Advertisment

2 ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.2 ರಷ್ಟು ಬೆಳವಣಿಗೆ: ಕಳೆದ 6 ತ್ರೈಮಾಸಿಕದಲ್ಲೇ ಅತ್ಯಧಿಕ ಬೆಳವಣಿಗೆ!

ಭಾರತದ ಜಿಡಿಪಿಯು 2ನೇ ತ್ರೈಮಾಸಿಕದಲ್ಲಿ ಶೇ.8.2 ರಷ್ಟು ಬೆಳವಣಿಗೆ ಸಾಧಿಸಿದೆ. ಇದು ಕಳೆದ 6 ತ್ರೈಮಾಸಿಕದಲ್ಲಿ ಅತ್ಯಧಿಕ ಬೆಳವಣಿಗೆಯಾಗಿದೆ. 2025-26ರ ಮೊದಲ ತ್ರೈಮಾಸಿಕಕ್ಕಿಂತ 2ನೇ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆಯಾಗಿರುವುದು ವಿಶೇಷ.

author-image
Chandramohan
GDP GROWTH RATE02
Advertisment
  • 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.2 ರಷ್ಟು ಬೆಳವಣಿಗೆ
  • ಕಳೆದ 6 ತ್ರೈಮಾಸಿಕದಲ್ಲಿ ಅತ್ಯಧಿಕ ಜಿಡಿಪಿ ಬೆಳವಣಿಗೆ

ಭಾರತದ ಆರ್ಥಿಕತೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ  ಉತ್ತಮ ಬೆಳವಣಿಗೆ ಸಾಧಿಸಿದೆ.  2025-26ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ.8.2 ರಷ್ಟು ಬೆಳವಣಿಗೆ ಸಾಧಿಸಿದೆ.  ಕಳೆದ ವರ್ಷ ಇದೇ 2ನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ.5.6 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿತ್ತು. ಅದಕ್ಕೆ ಹೋಲಿಸಿದರೇ, ಈ ತ್ರೈಮಾಸಿಕದಲ್ಲಿ  ಉತ್ತಮ ಬೆಳವಣಿಗೆ ದಾಖಲಿಸಿದೆ.   ಇನ್ನೂ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ. 7.8 ರಷ್ಟು ಬೆಳವಣಿಗೆ ದಾಖಲಿಸಿತ್ತು. 
2ನೇ ತ್ರೈಮಾಸಿಕದಲ್ಲಿ ಆಗಿರುವ ಶೇ.8.2 ರಷ್ಟು ಬೆಳವಣಿಗೆಯು ಕಳೆದ 6 ತ್ರೈಮಾಸಿಕಗಳಲ್ಲೇ ಅತ್ಯಧಿಕ ಬೆಳವಣಿಗೆ ದರ.  2025- 26ರ ಎರಡನೇ ತ್ರೈಮಾಸಿಕದಲ್ಲಿ ಅಮೆರಿಕಾದ ತೆರಿಗೆ ಹೇರಿಕೆಯಿಂದ ಭಾರಿ ಒತ್ತಡದ ಸ್ಥಿತಿ ಇತ್ತು. ಆದರೂ ತಯಾರಿಕೆ, ನಿರ್ಮಾಣ, ಸೇವಾ ವಲಯದ ಬೆಳವಣಿಗೆಯಿಂದಾಗಿ ಜಿಡಿಪಿ ಉತ್ತಮ ಪ್ರಗತಿ, ಬೆಳವಣಿಗೆ ಸಾಧಿಸಿದೆ. 

Advertisment



ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು 48.63 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.  ಕಳೆದ ವರ್ಷದ 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು 44.94 ಲಕ್ಷ ಕೋಟಿ ರೂಪಾಯಿ ಆಗಿತ್ತು.  ನಾಮಿನಲ್ ಜಿಡಿಪಿಯು ಶೇ.8.7 ರಷ್ಟು ಬೆಳವಣಿಗೆ ಸಾಧಿಸಿದ್ದು, 85.25 ಲಕ್ಷ ಕೋಟಿ ರೂಪಾಯಿ ಆಗಿದೆ. 

Advertisment

2nd Quarter GDP Growth rate
Advertisment
Advertisment
Advertisment