/newsfirstlive-kannada/media/media_files/2025/11/10/delhi-redfort-car-blast-2025-11-10-19-39-38.jpg)
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಸ್ಪೋಟ ಸಂಭವಿಸಿದೆ. ಸ್ಪೋಟದ ಬಳಿಕ ಮೂರು ಕಾರ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಿದ್ದ ಕಾರ್ ನಲ್ಲಿ ಮೊದಲಿಗೆ ಸ್ಪೋಟ ಸಂಭವಿಸಿದೆ. ಬಳಿಕ ಉಳಿದ ಮೂರು ಕಾರ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸ್ಪೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಇಬ್ಬರು ಗಾಯಗೊಂಡಿದ್ದಾರೆ.
ಸಂಜೆ 6.45 ರಿಂದ 7 ಗಂಟೆ ಸಮಯದಲ್ಲಿ ಈ ಸ್ಪೋಟ ಸಂಭವಿಸಿದೆ. ತಕ್ಷಣವೇ ಆರೇಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿವೆ.
ದೆಹಲಿ ಪೊಲೀಸರು ಈ ಸ್ಪೋಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ.
ಕೆಂಪುಕೋಟೆ ಪ್ರದೇಶ ಸದಾ ಹೆಚ್ಚಿನ ಜನಜಂಗುಳಿಯಿಂದ ಕೂಡಿರುತ್ತೆ.
/filters:format(webp)/newsfirstlive-kannada/media/media_files/2025/11/10/delhi-redfort-car-blast02-2025-11-10-19-40-48.jpg)
ಕಳೆದ ನಾಲ್ಕು ದಿನಗಳಲ್ಲೇ ನಾಲ್ಕು ಮಂದಿಯನ್ನು ಫರಿದಾಬಾದ್ ಮತ್ತು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು ಜಮ್ಮು ಕಾಶ್ಮೀರ ಪೊಲೀಸರು 2,900 ಕೆಜಿ ಸ್ಪೋಟಕ ಸಾಮಗ್ರಿ ವಶಪಡಿಸಿಕೊಂಡಿದ್ದರು.
ಹೀಗಾಗಿ ದೆಹಲಿಯಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಸ್ಪೋಟಕ ಬಳಸಲಾಗಿದೆಯೇ? ಇಲ್ಲವೇ ಕಾರ್ ಸಿಎನ್‌ಜಿ ಸ್ಪೋಟದಿಂದ ಸ್ಪೋಟ ಸಂಭವಿಸಿದೆಯೇ, ಇದು ಭಯೋತ್ಪಾದನಾ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿ ನಿಖರ ಮಾಹಿತಿ ನೀಡಬೇಕಾಗಿದೆ.
/filters:format(webp)/newsfirstlive-kannada/media/media_files/2025/11/10/delhi-redfort-car-blast03-2025-11-10-19-41-30.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us