/newsfirstlive-kannada/media/media_files/2026/01/03/bus-2026-01-03-07-48-52.jpg)
ತೆಲಂಗಾಣದ ಖಮ್ಮಂ (khammam) ಜಿಲ್ಲೆಯ ಪೆನುಬಳ್ಳಿ ಮಂಡಲದ ಗಣೇಶಪಾಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 100 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕಾಲುವೆಗೆ ಉರುಳಿದೆ.
ಮದ್ದುಲಗುಡೆಮ್ (ವೆಮ್ಸೂರ್ ಮಂಡಲ) ದ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಹೊರಟಿದ್ದ ಶಾಲಾ ಬಸ್ ಶುಕ್ರವಾರ ನಿನ್ನೆ ಸಂಜೆ ಅಪಘಾತಕ್ಕೆ ಒಳಗಾಗಿದೆ. ಸ್ಕೂಲ್ ಮುಗಿದ ಬಳಿಕ ಗಣೇಶಪಾಡು, ಎಲ್.ಎಸ್. ಬಂಜಾರ್, ಕೆ.ಎಂ. ಬಂಜಾರ್, ಮರ್ಲಕುಂಟ ಮತ್ತು ಮುತ್ತುಗುಡೆಮ್ ನಿಂದ ವಿದ್ಯಾರ್ಥಿಗಳು ಬಸ್ಸಿನ ಮೂಲಕ ಮನೆಗಳಿಗೆ ತೆರಳುತ್ತಿದ್ದರು. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಗಣೇಶಪಡು ಗ್ರಾಮದ ಹೊರವಲಯಕ್ಕೆ ಬಸ್ಸು ಬರುವಾಗ ಕಾಲುವೆಗೆ ಉರುಳಿದೆ.
ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ. ಅಪಘಾತದಲ್ಲಿ ಸುಮಾರು 40 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ಅತಿ ವೇಗವಾಗಿ ಬಸ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಬಸ್ಸು ಕಾಲುವೆಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಮತ್ತು ವಿದ್ಯಾರ್ಥಿಗಳ ಪೋಷಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಪೆನುಬಳ್ಳಿ ಮತ್ತು ತಿರುವೂರ್ ​​(ಎನ್‌ಟಿಆರ್ ಜಿಲ್ಲೆ, ಆಂಧ್ರಪ್ರದೇಶ) ದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಪ್ರಾಜೆಕ್ಟ್ ಚೀತಾಗೆ ಭಾರತದಲ್ಲಿ ಯಶಸ್ಸು! ಭಾರತದಲ್ಲಿ ಹುಟ್ಟಿದ್ದ 19 ಚೀತಾಗಳು, ಒಟ್ಟಾರೆ 30 ಚೀತಾಗಳ ಆವಾಸಸ್ಥಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us