ನಾಳೆ ಕೇಂದ್ರದ ಬಜೆಟ್‌ನಲ್ಲಿ ಏನೇನು ಗಿಫ್ಟ್ ಸಿಗುತ್ತೆ ಗೊತ್ತಾ? ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ!? ಹತ್ತಾರು ನಿರೀಕ್ಷೆ

ನಾಳೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ 2026-27ನೇ ಸಾಲಿನ ಬಜೆಟ್ ಮಂಡಿಸುವರು. ಬಜೆಟ್ ನ ಮೇಲೆ ಹತ್ತಾರು ನಿರೀಕ್ಷೆಗಳಿವೆ. ಯಾವ್ಯಾವ ವಲಯಕ್ಕೆ ಏನೇನು ಸಿಗಬಹುದು ಅನ್ನೋ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ.

author-image
Chandramohan
central budget

ನಾಳೆ ಕೇಂದ್ರ ಬಜೆಟ್ ಮಂಡಿಸುವ ನಿರ್ಮಲಾ ಸೀತಾರಾಮನ್

Advertisment
  • ನಾಳೆ ಕೇಂದ್ರ ಬಜೆಟ್ ಮಂಡಿಸುವ ನಿರ್ಮಲಾ ಸೀತಾರಾಮನ್
  • ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ನಿರೀಕ್ಷೆ
  • ಹೂಡಿಕೆದಾರರ ಮೇಲಿನ ತೆರಿಗೆ ಹೊರೆ ಇಳಿಕೆಯ ನಿರೀಕ್ಷೆ
  • ಎಲ್‌ಟಿಸಿಜಿ ಹಾಗೂ ಎಸ್‌ಟಿಸಿಜಿ ಇಳಿಕೆಯ ನಿರೀಕ್ಷೆ


ನಾಳೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2026-27 ನೇ ಸಾಲಿನ ಕೇಂದ್ರದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.  ಕಳೆದ ಕೆಲ ವರ್ಷಗಳಿಂದ ಫೆಬ್ರವರಿ 1 ರಂದು ಕೇಂದ್ರದ ಬಜೆಟ್ ಮಂಡಿಸಲಾಗುತ್ತಿದೆ. ಈ ಭಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಆದರೂ, ಭಾನುವಾರವೇ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ನಾಳೆ ಷೇರು ಮಾರುಕಟ್ಟೆ ಓಪನ್ ಇದ್ದು, ವಹಿವಾಟು ನಡೆಸಲಿದೆ. ಸರ್ಕಾರಿ ರಜಾ ದಿನವೂ ಮೊದಲ ಭಾರಿಗೆ ಕೇಂದ್ರದ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. 
ಈ ಭಾರಿಯ ಬಜೆಟ್ ಮೇಲೂ ದೇಶದ ವಿವಿಧ ವಲಯಗಳ ಜನರು ತಮ್ಮದೇ ಆದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜನ ಸಾಮಾನ್ಯರು, ಸಂಬಳ ಗಳಿಸುವ ವರ್ಗ, ಉದ್ಯಮಿಗಳು, ಹೂಡಿಕೆದಾರರು, ವ್ಯಾಪಾರಿಗಳು, ಮಹಿಳೆಯರು ತಮ್ಮದೇ ಆದ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆ ನಿರೀಕ್ಷೆಗಳೇನು? ಈ ಭಾರಿಯ ಬಜೆಟ್ ನಲ್ಲಿ ಏನೇನು ಘೋಷಣೆಯಾಗಬಹುದು ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ ಓದಿ.

1- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಬಹುದು. 
2- ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಇಳಿಕೆ ಮಾಡಬಹುದು.
3- ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ದಂಪತಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗಲಿದೆ.
4- ವಾರ್ಷಿಕ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಬಹುದು.
5- ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್‌ಟಿಸಿಜಿ ಶೇ.0 ಕ್ಕೆ ಇಳಿಕೆ
6- ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
7-ಎಚ್‌ಆರ್‌ಎ ಮಿತಿಯನ್ನು ಏರಿಕೆ ಮಾಡಬಹುದು.
8-ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬಹುದು.

central budgeT Nirmala seetharaman





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman GST REFORMS union budget
Advertisment