/newsfirstlive-kannada/media/media_files/2025/11/24/doctor-rohini-suicide-2025-11-24-12-06-52.jpg)
ಅಮೆರಿಕಾದ ವೀಸಾ ಸಿಗದೇ ಖಿನ್ನತೆಯಿಂದ ವೈದ್ಯೆ ಆತ್ಮಹತ್ಯೆ
ಅಮೆರಿಕಾದ ವೀಸಾ ಸಿಗಲಿಲ್ಲ ಎಂದ ನೊಂದ ವೈದ್ಯೆಯೊಬ್ಬರು ಹೈದರಾಬಾದ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರದ ಗುಂಟೂರು ಜಿಲ್ಲೆಯ ರೋಹಿಣಿ ಎಂಬ ವೈದ್ಯೆ ಅಮೆರಿಕಾದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ವೀಸಾ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ನೊಂದಿದ್ದರು. ಖಿನ್ನತೆಗೊಳಗಾಗಿದ್ದರು. ಹೈದರಾಬಾದ್ ನ ಪದ್ಮರಾವ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ಕೆಲಸದ ಮಹಿಳೆ ಬೆಳಿಗ್ಗೆ ಬಂದು ಪ್ಲ್ಯಾಟ್ ಬೆಲ್ ಮಾಡಿದಾಗ, ಮನೆ ಬಾಗಿಲು ತೆರೆದಿಲ್ಲ. ಆಗ ಮನೆ ಕೆಲಸದ ಮಹಿಳೆಯ ವೈದ್ಯೆಯ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಕುಟುಂಬ ಸದಸ್ಯರು ಬಂದು ನೋಡಿದಾಗ, ವೈದ್ಯೆಯಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಕೊನೆಗೆ ಪ್ಲ್ಯಾಟ್ ನ ಡೋರ್ ಒಡೆದು ಒಳ ಹೋಗಿ ನೋಡಿದಾಗ, ವೈದ್ಯೆ ರೋಹಿಣಿ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ.
ನವಂಬರ್ 21 ರಂದೇ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ನುಂಗಿರಬಹುದು ಇಲ್ಲವೇ ಸಾವನ್ನಪ್ಪಲು ಯಾವುದಾದರೂ ಇಂಜೆಕ್ಷನ್ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೇ, ಸಾವಿಗೆ ನಿಖರ ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ವರದಿಯ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ.
ವೈದ್ಯೆಯ ಪ್ಲ್ಯಾಟ್ ನಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ . ಡೆತ್ ನೋಟ್ ನಲ್ಲಿ ವೈದ್ಯೆ ಖಿನ್ನತೆಯಿಂದ ಬಳಲುತ್ತಿರುವುದು ಉಲ್ಲೇಖವಾಗಿದೆ. ಜೊತೆಗೆ ವೀಸಾ ಅರ್ಜಿ ತಿರಸ್ಕಾರವೂ ಪ್ರಸ್ತಾಪವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶವದ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
/filters:format(webp)/newsfirstlive-kannada/media/media_files/2025/11/24/doctor-rohini-suicide02-2025-11-24-12-11-01.jpg)
ವೈದ್ಯೆಯ ತಾಯಿ ಲಕ್ಷ್ಮಿ, ತಮ್ಮ ಮಗಳು ರೋಹಿಣಿ ಅಮೆರಿಕಾಕ್ಕೆ ಹೋಗಲು ಕಾತರದಿಂದ ಕಾಯುತ್ತಿದ್ದರು. ಆದರೇ, ವೀಸಾ ಅರ್ಜಿ ತಿರಸ್ಕಾರದಿಂದ ನೊಂದಿದ್ದರು ಎಂದು ಹೇಳಿದ್ದಾರೆ. 2005 ರಲ್ಲಿ ಕಜಕಿಸ್ತಾನದಲ್ಲಿ ತಮ್ಮ ಮಗಳು ಎಂಬಿಬಿಎಸ್ ಪದವಿ ಪಡೆದಿದ್ದರು. ಭಾರತದಲ್ಲೇ ವೈದ್ಯ ವೃತ್ತಿ ನಡೆಸುವಂತೆ ಮಗಳಿಗೆ ತಾಯಿ ಲಕ್ಷ್ಮಿ ಹೇಳಿದ್ದಾರಂತೆ. ಆದರೇ, ಅಮೆರಿಕಾದಲ್ಲಿ ವೈದ್ಯರಿಗೆ ಉತ್ತಮ ಕೆಲಸದ ವಾತಾವರಣ ಇರುತ್ತೆ. ದಿನದಲ್ಲೇ ಕೆಲವೇ ಕೆಲವು ರೋಗಿಗಳನ್ನು ಮಾತ್ರ ಪರೀಕ್ಷಿಸಬಹುದು. ಭಾರತಕ್ಕಿಂತ ಹೆಚ್ಚಿನ ಹಣವನ್ನ ಅಮೆರಿಕಾದಲ್ಲಿ ಗಳಿಸಬಹುದು ಎಂದು ಮಗಳು ರೋಹಿಣಿ ಅಮೆರಿಕಾಕ್ಕೆ ಉದ್ಯೋಗಕ್ಕಾಗಿ ಹೋಗಲು ಬಯಸಿದ್ದರಂತೆ. ಅಮೆರಿಕಾದಲ್ಲಿ ಸ್ವಂತ ಕ್ಲಿನಿಕ್ ತೆರೆಯುವ ಆಸೆ, ಕನಸು ವೈದ್ಯೆ ರೋಹಿಣಿಗೆ ಇತ್ತು. ಆದರೇ, ವೀಸಾ ಅರ್ಜಿ ತಿರಸ್ಕಾರದಿಂದ ಆ ಕನಸುಗಳೆಲ್ಲಾ ಕಮರಿ ಹೋಗಿದ್ದವು. ಅಮೆರಿಕಾದ ಕನಸು ನನಸಾಗದೇ ನೊಂದು ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈದ್ಯೆ ರೋಹಿಣಿ ಮದುವೆಯಾಗಿರಲಿಲ್ಲ. ಸಂಪೂರ್ಣ ಗಮನವನ್ನು ಕೆರಿಯರ್ ಬೆಳವಣಿಗೆಯತ್ತ ಕೇಂದ್ರೀಕರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us