Advertisment

ಕುಡಿತದ ತುಡು.. ತಿರುಪತಿ ಗೋವಿಂದರಾಜಸ್ವಾಮಿಯ ಗೋಪುರ ಏರಿ ಕ್ವಾರ್ಟರ್ ಕೇಳಿದ ಕುಡುಕ..! ಮುಂದೆ..?

ತಿರು ಅಂದ್ರೆ ಪವಿತ್ರ.. ಪತಿ ಅಂದ್ರೆ ನಿವಾಸ.. ತಿರುಪತಿ ಭೂವೈಕುಂಠ.. ಈ ಪವಿತ್ರನಿವಾಸದಲ್ಲಿ ಕಂಠ ಪೂರ್ತಿ ಕುಡಿದು ಬಂದ ಕುಡುಕನೊಬ್ಬ ಕುಚೇಷ್ಟೆ ಮಾಡಿದ್ದಾನೆ. ತಿಮ್ಮಪ್ಪನ ಹೃದಯ ಭಾಗದ ಮೇಲೇರಿದವನ ಹುಚ್ಚಾಟಕ್ಕೆ ಬ್ರೇಕ್​ ಬೀಳೋವಷ್ಟರಲ್ಲಿ ಸಾಕ್​ ಸಾಕ್​ ಆಗೋಯ್ತು..

author-image
Ganesh Kerekuli
Tirupati Govindaraja temple (1)
Advertisment

ತಿರು ಅಂದ್ರೆ ಪವಿತ್ರ.. ಪತಿ ಅಂದ್ರೆ ನಿವಾಸ.. ತಿರುಪತಿ ಭೂವೈಕುಂಠ.. ಈ ಪವಿತ್ರನಿವಾಸದಲ್ಲಿ ಕಂಠ ಪೂರ್ತಿ ಕುಡಿದು ಬಂದ ಕುಡುಕನೊಬ್ಬ ಕುಚೇಷ್ಟೆ ಮಾಡಿದ್ದಾನೆ. ತಿಮ್ಮಪ್ಪನ ಹೃದಯ ಭಾಗದ ಮೇಲೇರಿದವನ ಹುಚ್ಚಾಟಕ್ಕೆ ಬ್ರೇಕ್​ ಬೀಳೋವಷ್ಟರಲ್ಲಿ ಸಾಕ್​ ಸಾಕ್​ ಆಗೋಯ್ತು..

Advertisment

ದೇಶದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ.. ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನ ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ. ಸಾಲದೂ ಅಂತ ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದ.

ಇದನ್ನೂ ಓದಿ: ವೆನಿಜುವೆಲಾ ಮೇಲೆ ಅಮೆರಿಕಾ ದಾಳಿ: ಅಧ್ಯಕ್ಷ ನಿಕೋಲಸ್ ಮಡುರೋ, ಪತ್ನಿ ಹೊತ್ತೊಯ್ದ ಅಮೆರಿಕಾ

Tirupati Govindaraja temple

ಮದ್ಯದ ಅಮಲಲ್ಲಿ ವ್ಯಕ್ತಿಯೊಬ್ಬ ಗೋವಿಂದರಾಜ ದೇವಸ್ಥಾನದ ಗೋಪುರ ಏರಿ ಕಿರಿಕ್‌ ಮಾಡಿದ ಘಟನೆ ತಡರಾತ್ರಿ ನಡೆದಿದೆ. ಭಕ್ತರಂತೆ ದೇವಸ್ಥಾನವನ್ನ ಪ್ರವೇಶ ಮಾಡಿದ್ದ ಈತ ಟೆಂಟ್ ಕಂಬ್‌ಗಳನ್ನ ಹತ್ತಿ ನೇರವಾಗಿ ಗರ್ಭಗುಡಿಯ ಮೇಲಿರೋ ಗೋಪುರವನ್ನ ಏರಿದ್ದ. ಗೋಪುರದ ಮೇಲಿರೋ ಕಲಶದ ಜಾಗವನ್ನ ತಲುಪಿ ಮದ್ಯ ಕೊಡುವಂತೆ ವಿಚಿತ್ರ ಬೇಡಿಕೆ ಇಟ್ಟಿದ್ದ.

Advertisment

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದ್ರು.. ನೀ ಕೊಡೆ.. ನಾ ಬಿಡೆ.. ಅನ್ನೋದ್ರಲ್ಲೇ ಸುಮಾರು ಮೂರು ಗಂಟೆ ಕಾಲ ಕಳೆದೋಗಿತ್ತು.. ಗೋಪುರದಿಂದ ಕೆಳಗೆ ಇಳಿಯುವಂತೆ ಎಷ್ಟು ಮನವೊಲಿಸಿದ್ರು ನೋ ಯ್ಯೂಸ್​.. ಕ್ವಾರ್ಟರ್​ ಬಾಟಲ್​ ಕೊಡಿ ಆಮೇಲಿ ಇಳೀತೀನಿ ಎಂದಿದ್ದ. ಪೊಲೀಸರು ಆತನಿಗೆ ನೀನು ಕೆಳಗಿಳಿದು ಬಾ ಎಣ್ಣೆ ಕೊಡುಸ್ತೀನಿ ಅಂತ ಭರವಸೆ ನೀಡಿದ ಮೇಲೆ ಅಣ್ಣ ಕೆಳಗೆ ಇಳಿದಿದ್ದ. ಕಬ್ಬಿಣದ ಏಣಿಗಳ ಸಹಾಯದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ನಿಜಾಮಾಬಾದ್​ನ ಪೆದ್ದಮಲ್ಲ ರೆಡ್ಡಿ ಕಾಲೋನಿಯ ಕುರ್ಮಾ ವಾಡಾದ ನಿವಾಸಿ ಕುಟ್ಟಡಿ ತಿರುಪತಿ, ಕಿರಿಕ್‌ ಮಾಡಿದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಟಿಟಿಡಿ ನಿರ್ಲಕ್ಷ್ಯ.. ಇದು ಸಿಎಂ ಚಂದ್ರಬಾಬು ನಾಯ್ಡು ಬೇಜವಾಬ್ದಾರಿ.. ಭದ್ರತಾ ಲೋಕ ಅನ್ನೋದು ವಿಪಕ್ಷಗಳ ಆರೋಪ. 

ಇದನ್ನೂ ಓದಿ: ಶಮಿ ಮತ್ತೆ ಕಡೆಗಣನೆ.. ಅಯ್ಯರ್​ ಆಯ್ಕೆ ಆಗಿದ್ದರೂ ಆಡೋದು ಡೌಟ್.. BCCI ಹೇಳಿದ್ದೇನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sri Govindarajaswamy Temple
Advertisment
Advertisment
Advertisment