/newsfirstlive-kannada/media/media_files/2025/10/30/modi-and-rahul-gandhi-2025-10-30-18-20-56.jpg)
ಬಿಹಾರದ ಮತಯುದ್ಧದ ಮೊದಲ ಹಂತದ ಕದನಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಬಿಹಾರವನ್ನು ಗೆಲ್ಲಲ್ಲೂ ಎರಡೂ ಮೈತ್ರಿಕೂಟಗಳು ತಂತ್ರ-ರಣತಂತ್ರಗಳ ಮೂಲಕ ಅಖಾಡದಲ್ಲಿ ಆರ್ಭಟಿಸುತ್ತಿವೆ. ಕೊನೆಗೆ ಬಿಹಾರದ ರಣರಂಗಕ್ಕೆ ಇಳಿದ ಕಾಂಗ್ರೆಸ್​ ಯುವರಾಜ.. ಮೊದಲ ದಿನವೇ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ರು. ಇದರಕ್ಕೆ ಪ್ರಧಾನಿ ಕೂಡ ಭರ್ಜರಿಯಾಗೇ ಕೌಂಟರ್​ ಕೊಟ್ಟಿದ್ದು, ಬಿಹಾರ ವಾರ್​​ ರಂಗೇರಿದೆ.
ಬಿಹಾರ ಮತ ಕದನದಲ್ಲಿ ತಾರಕಕ್ಕೇರಿದ ಮಾತಿನ ಸಮರ
ರಾಹುಲ್​ ಗಾಂಧಿ ಏಟು.. ಪ್ರಧಾನಿ ಮೋದಿ ತಿರುಗೇಟು
ಜಂಗಲ್​ ರಾಜ್​ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರದಲ್ಲಿ ಮತ ಸಂಗ್ರಮ ರಂಗೇರಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎನ್​ಡಿಎ.. ಐಎನ್​ಡಿ ಮೈತ್ರಿಕೂಟಗಳು ರಣರಂಗದಲ್ಲಿ ಮದವೇರಿದ ಮದ್ದಾನೆಗಳಂತೆ ಗೀಳಿಡುತ್ತ.. ಆರ್ಭಟಿಸುತ್ತಿವೆ.. ಇಷ್ಟು ದಿನ ಬಿಹಾರದ ಅಖಾಡದಿಂದ ದೂರ ಉಳಿದಿದ್ದ ಕಾಂಗ್ರೆಸ್​ ಯುವರಾಜ.. ಕೊನೆಗೂ ಅಖಾಡಕ್ಕೆ ಇಳಿದು.. ಪ್ರಧಾನಿ ಮೋದಿ ವಿರುದ್ಧ ಬಾಣ-ಬಿರುಸುಗಳ ಮಾತಿನ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರಧಾನಿ ಕೂಡ ತಮ್ಮದೇ ಸ್ಟೈಲ್​​ನಲ್ಲಿ ಕೌಂಟರ್​ ಕೊಟ್ಟು ಕಾಲೆಳೆದಿದ್ದಾರೆ.
/filters:format(webp)/newsfirstlive-kannada/media/media_files/2025/10/30/modi-and-rahul-gandhi-02-2025-10-30-18-23-59.jpg)
ಬಿಹಾರದ ಮತ ಯುದ್ಧಕ್ಕೆ ಪಾಂಚಜನ್ಯ ಮೊಳಗಿದ್ರೂ.. ರಾಹುಲ್​ ಗಾಂಧಿ ಮಾತ್ರ ಅಖಾಡದಿಂದ ದೂರ ಉಳಿದಿದ್ರು.. ಆದ್ರೆ ನಿನ್ನೆ ದಿಢೀರ್​​ ಬಿಹಾರದ ಮತಯುದ್ಧ ಭೂಮಿಗೆ ಧುಮುಕಿದ ಕಾಂಗ್ರೆಸ್​ ಯುವರಾಜ.. ಅಬ್ಬರದ ಪ್ರಚಾರ ನಡೆಸಿದ್ರು.. ಮುಜಾಫರ್‌ಪುರದಲ್ಲಿ ಜಂಟಿ ಱಲಿ ನಡೆಸಿ, ಪ್ರಧಾನಿ ಮೋದಿ ವಿರುದ್ಧ ವಾಚಾಮಗೋಚರ ವಾಗ್ದಾಳಿ ನಡೆಸಿದ್ರು. ಮೋದಿ ಅವರು ಚುನಾವಣೆ ಗೆಲ್ಲಲು ಏನನ್ನ ಬೇಕಾದರೂ ಮಾಡುತ್ತಾರೆ.. ಮತದಾರರು ಹೇಳಿದ್ರೆ ವೇದಿಕೆ ಮೇಲೆ ಡ್ಯಾನ್​​ ಕೂಡ ಮಾಡ್ತಾರೆಂದು ನಾಲಿಗೆ ಹರಿಬಿಟ್ಟಿದ್ರು..
ನರೇಂದ್ರ ಮೋದಿಯವರು ವೋಟಿಗಾಗಿ ನಾಟಕವನ್ನ ಬೇಕಿದ್ರೂ ಮಾಡ್ತಾರೆ. ನೀವು ಏನನ್ನ ಮಾಡಬೇಕು ಅಂತ ಬಯಸುತ್ತೀರೋ ಅದನ್ನ ಮಾಡ್ತಾರೆ. ನಾನು ಹೇಳುತ್ತಿದ್ದೇನೆ.. ಬೇಕಾದ್ರೆ ನೀವು ಹೇಳಿ ನೋಡಿ. ನಾವು ನಿಮಗೆ ಮತಹಾಕುತ್ತೇವೆ ನೀವು ವೇದಿಕೆ ಮೇಲೆ ಬಂದು ನೃತ್ಯವನ್ನ ಮಾಡಿ ಅಂತ ಹೇಳಿ.. ಅವರು ನೃತ್ಯವನ್ನ ಬೇಕಾದ್ರೂ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭ್ರಷ್ಟ ಪರಿವಾರದ ಯುವರಾಜರು.. ತೇಜಸ್ವಿ, ರಾಹುಲ್​ಗೆ ಮೋದಿ ಟಕ್ಕರ್​​
ರಾಹುಲ್​ ಗಾಂಧಿ ಬೆನ್ನಲ್ಲೇ.. ಪ್ರಧಾನಿ ಮೋದಿ ಕೂಡ ಮುಜಾಫರ್‌ಪುರದಲ್ಲಿ ಭರ್ಜರಿ ಚುನಾವಣಾ ಱಲಿ ನಡೆಸಿ, ಮತಬೇಟೆಯಾಡಿದ್ರು.. ಬಳಿಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರನ್ನು ಗುರಿಯಾಗಿಸಿಕೊಂಡು ಮೋದಿ ಅಬ್ಬರಿಸಿದ್ರು.. ಅವರಿಬ್ಬರನ್ನು ಭ್ರಷ್ಟಾಚಾರದ ಯುವರಾಜರು ಎಂದು ಟೀಕಿಸಿದ್ರು.. ನನ್ನ ಹೆಸರು ಜಪಿಸದಿದ್ದರೆ ಅವರಿಗೆ ಊಟ ಜೀರ್ಣವಾಗುವುದಿಲ್ಲ ಎಂದು ಲೇವಡಿ ಮಾಡಿದ್ರು.
ತಮ್ಮನ್ನು ತಾವು ಯುವರಾಜ್ ಎಂದು ಪರಿಗಣಿಸುವ ಯುವರಾಜರ ಜೋಡಿ ಸುಳ್ಳು ಭರವಸೆಗಳ ಅಂಗಡಿಗಳನ್ನು ತೆರೆದಿದ್ದಾರೆ. ಒಬ್ಬರು ಭಾರತದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜನಾದರೆ ಇನ್ನೊಬ್ಬರು ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದ ಯುವರಾಜ.. ಅವರಿಬ್ಬರೂ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಒಟ್ಟಾರೆ.. ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿದ್ದು, ಎನ್​ಡಿಎ ಮತ್ತು ಇಂಡಿ ಮೈತ್ರಿಕೂಟ.. ಮತದಾರರ ಮನಗೆಲ್ಲಲು ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಿರೋದು ಮಾತ್ರ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us