2026 ರಲ್ಲಿ ಮಾರುಕಟ್ಟೆಗೆ ಬರುವ ಹೊಸ ಕಾರ್ ಗಳು ಯಾವ್ಯಾವು ಗೊತ್ತಾ? ಫುಲ್ ಡೀಟೈಲ್ಸ್ ಇಲ್ಲಿದೆ

2025 ಮುಗಿದು 2026 ಬರುತ್ತಿದೆ. 2026 ರಲ್ಲಿ ಸಾಕಷ್ಟು ಕಂಪನಿಗಳು ತಮ್ಮ ಹೊಸ ಕಾರ್ ಗಳನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡುತ್ತಿವೆ. ಟಾಟಾ ಸೀಯೆರಾ ಇವಿ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಇ ವಿತಾರಾ ಸೇರಿದಂತೆ ಅನೇಕ ಕಾರ್ ಗಳು ಮಾರ್ಕೆಟ್‌ಗೆ ಲಗ್ಗೆ ಇಡಲು ಸಜ್ಜಾಗಿವೆ. ಅವುಗಳ ಡೀಟೈಲ್ಸ್ ಇಲ್ಲಿದೆ ಓದಿ.

author-image
Chandramohan
New cars in 2026

2026 ರಲ್ಲಿ ಬಿಡುಗಡೆಯಾಗುವ ಹೊಸ ಕಾರ್ ಗಳು

Advertisment
  • 2026 ರಲ್ಲಿ ಬಿಡುಗಡೆಯಾಗುವ ಹೊಸ ಕಾರ್ ಗಳು
  • ಎಲ್ಲ ಕಂಪನಿಗಳಿಂದ ಹೊಸ ಕಾರ್ ಗಳು ಲಾಂಚ್

ಹೊಸ ತಂತ್ರಜ್ಞಾನದ ಅಪ್​ಗ್ರೇಡೆಡ್ ಌಂಡ್ ಮಾಡಿಫೈಡ್​​​ ಕಾರುಗಳಿಂದ ಜನ ಆಕರ್ಷಿತರಾಗಿ ಇವುಗಳ ಖರೀದಿಗೆ  ಮುಗಿ ಬಿದ್ದಿದ್ರು.. ಇನ್ನೊಂದು ಪ್ರಮುಖ ಕಾರಣ ಅಂದ್ರೆ ನೆಕ್ಸ್ಟ್​ ಜೆನ್​ ಜಿಎಸ್​​ಟಿಯಿಂದ ಕಾರ್ ಗಳ ಬೆಲೆ ಕಡಿಮೆಯಾಯಿತು.  ಯಾವಾಗ ಜಿಎಸ್​ಟಿಯನ್ನು ಇಳಿಕೆ ಮಾಡಿ, ರೇಟ್​​ಗಳನ್ನು ಕಡಿತಗೊಳಿಸಲಾಗಿತ್ತೋ  ಈ ದಸರಾ ಹಾಗೂ ದೀಪಾವಳಿಯ ಹಬ್ಬದ ಸೇಲ್ಸ್​​ ದಾಖಲೆ ಬರೆದಿತ್ತು.. ಈಗ ಆ ಟ್ರೆಂಡ್ ಮುಂದುವರೆದು ಜನ ಇನ್ನೂ ಆ ಎಕ್ದೈ ಟ್ ಮೆಂಟ್​ನ ಹಾಗೇ ಇಟ್ಟುಕೊಂಡಿದ್ದಾರೆ.. ಸೋ ಈ ಖರೀದಿ ಭರಾಟೆ, ಹೊಸ ವರ್ಷಕ್ಕೂ ಮುಂದುವರೆಯಲಿದೆ.  ಈ ಫೈನಾಶಿಯಲ್​​ ಇಯರ್​ ಎಂಡ್​ ಅಂದ್ರೆ ಮಾರ್ಚ್ 31ರವೆರಗೂ ಇದು ಪೀಕ್​​ನಲ್ಲಿರೋ ಸಾಧ್ಯತೆ ಇದೆ..ಹಾಗದ್ರೆ ಮುಂದಿನ ವರ್ಷದ ಆರಂಭಿಕ ತಿಂಗಳುಗಳಲ್ಲಿ ಮೋಸ್ಟ್​​ ಅವೇಟೆಡ್​ ಌಂಡ್​ ಎಕ್ಸ್​ಪೆಕ್ಟೆಡ್​ ಕಾರ್​​ಗಳು ಯಾವುದು? ಯಾವ ಕಾರ್​ನ ಜನ ಕಾಯುತ್ತಿದ್ದಾರೆ ಅಂತ   ಅಂತ ನೋಡೋಣ ಬನ್ನಿ.. 
ಮೊದಲನೇಯದ್ದು ನಮ್ಮ ಭಾರತೀಯ ಮಾರುಕಟ್ಟೆಯ ಕಾಮನ್​ಮ್ಯಾನ್ ಕಾರುಗಳು ಅಂದ್ರೆ ನಮ್ಮ ಭಾರತೀಯ ಮಾರುಕಟ್ಟೆಯ non luxurious ಹಾಗೂ ಅತೀ ಹೆಚ್ಚು ಸೇಲ್ಸ್​ ಆಗುವ ಕಾರುಗಳನ್ನು ನೋಡ್ತಾ ಹೋದ್ರೆ.. 


1. ದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಟಾಟಾ ಸಿಯೇರಾ..ಅಲ್ಲ ಅಲ್ಲ..  ಟಾಟಾ ಸಿಯೆರಾ EV: ಬಹು ವರ್ಷಗಳ ನಂತರ 2025ರಲ್ಲಿ ರೀಲಾಂಚ್​ ಆಗಿತ್ತು.. ಕೇವಲ 11.49 ಲಕ್ಷಕ್ಕೆ ಇದನ್ನು ಬಿಡುಗಡೆ ಮಾಡಲಾಗಿತ್ತು.. ಆದ್ರೆ 2026ಕ್ಕೆ ಇದರ ಇವಿ ಮಾಡೆಲ್​ ರಿಲೀಸ್​ ಆಗ್ತಾ ಇದೆ. ಅಂದ್ರೆ ಮತ್ತೊಮ್ಮೆ ಇದನ್ನು ಮಾರುಕಟ್ಟೆಗೆ ರೀ ಇಂಟ್ರೋಡ್ಯೂಸ್​ ಮಾಡ್ತಾ ಇದ್ದಾರೆ. ಇದರ ಮೇನ್​​ ಅಪ್​ಗ್ರೇಡ್​ ಅಂದ್ರೆ ಅದು ಇವಿ ಆಗ್ತಾ ಇರೋದು.. ಜೊತೆಗೆ ಇದು ಆಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ.. ಈಗ ದ ಮೇನ್​ ಪಾರ್ಟ್​.. ಇದರ ಬೆಲೆನಾ ನಾವು ಎಕ್ಸ್​ಪೆಕ್ಟ್​ ಮಾಡ್ತಾ ಇರೋದು 18-25 ಲಕ್ಷದವರೆಗೆ.. 
2. Kia New-Gen Seltos.. ಈ ಕಾರು ಮಾರುಕಟ್ಟೆಗೆ ಬಂದಾಗಲೇ ಸಾಕಷ್ಟು ಸೌಂಡ್​ ಮಾಡಿತ್ತು. ರೋಡ್​ಗಳಲ್ಲಿ ಇದರ ಲುಕ್ಸ್​ ಌಂಡ್​ ಡ್ರೈವಿಂಗ್​ ಎಕ್ಸ್​​ಪೀರಿಯೆನ್ಸ್​.. ಕಿಲ್ಲರ್​.. ಈಗ ಹೊಸ Kia New-Gen Seltos 2026ರಲ್ಲಿ ಬರ್ತಾ ಇದೆ. ಹೊಸ ವಿನ್ಯಾಸ, 12.3-ಇಂಚಿನ ಡ್ಯುಯಲ್ ಸ್ಕ್ರೀನ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಹೊಸ ಸೆಲ್ಟೋಸ್ ಮಾರುಕಟ್ಟೆಗೆ ಬರಲಿದೆ. ಬೆಲೆ 11.20-20 ಲಕ್ಷ ರೂಪಾಯಿ. 
3. Maruti Suzuki Vitara  EV - 2009 ರಲ್ಲೇ ಈ ವಿತಾರಾ ಮಾಡೆಲ್​ ಪರಿಚಯ ಆಗಿತ್ತು.. ಆಗಿನಿಂದ ಹಲವಾರು ಮಾಡಿಫಿಕೇಶನ್ಸ್​ ಹಾಗೂ ಅಪ್​ಗ್ರೇಡ್​​​ ವರ್ಷನ್​ಗಳನ್ನು ನೋಡಿದ್ದೇವೆ.. VITARA BREZZA, GRAND VITARA.. ಹೀಗೆ.. ಆದ್ರೆ ಈಗ Maruti Suzuki e-Vitara ಮಾರುಕಟ್ಟೆಗೆ ಲಾಂಚ್​ ಆಗ್ತಾ ಇದೆ. ಹೊಸ ವರ್ಷದ ಆರಂಭಿಕ ತಿಂಗಳಲ್ಲೇ ಇದು ಸಿಹಿ ಸುದ್ದಿ ಕೊಡುತ್ತೆ. ಅಂದ್ರೆ ಜನವರಿ ಅಂತ್ಯಕ್ಕೆ ಇದು ಲಾಂಚ್ ಆಗುತ್ತಿದೆ.  ಇದು ಮಾರುತಿಯ ಮೊದಲ ಪ್ರಮುಖ ಎಲೆಕ್ಟ್ರಿಕ್ SUV ಆಗಿದ್ದು, ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ನೀಡಲಿದೆ ಎಂದು ಹೇಳಲಾಗಿದೆ. ಇದರ ಬೆಲೆ ಎಷ್ಟು? ನಮ್ಮ ಅಂದಾಜು ಸುಮಾರು 15-24 ಲಕ್ಷ  ರೂಪಾಯಿ ಇರಬಹುದು.. 
4. ರೆನಾಲ್ಟ್ ನ್ಯೂ ಡಸ್ಟರ್  Renault New Duster 
ಜನಪ್ರಿಯ compact SUV. ತನ್ನ rugged ಲುಕ್ಸ್​  and strong performance ನಿಂದ ಮನೆ ಮಾತಾಗಿರುವ ಕಾರ್​.. ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದೆ.. ಈಗ ಇದರ 3 ಗೆನ್​​ ಡಿಸೈನ್​​​ನೊಂದಿಗೆ 2026ಕ್ಕೆ ಬರ್ತಾ ಇದೆ..  ಹೊಸ ವಿನ್ಯಾಸ, ಹೈಬ್ರಿಡ್ ಎಂಜಿನ್ ಮತ್ತು 4x4 ಸಾಮರ್ಥ್ಯದೊಂದಿಗೆ ಡಸ್ಟರ್ 2026ರ ಆರಂಭದಲ್ಲಿ ಮರಳಿ ಬರಲಿದೆ.  ಇನ್ನೂ ಇದರ ಬೆಲೆಯ ವಿಷ್ಯಕ್ಕೆ ಬರೋದಾದ್ರೆ.. ಇದು 10--20 ಲಕ್ಷದೊಳಗೆ ಲಭ್ಯವಿರಲಿದೆ. 
ಈವೆಲ್ಲವೂ ಪ್ರಮುಖ ರಿಲೀಸ್​​ಗಳು ಇನ್ನುಳಿದಂತೆ ತನ್ನ ಕಿಲ್ಲರ್​ ಹಾಗೂ ಕ್ಲ್ಯಾಸಿ ಡಿಸೈನ್​​ನಿಂದ ರೋಡಲ್ಲಿ ಕಣ್ಣು ಕುಕ್ಕೋ BE 6 ನಂತರ ಈಗ BE 07 ಬರ್ತಾ ಇದೆ.. upcoming all-electric SUV ಮಹಿಂದ್ರಾ ವತಿಯಿಂದ.. ಇದು ವರ್ಷಾಂತ್ಯಕ್ಕೆ ರಿಲೀಸ್​ ಆಗ್ತಾ ಇದೆ.. spacious family EV with advanced tech,  large screens, ADAS, and panoramic sunroofs  ಇರುತ್ತೆ.. ಇದರ ಬೆಲೆ 25-30 ಲಕ್ಷ ಇರಬಹುದು.. 

New cars in 2026 (1)




ಮತ್ತೊಂದು ರಿಲೀಸ್​ ಮಹಿಂದ್ರಾ ವತಿಯಿಂದ ಅಂದ್ರೆ ಅದು Mahindra XUV 7XO... ಬಹುಶಃ ಈ ವರ್ಷದಲ್ಲಿ ಮೊಟ್ಟ ಮೊದಲು ಬರುವಂತಹ ಕಾರ್​ ಇದೇ ಇರಬೇಕು.. new lighting, grille, triple-screen setup, 6/7-seat options.. ಬೆಲೆ 15-25.5 ಲಕ್ಷ ವರೆಗೂ ಇರಬಹುದು.. 
ಸೆಡಾನ್​​​ನಲ್ಲಿ ಕ್ಲ್ಯಾಸಿ ಲುಕ್ಸ್​ ನೀಡುವಂತಹ ಸ್ಕೋಡ ತನ್ನ ಹೊಸ ಕಾರ್​ ರಿಲೀಸ್ ಮಾಡ್ತಾ ಇದೆ. Skoda Superb Next Gen- ಇದರಲ್ಲಿ ಮಸಾಜ್ ಸೀಟು ಮಾದರಿಯ ಲಕ್ಷುರಿ ಫೀಚರ್ ಗಳು  ಇರಲಿವೆ. 

Nissan Gravite 
ಈಗ ಲಕ್ಷುರಿ ಬ್ರ್ಯಾಂಡ್​​ಗಳು 2026 ಕ್ಕೆ ಯಾವೆಲ್ಲಾ ಕಾರ್​​ಗಳನ್ನು ಪರಿಚಯಿಸೋಕೆ ಹೊರಟಿದೆ ಅಂತ ನೋಡೋಣ 
BMW 3-Series / BMW i3: ಐಕಾನಿಕ್ 3-ಸೀರೀಸ್ ಸಂಪೂರ್ಣ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ಬರಲಿದ್ದು, ಇದರೊಂದಿಗೆ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯಾದ 'i3' ಕೂಡ ಬಿಡುಗಡೆಯಾಗಲಿದೆ. 1 cr-1.1 ಕೋಟಿ ರೂಪಾಯಿ. 
Mercedes-Benz CLA EV: ಮರ್ಸಿಡಿಸ್ ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಸೆಡಾನ್ ಅತ್ಯಾಧುನಿಕ ಡಿಜಿಟಲ್ ಇಂಟೀರಿಯರ್ ಅನ್ನು ಹೊಂದಿರಲಿದೆ. ಬೆಲೆ 60-65 ಲಕ್ಷ ರೂಪಾಯಿ. 
Lamborghini Temerario (ಲಂಬೋರ್ಗಿನಿ ಟೆಮೆರಾರಿಯೊ): ಹುರಾಕನ್ (Huracán) ಮಾದರಿಯ ಬದಲಿಗೆ ಇದು ಬರಲಿದ್ದು, ಟ್ವಿನ್-ಟರ್ಬೊ V8 ಎಂಜಿನ್ ಹೊಂದಿರಲಿದೆ. ಇದರ ವಿತರಣೆಯು 2026ರ ಆರಂಭದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. 6 ಕೋಟಿ ರೂಪಾಯಿವರೆಗೂ ಇದರ ಬೆಲೆ ಇರಬಹುದು ಅಂತ ಅಂದಾಜು ಮಾಡಲಾಗುತ್ತಿದೆ.. 
ಸೋ ಲಕ್ಷುರಿ ಬ್ರ್ಯಾಂಡ್​ ಆಗಿರಲಿ ಅಥವಾ ಫ್ಯಾಮಿಲಿ ಕಂಫರ್ಟ್​ ಹಾಗೂ ಕಾಮನ್ ಮ್ಯಾನ್ ಬ್ರ್ಯಾಂಡ್​​.. ಒಂದು ಕುಟುಂಬ ಅಂದಮೇಲೆ ಒಟ್ಟಿಗೆ ಹೋಗೋಕೆ ಒಂದು ಕಾರ್​ ಬೇಕೇ ಬೇಕಲ್ವಾ? ಹಾಗಾಗಿ ನಿಮ್ಮ ಕನಸಿನ ಕಾರ್​​ ಖರೀದಿಗೆ ಈ ಹೊಸ ವರ್ಷ ರೆಡಿಯಾಗಿ.. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

NEW CARS IN 2026
Advertisment