/newsfirstlive-kannada/media/media_files/2025/10/18/mp-flats-fire-2025-10-18-18-16-53.jpg)
ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಆಕಸ್ಮಿಕ
ದೆಹಲಿಯ ಹೃದಯ ಭಾಗದಲ್ಲಿರುವ ಬೀಸಂಬರ್ ದಾಸ್ ಮಾರ್ಗ್ ನಲ್ಲಿರುವ ಸಂಸದರ ಅಪಾರ್ಟ್ ಮೆಂಟ್ ನಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು . ಇದರಿಂದ ಸಂಸದರ ಪ್ಲ್ಯಾಟ್ ಗಳಲ್ಲಿ ಆತಂಕ ಮನೆ ಮಾಡಿತ್ತು. ಪ್ಲ್ಯಾಟ್ ಗಳಲ್ಲಿ ಇದ್ದ ಜನರನ್ನು ಸುರಕ್ಷಿತವಾಗಿ ತೆರವು ಮಾಡಲಾಗಿತ್ತು. ಬೆಂಕಿ ಅನಾಹುತದಿಂದ ಯಾರೊಬ್ಬರು ಗಾಯಗೊಂಡ ಬಗ್ಗೆ ಯಾವುದೇ ವರದಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ಸುದ್ದಿ ಗೊತ್ತಾಗುತ್ತಿದ್ದಂತೆ, ಅರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದವು.
ಬೀಸಂಬರ್ ದಾಸ್ ಮಾರ್ಗ್ ನಲ್ಲಿ ಕಾವೇರಿ, ನರ್ಮದಾ, ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ಗಳಿವೆ. ಈ ಅಪಾರ್ಟ್ ಮೆಂಟ್ ಗಳಲ್ಲಿರುವ ಪ್ಲ್ಯಾಟ್ ಗಳನ್ನು ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ. ಇಂದಿನ ಬೆಂಕಿ ಆಕಸ್ಮಿಕದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಪಾರ್ಟ್ ಮೆಂಟ್ ನ ತಳಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಆಕಸ್ಮಿಕಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬಿ.ಡಿ.ಮಾರ್ಗ್ ನಲ್ಲಿದ್ದ 80 ವರ್ಷದ ಹಳೆಯ 8 ಬಂಗಲೆಗಳನ್ನು ನೆಲಸಮಗೊಳಿಸಿ ಅವುಗಳ ಜಾಗದಲ್ಲಿ ಅಪಾರ್ಟ್ ಮೆಂಟ್ ಗಳನ್ನ ನಿರ್ಮಿಸಲಾಗಿದೆ. ಈ ಜಾಗದಲ್ಲಿ 76 ಪ್ಲ್ಯಾಟ್ ನಿರ್ಮಿಸಿ ಸಂಸದರಿಗೆ ವಾಸಕ್ಕಾಗಿ ನೀಡಲಾಗಿದೆ.
ಇಂದು ಮಧ್ಯಾಹ್ನ ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ಪಕ್ಕದಲ್ಲೇ ಕಾವೇರಿ, ನರ್ಮದಾ ಹೆಸರಿನ ಅಪಾರ್ಟ್ ಮೆಂಟ್ ಗಳೂ ಇವೆ.
ನಮ್ಮ ಕರ್ನಾಟಕದ ಲೋಕಸಭಾ, ರಾಜ್ಯಸಭಾ ಸದಸ್ಯರುಗಳಿಗೂ ಇದೇ ಕಾವೇರಿ, ನರ್ಮದಾ, ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ಗಳಲ್ಲೇ ಪ್ಲ್ಯಾಟ್ ನೀಡಲಾಗಿತ್ತು . ಮಾಜಿ ಸಂಸದ ಡಿ.ಕೆ.ಸುರೇಶ್, ಸುಮಲತಾ ಅಂಬರೀಷ್, ಹಾಲಿ ಲೋಕಸಭಾ ಸದಸ್ಯೆ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಆಯನೂರು ಮಂಜುನಾಥ್, ಕೆ.ಬಿ.ಶಾಣಯ್ಯ ಸೇರಿದಂತೆ ಅನೇಕರು ಇದೇ ಅಪಾರ್ಟ್ ಮೆಂಟ್ ಗಳಲ್ಲಿ ಸರ್ಕಾರದಿಂದ ಪ್ಲ್ಯಾಟ್ ಗಳನ್ನು ತಮ್ಮ ಸಂಸದರ ಅವಧಿಯಲ್ಲಿ ಪಡೆದು ವಾಸ ಇದ್ದರು.
ಇನ್ನೂ ಇಂದು ಬ್ರಹ್ಮಪುತ್ರ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ್ದ ಬೆಂಕಿ ಆಕಸ್ಮಿಕದ ವಿಡಿಯೋ ಲಿಂಕ್ ಇಲ್ಲಿದೆ ನೋಡಿ.
BREAKING NEWS 🚨 Massive Fire Erupts at Brahmaputra Building, Delhi Residence of MPs.
— Times Algebra (@TimesAlgebraIND) October 18, 2025
Flames engulf several MP's apartments.
The building is home to numerous Lok Sabha and Rajya Sabha MPs.
pic.twitter.com/jVpuMJQcrH
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.