ಅಮೆರಿಕದಲ್ಲಿ 48 ವರ್ಷ ಹಣ ಸಂಪಾದಿಸಿ ದೆಹಲಿಗೆ ಬಂದಿದ್ದರು.. 17 ದಿನದಲ್ಲಿ 15 ಕೋಟಿ ಕಳೆದುಕೊಂಡ್ರು..!

ದೆಹಲಿಯಲ್ಲಿ ಒಬ್ಬ NRI ಡಾಕ್ಟರ್ ದಂಪತಿಗೆ ಸೈಬರ್ ಕ್ರಿಮಿನಲ್‌ಗಳು ಬರೋಬ್ಬರಿ 15 ಕೋಟಿ ರೂಪಾಯಿ ವಂಚಿಸಿದ್ದಾರೆ! ವಯಸ್ಸಾದ ದಂಪತಿಯನ್ನು ಸತತ 17 ದಿನಗಳ ಕಾಲ 'ಡಿಜಿಟಲ್ ಅರೆಸ್ಟ್' ಮಾಡಿ, ಬೆದರಿಸಿ ಹಣ ಪೀಕಿದ ಘಟನೆ ಬೆಳಕಿಗೆ ಬಂದಿದೆ!

author-image
Ganesh Kerekuli
NRI doctor couple
Advertisment

ದೆಹಲಿಯಲ್ಲಿ ಒಬ್ಬ NRI ಡಾಕ್ಟರ್ ದಂಪತಿಗೆ ಸೈಬರ್ ಕ್ರಿಮಿನಲ್‌ಗಳು ಬರೋಬ್ಬರಿ 15 ಕೋಟಿ ರೂಪಾಯಿ ವಂಚಿಸಿದ್ದಾರೆ! ವಯಸ್ಸಾದ ದಂಪತಿಯನ್ನು ಸತತ 17 ದಿನಗಳ ಕಾಲ 'ಡಿಜಿಟಲ್ ಅರೆಸ್ಟ್' ಮಾಡಿ, ಬೆದರಿಸಿ ಹಣ ಪೀಕಿದ ಘಟನೆ ಬೆಳಕಿಗೆ ಬಂದಿದೆ!

ಡಾ. ಓಂ ತನೇಜಾ ಮತ್ತು ಡಾ. ಇಂದಿರಾ ತನೇಜಾ ಮೋಸ ಹೋದ NRI ಡಾಕ್ಟರ್ ದಂಪತಿ. ಸುಮಾರು 48 ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿ 2015ರಲ್ಲಿ ಇಂಡಿಯಾಗೆ ವಾಪಸ್ಸಾಗಿದ್ದರು. ಡಿಸೆಂಬರ್ 24 ರಂದು ಅವರಿಗೊಂದು ಕಾಲ್ ಬಂದಿದೆ. ಪೊಲೀಸ್ ಆಫೀಸರ್ಸ್ ಎಂದು ಸುಳ್ಳು ಹೇಳಿ ಕಾಲ್ ಮಾಡಿದ ಕ್ರಿಮಿನಲ್​ಗಳು, 'ನಿಮ್ಮ ಮೇಲೆ ಮನಿ ಲಾಂಡರಿಂಗ್ ಕೇಸ್ ಇದೆ. ಅರೆಸ್ಟ್ ವಾರೆಂಟ್ ಇಶ್ಯೂ ಆಗಿದೆ ಎಂದು ಭಯ ಹುಟ್ಟಿಸಿದ್ದಾರೆ.

ಈ ಸ್ಕ್ಯಾಮರ್‌ಗಳು ಡಿಸೆಂಬರ್ 24 ರಿಂದ ಜನವರಿ 10 ರವರೆಗೆ ಆ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದರು. ಅಂದರೆ ಒಂದು ಕ್ಷಣವೂ ಬಿಡದೆ ವಿಡಿಯೋ ಕಾಲ್ ಮೂಲಕ ಕಣ್ಗಾವಲಿನಲ್ಲಿಯೇ ಇಟ್ಟಿದ್ದರು. 77 ವರ್ಷದ ಡಾ. ಇಂದಿರಾ ತನೇಜಾರವರ ಕೈಯಿಂದ ಬರೋಬ್ಬರಿ ಎಂಟು ಬೇರೆ ಬೇರೆ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಒಮ್ಮೆ 2 ಕೋಟಿ, ಮತ್ತೊಮ್ಮೆ 2.10 ಕೋಟಿ.. ಹೀಗೆ ಒಟ್ಟು 14.85 ಕೋಟಿ ರೂಪಾಯಿ ವಂಚಿಸಿದ್ದಾರೆ.

ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ 6 ದಿನಗಳಲ್ಲಿ 18.5 ಲಕ್ಷ ಕೋಟಿ ರೂ. ನಷ್ಟ!! ಈ ಕುಸಿತಕ್ಕೆ ಕಾರಣವೇನು?

digital arrest scams

ಇಬ್ಬರು ವೃದ್ಧರಲ್ಲಿ ಯಾರೆ ಒಬ್ಬರು ಮನೆಬಿಟ್ಟು ಬೇರೆ ಕಡೆ ಹೋದರೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆ ಆಗುತ್ತಿರೋದನ್ನ ಗಮನಿಸಿದ ಬ್ಯಾಂಕ್ ಮ್ಯಾನೇಜರ್ ವೃದ್ಧ ದಂಪತಿಯನ್ನು ಪ್ರಶ್ನೆ ಮಾಡಿದ್ದಾರೆ. ಆಗಲೂ ಸೈಬರ್ ವಂಚಕರು ಎಚ್ಚೆತ್ತುಕೊಂಡಿದ್ದು, ವೃದ್ಧ ದಂಪತಿಗೆ ಏನು ಹೇಳಬೇಕು ಎಂಬುದನ್ನು ಹೇಳಿಕೊಟ್ಟಿದ್ದರು. ಅಂತೆಯೇ ವೃದ್ಧ ದಂಪತಿ ಬ್ಯಾಂಕ್ ಮ್ಯಾನೇಜರ್​​ಗೂ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ. 

ಜನವರಿ 10 ರಂದು ವೃದ್ಧ ದಂಪತಿಗೆ ತಾವು ಮೋಸ ಹೋಗಿರೋದು ಗೊತ್ತಾಗಿದೆ. ಪೊಲೀಸ್ ಸ್ಟೇಷನ್‌ಗೆ ಹೋದ ಮೇಲೆಯೇ ಡಾ. ಇಂದಿರಾ ಅವರಿಗೆ ತಾವು ಎಷ್ಟು ದೊಡ್ಡ ಮಟ್ಟದಲ್ಲಿ ಮೋಸ ಹೋಗಿದ್ದೇವೆ ಅಂತ ತಿಳಿದಿದೆ. ರಿಫಂಡ್ ಸಿಗುತ್ತೆ ಅನ್ನೋದೆಲ್ಲಾ ಸುಳ್ಳು ಅಂತ ಗೊತ್ತಾಗಿ ಶಾಕ್ ಆಗಿದ್ದಾರೆ. ಇಡೀ ಜೀವನದ ಸಂಪಾದನೆ ಕಳೆದುಕೊಂಡ ಆ ದಂಪತಿಗೀಗ ದಿಕ್ಕುತೋಚದಂತಾಗಿದೆ. 

ಈ ಕೇಸ್ ತುಂಬಾನೇ ಸೀರಿಯಸ್ ಆಗಿರೋದ್ರಿಂದ ದೆಹಲಿ ಪೊಲೀಸರು ತನಿಖೆಯನ್ನು ಸ್ಪೆಷಲ್ ಸೆಲ್‌ನ ಸೈಬರ್ ಯುನಿಟ್‌ಗೆ (IFSO) ವಹಿಸಿದ್ದಾರೆ. ಪೊಲೀಸರು ವಂಚಕರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್‌ನಿಂದ ರಹಸ್ಯವಾಗಿ ಬಂದ ಮಗ, ತಾಯಿಯ ಕೊಲೆಗೈದ! : ನಿಗೂಢ ಕೇಸ್ ಭೇಧಿಸಿದ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cyber fraud and digital arrest cyber crime Digital arrest
Advertisment