/newsfirstlive-kannada/media/media_files/2025/11/11/dr-umar-mohammad-delhi-incident-2025-11-11-09-15-10.jpg)
ಉಮರ್ ಮಹ್ಮದ್ Photograph: (ಶಂಕಿತ ದಾಳಿಕೋರ)
/newsfirstlive-kannada/media/media_files/2025/11/11/dr-umar-mohammad-delhi-incident-2025-11-11-09-15-10.jpg)
ದೆಹಲಿಯಲ್ಲಿ ನಿನ್ನೆ ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿ ಓರ್ವ ಶಂಕಿತನ ಫೋಟೋ ರಿಲೀಸ್ ಆಗಿದೆ. ಶಂಕಿತ ವ್ಯಕ್ತಿ ಆತ್ಮಾ*ತಿ ದಾಳಿಕೋರ ಎನ್ನಲಾಗಿದೆ.
/newsfirstlive-kannada/media/media_files/2025/11/11/dr-umar-mohammad-delhi-incident-2-2025-11-11-09-15-46.jpg)
ಹೆಸರು ಏನು..?
ಡಾಕ್ಟರ್ ಉಮರ್ ಮೊಹ್ಮದ್ (Dr Umar Mohammad) ವಿಧ್ವಂಸಕ ಕೃತ್ಯದ ಶಂಕಿತ ವ್ಯಕ್ತಿ ಎನ್ನಲಾಗಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಸ್ಫೋ*ಗೊಂಡ ಕಾರಿನ ಮಾಲೀಕ ಈತ. ಈ ಉಮರ್ ಮೊಹ್ಮದ್, ಆತ್ಮಾ*ತಿ ದಾಳಿಕೋರನಾಗಿ ಬಂದು ಕೃತ್ಯ ನಡೆಸಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
/newsfirstlive-kannada/media/media_files/2025/11/11/dr-umar-mohammad-delhi-incident-3-2025-11-11-09-16-04.jpg)
ಸದ್ಯ ಈತನ ಫೋಟೋವನ್ನು ತನಿಖಾಧಿಖಾರಿಗಳು ರಿಲೀಸ್ ಮಾಡಿದ್ದಾರೆ. ಕೃತ್ಯಕ್ಕೂ ಮೊದಲು Hyundai i20 ಕಾರಿನಲ್ಲಿ ಇರುವ ಕೆಲವು ಸಿಸಿಟಿವಿ ದೃಶ್ಯಗಳು ಕೂಡ ಲಭ್ಯವಾಗಿದೆ.
/newsfirstlive-kannada/media/media_files/2025/11/11/dr-umar-mohammad-delhi-incident-1-2025-11-11-09-16-16.jpg)
ಇನ್ನು ನಿನ್ನೆ ನಡೆದ ಕೃತ್ಯದಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭವಾಗಿದೆ.
/newsfirstlive-kannada/media/media_files/2025/11/11/delhi-incident-1-2025-11-11-07-24-28.jpg)
ಕಾರಿನ ಮೂಲ ಮಾಲೀಕ ಅರೆಸ್ಟ್
ಈ ಸ್ಫೋ* ಸಂಭವಿಸಿರುವ ಕಾರಿನ ಮಾಹಿತಿಯನ್ನೈ ಈಗಾಗಲೇ ಪೊಲೀಸರು ಪತ್ತೆ ಮಾಡಿದ್ದು ಅದು ಹರ್ಯಾಣದ ನೋಂದಣಿ ಫಲಕ ಹೊಂದಿದ್ದ ಹುಂಡೈ i20 ಕಾರು ಅನ್ನೋದು ಪತ್ತೆ ಹಚ್ಚಲಾಗಿದೆ. HR 26 CE 7674 ನಂಬರ್ ಪ್ಲೇಟ್ ಹೊಂದಿರುವ i20, ಕಾರಿನ ಮೂಲ ಮಾಲೀಕನನ್ನ ಬಂಧಿಸಲಾಗಿದೆ. ಮೊಹಮ್ಮದ್ ಸಲ್ಮಾನ್ ಬಂಧಿತ ವ್ಯಕ್ತಿ. ಈತ ಈ ಕಾರಿನ ಮೂಲ ಮಾಲೀಕ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us