/newsfirstlive-kannada/media/media_files/2025/11/14/rahul-gandhi-and-tejaswi-yadav-2025-11-14-14-35-45.jpg)
ಬಿಹಾರ ವಿಧಾನಸಭೆ ಚುನಾವಣೆಯ ಸ್ಪಷ್ಟ ಫಲಿತಾಂಶ ಬಹುತೇಕ ಪ್ರಕಟವಾದಂತಿದೆ. ಎನ್​ಡಿಎ ಒಕ್ಕೂಟ ಬರೋಬ್ಬರಿ 199 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್​ಗೆ ಭಾರೀ ಮುಖಭಂಗ ಆಗಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿಯಲ್ಲಿ ಎಂಜಿಬಿ ಕೇವಲ 38 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 122. ಈಗಾಗಲೇ ಎನ್​ಡಿಎಗೆ ಅಭೂತಪೂರ್ವ ಗೆಲುವು ಸಿಕ್ಕಿರೋದ್ರಿಂದ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ.
ಮಹಾಘಟಬಂಧನ್ ಸೋಲಿಗೆ ಕಾರಣಗಳೇನು..?
- ಬಿಹಾರದಲ್ಲಿ ದುರ್ಬಲವಾಗಿದ್ದ ಕಾಂಗ್ರೆಸ್​ಗೆ 61 ಕ್ಷೇತ್ರ ನೀಡಿದ್ದು ಮಹಾಘಟಬಂಧನ್ ಸೋಲಿಗೆ ಕಾರಣ
- ಪ್ರತಿ ಮನೆಗೊಂದು ಸರ್ಕಾರಿ ನೌಕರಿ ನೀಡುವ ಭರವಸೆ ಜನರನ್ನು ಸೆಳೆಯಲು ವಿಫಲವಾಯಿತು
- 87 ಕ್ಷೇತ್ರಗಳಲ್ಲಿ ಶೇ.25 ರಷ್ಟು ಮುಸ್ಲಿಂ ಮತದಾರರಿದ್ದರೂ, ಹೆಚ್ಚಿನ ಟಿಕೆಟ್ ಮುಸ್ಲಿಂರಿಗೆ ಆರ್‌ಜೆಡಿ ನೀಡಿರಲಿಲ್ಲ. ಮುಸ್ಲಿಂ ಸಮುದಾಯ ಪೂರ್ತಿಯಾಗಿ ಆರ್‌ಜೆಡಿ , ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಲಿಲ್ಲ.
- ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲೇ ಅಪ್ಪ- ಮಗನ ಕಿತ್ತಾಟವೂ ಪಕ್ಷದ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ. ತೇಜ್ ಪ್ರತಾಪ್ ಯಾದವ್ ಪಕ್ಷ, ಕುಟುಂಬದಿಂದ ದೂರ ಸರಿದು ಜನಶಕ್ತಿ ಜನತಾದಳ ಮೂಲಕ ಸ್ಪರ್ಧಿಸಿ ಆರ್‌ಜೆಡಿ ಮತಗಳನ್ನೇ ನುಂಗಿ ಹಾಕಿದ್ದಾರೆ.
- ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿಯು ವಿಪಕ್ಷಗಳ ಮತ ಬ್ಯಾಂಕ ಅನ್ನೇ ಇಬ್ಬಾಗಿಸಿದೆಯೇ ಹೊರತು ಆಡಳಿತ ಪಕ್ಷದ ಮತಬುಟ್ಟಿಗೆ ಕೈ ಹಾಕಿಲ್ಲ.
- ಅಸಾದುದ್ದೀನ್ ಓವೈಸಿ ಕಳೆದ ಚುನಾವಣೆಯಲ್ಲೂ ಆರ್‌ಜೆಡಿ, ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದರು. ಈ ಭಾರಿಯೂ ಆ ಕೆಲಸವನ್ನೇ ಓವೈಸಿ ಮುಂದುವರಿಸಿದ್ದಾರೆ.
- ಬಿಹಾರದಲ್ಲಿ ತೇಜಸ್ವಿ ಯಾದವ್ ಹೊರತುಪಡಿಸಿ, ಬೇರೆ ಪ್ರಬಲ ನಾಯಕರು ಆರ್‌ಜೆಡಿಯಲ್ಲಿ ಇಲ್ಲ. ಕಾಂಗ್ರೆಸ್ ಗೂ ತಳ
- ಸಮುದಾಯಗಳ ಬೆಂಬಲ ಗಳಿಸುವ ನಾಯಕರಿಲ್ಲ. ದಲಿತ ಸಮುದಾಯದ ಪ್ರಮುಖ ನಾಯಕರಿಲ್ಲ. ಇದರಿಂದಾಗಿ ಓಬಿಸಿ, ಇಬಿಸಿ ಬೆಂಬಲ ಗಳಿಸಲು ವಿಫಲ
- ನಿತೀಶ್ ಕುಮಾರ್ ಮಹಿಳೆಯರಿಗೆ 10 ಸಾವಿರ ನೀಡುವ ಭರವಸೆ ಕೊಟ್ಟು ಜಾರಿಗೊಳಿಸಿದ್ದರು. ಇದರಿಂದಾಗಿ ಮಹಾಘಟಬಂಧನ್​ಗೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವ ಭರವಸೆಯತ್ತ ಮಹಿಳೆಯರು ಒಲವು ತೋರಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us