/newsfirstlive-kannada/media/media_files/2025/12/04/fancy-number-2025-12-04-12-33-59.jpg)
ಹರಿಯಾಣದಲ್ಲಿ ವಾಹನಗಳ ಫ್ಯಾನ್ಸಿ ನಂಬರ್​ಗಳಿಗೆ (Fancy Vehicle) ಭಾರೀ ಬೇಡಿಕೆ ಇದೆ. ಅಂತೆಯೇ HR 88 B 8888 ನಂಬರ್​ ಅನ್ನು ಅಲ್ಲಿನ ಸಾರಿಗೆ ಇಲಾಖೆ ಹರಾಜಿಗೆ ಇಟ್ಟಿತ್ತು.
ಸುಧೀರ್ ಕುಮಾರ್ (Sudhir Kumar) ಎಂಬಾತ ಬಿಡ್​​ನಲ್ಲಿ ಭಾಗಿಯಾಗಿ 1.17 ಕೋಟಿ ರೂಪಾಯಿಗೆ ಬಿಡ್ ಮಾಡಿದ್ದ. ಬಿಡ್​ ಮಾಡಿ ನಂಬರ್ ಪಡೆದಿದ್ದ ಸುಧೀರ್ ಕುಮಾರ್​, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ ಬಳಿಕ ಸಂಕಷ್ಟ ಎದುರಾಗಿದೆ.
ಕಾರಣ ಇಷ್ಟೇ, ಬಿಡ್ ಮಾಡಿದ 1.17 ಕೋಟಿ ರೂಪಾಯಿ ಹಣವನ್ನು ಸಾರಿಗೆ ಇಲಾಖೆಗೆ ಅವರು ಪಾವತಿಸಿಲ್ಲ. ಹೀಗಾಗಿ ಸಾರಿಗೆ ಇಲಾಖೆ ಬಿಡ್​ಗೂ ಮೊದಲು ಸುಧೀರ್ ಕುಮಾರ್ ಇಟ್ಟಿದ್ದ ಠೇವಣಿ ಮೊತ್ತ 11 ಸಾವಿರ ರೂಪಾಯಿ ಜಫ್ತಿ ಮಾಡಿದೆ. ಇದೀಗ ಯಾಕೆ 1.17 ಕೋಟಿ ರೂಪಾಯಿ ಹಣವನ್ನು ಕಟ್ಟಿಲ್ಲ ಎಂದು ಅಲ್ಲಿನ ಸಾರಿಗೆ ಇಲಾಖೆಯ ಸಚಿವರು ಪ್ರಶ್ನೆ ಮಾಡಿದ್ದಾರೆ.
ಇಲ್ಲಿ ಫ್ಯಾನ್ಸಿ ನಂಬರ್ ಬಿಡ್ ಮಾಡುವುದು ಕೆಲವರಿಗೆ ಹವ್ಯಾಸವಾಗಿದೆ. ಆದರೆ ಹಣ ಕಟ್ಟುತ್ತಿಲ್ಲ ಅನ್ನೋದು ಸಚಿವರ ಆರೋಪ. ಇದೀಗ ಸುಧೀರ್ ಕುಮಾರ್​ಗೆ ಸೇರಿದ ಆಸ್ತಿಪಾಸ್ತಿ, ಆದಾಯ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಸಚಿವ ಅನಿಲ್ ವಿಜ್ ( transport minister Anil Vij ) ಆದೇಶ ನೀಡಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸುಧೀರ್ ಕುಮಾರ್, ನಮ್ಮ ಮನೆಯಲ್ಲಿ ನಂಬರ್ ಪಡೆಯಬೇಕೇ ಬೇಡವೇ ಎಂದು ಚರ್ಚೆ ನಡೆಯಿತು. ತಾಂತ್ರಿಕ ಕಾರಣದಿಂದ ಹಣ ಪಾವತಿಸಲು ಆಗಿಲ್ಲ ಎಂದ ಸುಧೀರ್ ಕುಮಾರ್ ಹೇಳಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಮ್ಯಾಚ್! ಬಲಿಷ್ಠ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us