನ್ನದ ಬೆಲೆ ಜನರ ಕೈಗೆ ಸಿಗುತ್ತಿಲ್ಲ. ಆದರೂ ಕೆಲವರು ಚಿನ್ನ ಖರೀದಿಸಲು ಪ್ರಾಮುಖ್ಯತೆ ನೀಡುತ್ತಾರೆ. ಸ್ವಲ್ಪ ಹಣ ಉಳಿಸಿ ಚಿನ್ನ ಖರೀದಿಸುವುದರಿಂದ ಭವಿಷ್ಯದಲ್ಲಿ ಭದ್ರತೆ ಸಿಗುತ್ತದೆ ಎಂದು ಭಾವಿಸುತ್ತಾರೆ. ಈಗ ಚಿನ್ನದ ಬೆಲೆ ಹೆಚ್ಚಾಗಿರೋದ್ರಿಂದ ಅದನ್ನು ಹೆಚ್ಚು ಖರೀದಿಸುವುದು ಉತ್ತಮ ಎಂದು ನಂಬಿದ್ದಾರೆ.
/newsfirstlive-kannada/media/media_files/2025/10/11/gold-price-today-2025-10-11-13-02-31.jpg)
ಭೌತಿಕ ಚಿನ್ನ vs ಡಿಜಿಟಲ್ ಚಿನ್ನ
ಕೆಲವರು ಹೂಡಿಕೆಗಾಗಿ ಚಿನ್ನ ಖರೀದಿಸುತ್ತಾರೆ. ಇದರಲ್ಲಿ ಎರಡು ವಿಧ ಇದೆ. ಒಂದು ಭೌತಿಕ ಚಿನ್ನ (physical gold) ಮತ್ತು ಡಿಜಿಟಲ್ ಚಿನ್ನ (digital gold). ಫಿಸಿಕಲ್ ಗೋಲ್ಡ್ vs ಡಿಜಿಟಲ್ ಗೋಲ್ಡ್ ಮಧ್ಯೆ ಯಾವುದು ಬೆಸ್ಟ್ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
/newsfirstlive-kannada/media/media_files/2025/09/09/gold-prospects-chikkamagalore-2025-09-09-08-56-17.jpg)
ಯಾವುದರಿಂದ ಲಾಭ..?
ಭೌತಿಕ ಚಿನ್ನ ಅಂದ್ರೆ ನಮ್ಮ ಕೈಯಲ್ಲಿರುವ ಚಿನ್ನ. ಚಿನ್ನದ ಆಭರಣಗಳು, ಬಿಸ್ಕತ್ತುಗಳು ಇತ್ಯಾದಿ. ಭೌತಿಕ ಚಿನ್ನ ಅಲಂಕಾರ ಮತ್ತು ಭದ್ರತಾ ದೃಷ್ಟಿಯಿಂದ ಒಳ್ಳೆಯದು. ಅದನ್ನು ಒತ್ತೆ ಇಡುವ ಮೂಲಕ ನಮ್ಮ ಅಗತ್ಯಗಳಿಗಾಗಿ ಹಣವನ್ನೂ ತೆಗೆದುಕೊಳ್ಳಬಹುದು. ಆದರೆ ಇದು ದುಬಾರಿ. ಹೆಚ್ಚುವರಿ ಉತ್ಪಾದನಾ ಶುಲ್ಕಗಳು, GST, ವೇಸ್ಟೇಜ್ ಹಾಕಲಾಗುತ್ತದೆ. ಹಾಗೆಯೇ ಕಳ್ಳತನವಾಗುವ ಅಪಾಯವಿದೆ. ಮನೆಯಲ್ಲಿ ಚಿನ್ನವಿದ್ದರೆ, ಕಳ್ಳರು ಅದನ್ನು ಕದಿಯುವ ಸಾಧ್ಯತೆಯಿದೆ. ಆದರೆ, ಡಿಜಿಟಲ್ ಚಿನ್ನಕ್ಕೆ ಅಂತಹ ಯಾವುದೇ ಸಮಸ್ಯೆಗಳಿಲ್ಲ.
/newsfirstlive-kannada/media/post_attachments/wp-content/uploads/2025/03/CHEEP-RATE-GOLD-1.jpg)
ಕೈಗೆ ಸಿಗಲ್ಲ
ಡಿಜಿಟಲ್ ಚಿನ್ನ ಹೂಡಿಕೆಗೆ ಒಳ್ಳೆಯದು. ಡಿಜಿಟಲ್ ಚಿನ್ನ ಸ್ವಲ್ಪ ಅಗ್ಗ, ಹೆಚ್ಚು ಸುರಕ್ಷಿತ. ಇದರ ಮೇಲೆ ಮೇಕಿಂಗ್ ಶುಲ್ಕ, ಸವಕಳಿ ಶುಲ್ಕ ಇರಲ್ಲ. ಕಳ್ಳತನದ ಅಪಾಯವೂ ಇರಲ್ಲ. ಆದರೆ ಈ ಚಿನ್ನ ನಮ್ಮ ಕೈಯಲ್ಲಿ ಇರಲ್ಲ. ಇದು ಡಿಜಿಟಲ್ ರೂಪದಲ್ಲಿ ಇರುತ್ತದೆ. ಅದರ ಮೌಲ್ಯ ಮಾತ್ರ ನಮಗೆ ಸಿಗುತ್ತದೆ. ಡಿಜಿಟಲ್ ಚಿನ್ನದಲ್ಲಿ ಎಷ್ಟೇ ಲಕ್ಷ ಹೂಡಿಕೆ ಮಾಡಿದರೂ, ಆಭರಣ ರೂಪದಲ್ಲಿ ಸಿಗಲ್ಲ.
/newsfirstlive-kannada/media/media_files/2025/10/11/gold-price-today-2025-10-11-13-02-31.jpg)
ನಿಮ್ಮ ಆಯ್ಕೆ ಯಾವುದು?
ಭವಿಷ್ಯದಲ್ಲಿ ಅಲಂಕಾರದ ಜೊತೆಗೆ ಭದ್ರತೆಯನ್ನು ಬಯಸಿದರೆ ಭೌತಿಕ ಚಿನ್ನವನ್ನು ಖರೀದಿಸುವುದು ಉತ್ತಮ. ನೀವು ಹೂಡಿಕೆ ಮಾತ್ರ ಹುಡುಕುತ್ತಿದ್ದರೆ, ಡಿಜಿಟಲ್ ಚಿನ್ನ ಅತ್ಯುತ್ತಮ ಆಯ್ಕೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us