/newsfirstlive-kannada/media/media_files/2025/12/18/lionel-messi-visited-vantara-3-2025-12-18-11-57-32.jpg)
/newsfirstlive-kannada/media/media_files/2025/12/18/lionel-messi-visited-vantara-5-2025-12-18-11-58-38.jpg)
GOAT India Tour
ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದರು. ‘ಗೋಟ್ ಇಂಡಿಯಾ ಟೂರ್ 2025’ (GOAT India Tour) ಅಡಿಯಲ್ಲಿ ಗುಜರಾತ್ನ ಜಾಮ್ನಗರದಲ್ಲಿರುವ ವನತಾರಗೆ ಭೇಟಿ ನೀಡಿದ್ದರು. ಅಲ್ಲಿ ಕಳೆದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳು ಇದೀಗ ವೈರಲ್ ಆಗಿವೆ.
/newsfirstlive-kannada/media/media_files/2025/12/18/lionel-messi-visited-vantara-11-2025-12-18-11-59-18.jpg)
ವಂಟಾರಾ
ವನತಾರ (Vantara: Global Wildlife Rescue and Conservation Centre) ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಪ್ರಾರಂಭಿಸಿದ ವನ್ಯಜೀವಿ ರಕ್ಷಣೆ, ಆರೈಕೆ ಮತ್ತು ಪುನರ್ವಸತಿ ಕೇಂದ್ರ.
/newsfirstlive-kannada/media/media_files/2025/12/18/lionel-messi-visited-vantara-9-2025-12-18-11-59-44.jpg)
ಫುಟ್ಬಾಲ್ ಆಡಿದರು
ಇಲ್ಲಿಗೆ ಭೇಟಿ ನೀಡಿದ್ದ ಮೆಸ್ಸಿ ಆನೆಗಳೊಂದಿಗೆ ಫುಟ್ಬಾಲ್ ಆಡಿದರು. ಸಿಂಹಗಳನ್ನು ಹತ್ತಿರದಿಂದ ನೋಡಿ ಆನಂದಿಸಿದರು. ಅಲ್ಲದೇ ಈ ಸ್ಥಳದಿಂದ ತುಂಬಾ ಪ್ರಭಾವಿತರಾಗಿ ಮತ್ತೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
/newsfirstlive-kannada/media/media_files/2025/12/18/lionel-messi-visited-vantara-13-2025-12-18-12-00-07.jpg)
ಮೆಸ್ಸಿಗೆ ಇಷ್ಟವಾಯಿತು
ವನತಾರದಲ್ಲಿ, ಮೆಸ್ಸಿಗೆ ಭಾರತೀಯ ಆಧ್ಯಾತ್ಮಿಕ ಲೋಕ ಪರಿಚಯವಾಯಿತು. ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು, ಶಿವಲಿಂಗಕ್ಕೆ ಹಾಲು ಅರ್ಪಿಸಿದರು. ಮತ್ತು ಭಾರತೀಯ ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸಿದರು. ಧ್ಯಾನ ಕೂಡ ಮಾಡಿದರು. ಇದು ಮೆಸ್ಸಿ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ವರದಿಯಾಗಿದೆ.
/newsfirstlive-kannada/media/media_files/2025/12/18/lionel-messi-visited-vantara-10-2025-12-18-12-00-33.jpg)
ಧ್ಯಾನದ ಬಳಿಕ
ವನತಾರದಲ್ಲಿ ಪ್ರಾಣಿಗಳೊಂದಿಗೆ ಮೆಸ್ಸಿ ಸಮಯ ಕಳೆದರು. ಪಶುಗಳ ಆರೈಕೆಯನ್ನು ಹತ್ತಿರದಿಂದ ನೋಡಿದರು. ಅಲ್ಲಿನ ಪಶುವೈದ್ಯಕೀಯ ಸಿಬ್ಬಂದಿ ಜೊತೆ ಸಂವಹನ ನಡೆಸಿದರು. ವನತಾರದಲ್ಲಿ, ಲಿಯೋನೆಲ್ ಮೆಸ್ಸಿ ಮಾಣೆಕ್ಲಾಲ್ ಎಂಬ ಮರಿ ಆನೆಯೊಂದಿಗೆ ಫುಟ್ಬಾಲ್ ಆಡಿದರು.
/newsfirstlive-kannada/media/media_files/2025/12/18/lionel-messi-visited-vantara-2025-12-18-12-00-56.jpg)
ಇತ್ತೀಚೆಗೆ ಮಾಣೆಕ್ಲಾಲ್ ಅನ್ನು ತ್ರಿಪುರಾದಿಂದ ಗುಜರಾತ್ನ ವಂಟಾರಾದ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ವಿಶೇಷ ಚಿಕಿತ್ಸೆ ಮತ್ತು ಆರೈಕೆಗಾಗಿ ಕರೆತರಲಾಗಿದೆ. ಈ ಆನೆಯು ಫುಟ್ಬಾಲ್ ಮೇಲಿನ ಪ್ರೀತಿಗೂ ಹೆಸರುವಾಸಿ. ಆನೆಗೆ ಫುಟ್ಬಾಲ್ ಎಸೆದರು, ಅದು ಎಲ್ಲರ ರೋಮಾಂಚನಗೊಳಿಸಿತು.
/newsfirstlive-kannada/media/media_files/2025/12/18/lionel-messi-visited-vantara-2-2025-12-18-12-01-27.jpg)
ಮತ್ತೆ ಭಾರತಕ್ಕೆ ಬರುವ ಭರವಸೆ
ವನತಾರ ಕೆಲಸ ನಿಜಕ್ಕೂ ಅದ್ಭುತ. ಪ್ರಾಣಿಗಳಿಗಾಗಿ ಅವರು ಮಾಡುವ ಕೆಲಸ, ಅವುಗಳಿಗೆ ಸಿಗುವ ಆರೈಕೆ, ಅವುಗಳನ್ನು ರಕ್ಷಿಸುವ ಮತ್ತು ನೋಡಿಕೊಳ್ಳುವ ರೀತಿ ನಿಜಕ್ಕೂ ಪ್ರಶಂಸೀಯ. ನಾವು ಅದ್ಭುತ ಸಮಯವನ್ನು ಕಳೆದಿದ್ದೇವೆ. ಇಲ್ಲಿ ಕಳೆದ ಕ್ಷಣ ಅದ್ಭುತವಾಗಿತ್ತು ಎಂದಿದ್ದಾರೆ..
/newsfirstlive-kannada/media/media_files/2025/12/18/lionel-messi-visited-vantara-1-2025-12-18-12-01-52.jpg)
'ಇದು ನಿಜಕ್ಕೂ ಸುಂದರವಾಗಿದೆ..'
'ಇದು ನಿಜಕ್ಕೂ ಸುಂದರವಾಗಿದೆ...' ಲಿಯೋನೆಲ್ ಮೆಸ್ಸಿ ವನತಾರ ಅವರನ್ನು ಶ್ಲಾಘಿಸಿದ್ದಾರೆ, ಮತ್ತೆ ಭಾರತಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us