/newsfirstlive-kannada/media/media_files/2025/11/21/gujarat-afo-murder-his-family-2025-11-21-12-35-54.jpg)
ಪತ್ನಿ , ಇಬ್ಬರು ಮಕ್ಕಳನ್ನು ಕೊಂದ ಅರಣ್ಯಾಧಿಕಾರಿ
ಗುಜರಾತ್‌ನಲ್ಲಿ ಪತಿಯೇ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತನ್ನ ಮನೆಯ ಬಳಿಯೇ ಹೂತು ಹಾಕಿದ್ದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಕಂಬಾಲಾ ಎಂಬ ಅಧಿಕಾರಿ ಅರಣ್ಯ ಇಲಾಖೆಯ ಓರ್ವ ಮಹಿಳಾ ಸಿಬ್ಬಂದಿಯ ಜೊತೆಗೆ ಅಫೇರ್ ಹೊಂದಿದ್ದ. ಆ ಮಹಿಳೆಗಾಗಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಶೈಲೇಶ್ ಕಂಬಾಲಾ ಕೊಂದಿದ್ದಾನೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ಶೈಲೇಶ್ ಕಂಬಾಲಾನ ಲವ್ವರ್ ಕೂಡ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾಳಾ ಇಲ್ಲವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಲವ್ವರ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಲವ್ವರ್ ಜೊತೆಗೆ ಶೈಲೇಶ್ ಕಂಬಾಲಾ ಕಳೆದ ನಾಲ್ಕು ವರ್ಷದಿಂದ ಅಫೇರ್ ಹೊಂದಿದ್ದ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಕಂಬಾಲಾ ಸೂರತ್ ನಲ್ಲಿ ವಾಸ ಇದ್ದರು. ಇತ್ತೀಚೆಗೆ ಭಾವನಗರ ಜಿಲ್ಲೆಗೆ ವರ್ಗಾವಣೆಯಾಗಿತ್ತು. ಶೈಲೇಶ್ ಗೆ 40 ವರ್ಷದ ಪತ್ನಿ ನಯನಾ, 13 ವರ್ಷದ ಮಗಳು ಪ್ರೀತಾ ಮತ್ತು 9 ವರ್ಷದ ಮಗ ಭವ್ಯಾ ಇದ್ದರು. ಹೆಂಡತಿ ಮತ್ತು ಮಕ್ಕಳು ರಜೆ ಸಮಯ ಕಳೆಯಲು ಭಾವನಗರಕ್ಕೆ ಹೋಗಿದ್ದರು. ಆದರೇ, ಭಾವನಗರಕ್ಕೆ ಹೋದ ಬಳಿಕ ಮಿಸ್ಸಿಂಗ್ ಆಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದ್ದರು.
ನವಂಬರ್ 5 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೊಲೀಸರನ್ನು ಸಂಪರ್ಕಿಸಿ, ತಮ್ಮ ಇಲಾಖೆಯ ಸೆಕ್ಯೂರಿಟಿ ಗಾರ್ಡ್ ಒಬ್ಬರು, ತನ್ನ ಹೆಂಡತಿ ಮತ್ತು ಮಕ್ಕಳು ಆಟೋ ರಿಕ್ಷಾದಲ್ಲಿ ಹೋಗಿದ್ದನ್ನು ನೋಡಿದ್ದಾರೆ. ಈ ವೇಳೆ ನಾನು ಡ್ಯೂಟಿಯಲ್ಲಿದ್ದೆ ಎಂದು ಹೇಳಿದ್ದರು. ಆದರೇ, ಸೆಕ್ಯೂರಿಟಿ ಗಾರ್ಡ್ ಆ ರೀತಿ ನಾನು ಶೈಲೇಶ್ ಕಂಬಾಲಾ ಅವರ ಪತ್ನಿ , ಮಕ್ಕಳು ಆಟೋದಲ್ಲಿ ಹೋಗಿದ್ದನ್ನು ನೋಡಿಲ್ಲ ಎಂದು ಹೇಳಿದ್ದರು.
ಹೀಗಾಗಿ ಪೊಲೀಸರಿಗೆ ಶೈಲೇಶ್ ಕಂಬಾಲಾನ ವಿಚಿತ್ರ ವರ್ತನೆ ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಜೊತೆಗೆ ತನ್ನ ಹೆಂಡತಿ ಮತ್ತು ಮಕ್ಕಳು ನಾಪತ್ತೆಯಾಗಿದ್ದರೂ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಇದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು.
ಪ್ರಾಥಮಿಕ ತನಿಖೆ ವೇಳೆ ಶೈಲೇಶ್ ಕಂಬಾಲಾ ಕಾಲ್ ರೆಕಾರ್ಡ್ಸ್ ತನಿಖೆ ಮಾಡಿದಾಗ, ಜ್ಯೂನಿಯರ್ ಅಧಿಕಾರಿ ಗಿರೀಶ್ ವಾನಿಯ ಜೊತೆ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಗಿರೀಶ್ ವಾನಿಯಾಗೆ ತನ್ನ ಮನೆಯ ಹಿಂಭಾಗ ಎರಡು ಗುಂಡಿ ತೆಗೆಯಲು ಶೈಲೇಶ್ ಕಂಬಾಲಾ ಹೇಳಿದ್ದಾರೆ. ನವಂಬರ್ 2 ರಂದು 2 ಗುಂಡಿ ತೆಗೆಯಲಾಗಿದೆ. ನಾಲ್ಕು ದಿನಗಳ ಬಳಿಕ ಗುಂಡಿ ಮುಚ್ಚಲು ಟ್ರಕ್ ಕಳಿಸುವಂತೆ ಶೈಲೇಶ್ ಕಂಬಾಲಾ , ಗಿರೀಶ ವಾನಿಯಾಗೆ ಹೇಳಿದ್ದಾರೆ. ಯಾವುದೋ ಪ್ರಾಣಿ ಗುಂಡಿಗೆ ಬಿದ್ದಿದೆ. ಅದನ್ನು ಮುಚ್ಚಬೇಕೆಂದು ಹೇಳಿದ್ದಾರೆ.
ಆದರೇ, ಈ 2 ಗುಂಡಿಗೆ ಪ್ರಾಣಿಯನ್ನು ಹಾಕಿ ಮುಚ್ಚಿರಲಿಲ್ಲ. ಬದಲಿಗೆ ತನ್ನ ಹೆಂಡತಿ ನಯನಾ ಮತ್ತು ಇಬ್ಬರು ಮಕ್ಕಳನ್ನು ಹಾಕಿ ಮಣ್ಣಿ ಮುಚ್ಚಿದ್ದ ಅರಣ್ಯ ಅಧಿಕಾರಿ ಶೈಲೇಶ್ ಕಂಬಾಲಾ ಎಂಬುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ನವಂಬರ್ 16 ರಂದು ಆ ಗುಂಡಿಗಳಿಂದ ಪತ್ನಿ ನಯನಾ ಹಾಗೂ ಇಬ್ಬರು ಮಕ್ಕಳ ಶವಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಬಳಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಕಂಬಾಲಾನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ಶೈಲೇಶ್ ಒಪ್ಪಿಕೊಂಡಿದ್ದಾನೆ. ಜೊತೆಗೆ ಈ ತ್ರಿವಳಿ ಕೊಲೆಯು ಪ್ರೀ ಪ್ಲ್ಯಾನ್ ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಹೆಂಡತಿಯ ಪೋನ್ ನಿಂದ ತನ್ನ ಪೋನ್ ಗೆ ಶೈಲೇಶ್ ನೇ ಮೇಸೇಜ್ ಕೂಡ ಕಳಿಸಿಕೊಂಡಿದ್ದ. ತಾನು ಬೇರೊಬ್ಬರ ಜೊತೆ ಮನೆ ಬಿಟ್ಟು ಹೋಗುತ್ತಿರುವುದಾಗಿ ಮೇಸೇಜ್ ಕಳಿಸಿಕೊಂಡಿದ್ದ. ಬಳಿಕ ಹೆಂಡತಿಯ ಪೋನ್ ಅನ್ನು ಪ್ಲೈಟ್ ಮೋಡ್ ಗೆ ಹಾಕಿದ್ದ.
ವೈವಾಹಿಕ ಸಂಬಂಧದಲ್ಲಿನ ಬಿಕ್ಕಟ್ಟು ಈ ತ್ರಿವಳಿ ಕೊಲೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಶೈಲೇಶ್ ಕಂಬಾಲಾ ಪತ್ನಿ ನಯನಾಗೆ, ಸೂರತ್ ನಲ್ಲಿ ಶೈಲೇಶ್ ತಂದೆ ತಾಯಿ ಜೊತೆ ಜೀವನ ನಡೆಸಲು ಇಷ್ಟ ಇರಲಿಲ್ಲ. ತಾನು ಕೂಡ ನಿಮ್ಮ ಜೊತೆ ಭಾವನಗರಕ್ಕೆ ಬರುತ್ತೇನೆ ಎಂದು ಹೇಳಿದ್ದಳು. ಆದರೇ, ಇದಕ್ಕೆ ಶೈಲೇಶ್ ವಿರೋಧ ವ್ಯಕ್ತಪಡಿಸಿದ್ದ. ಇದೇ ಕೊಲೆಗೆ ಕಾರಣ ಎಂದು ಹೇಳಿದ್ದಾನೆ. ಜೊತೆಗೆ ಶೈಲೇಶ್ ಗೆ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿ ಜೊತೆ ಅಫೇರ್ ಕೂಡ ಇತ್ತು. ಇದು ಕೂಡ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹೆಂಡತಿ ಮತ್ತು ಮಕ್ಕಳನ್ನು ಕೊಂದ ಶೈಲೇಶ್ ಕಂಬಾಲಾ ಈಗ ಜೈಲು ಪಾಲಾಗಿದ್ದಾನೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us