/newsfirstlive-kannada/media/media_files/2025/12/11/luthra-brothers-arrested-in-thailand-2025-12-11-12-07-19.jpg)
ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಬಂಧಿಸಿದ ಥೈಲ್ಯಾಂಡ್ ಪೊಲೀಸರು
ಗೋವಾದ ನೈಟ್ ಕ್ಲಬ್ ನಲ್ಲಿ ಕಳೆದ ವಾರಾಂತ್ಯದಲ್ಲಿ ಬೆಂಕಿ ಬಿದ್ದು 25 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ನೈಟ್ ಕ್ಲಬ್ ಮಾಲೀಕರಾದ ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾರನ್ನು ಥೈಲ್ಯಾಂಡ್ ನ ಪುಕೇಟ್ ನಲ್ಲಿ ಬಂಧಿಸಲಾಗಿದೆ. ಗೋವಾ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಮನವಿ ಮೇರೆಗೆ ಇಂಟರ್ ಪೋಲ್ ನಿಂದ ಇಬ್ಬರ ವಿರುದ್ಧವೂ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಲಾಗಿತ್ತು. ಇಂದು ಥೈಲ್ಯಾಂಡ್ ಪೊಲೀಸರು ಇಬ್ಬರು ಸೋದರರನ್ನು ಬಂಧಿಸಿದ್ದಾರೆ. ಈಗ ಭಾರತಕ್ಕೆ ಗಡೀಪಾರು ಮಾಡಲಾಗುತ್ತೆ. ಭಾರತದ ಪೊಲೀಸ್ ಅಧಿಕಾರಿಗಳ ತಂಡ ಪುಕೇಟ್ ವಿಮಾನ ನಿಲ್ದಾಣಕ್ಕೆ ತೆರಳಿ ಲೂತ್ರಾ ಸೋದರರನ್ನು ತಮ್ಮ ವಶಕ್ಕೆ ಪಡೆದು ಮೊದಲಿಗೆ ದೆಹಲಿಗೆ ಕರೆ ತರುವರು. ಬಳಿಕ ಗೋವಾ ಪೊಲೀಸರ ವಶಕ್ಕೆ ನೀಡುವರು.
ಈಗಾಗಲೇ ದೆಹಲಿ ಹಾಗೂ ಗೋವಾ ಪೊಲೀಸರು ಥೈಲ್ಯಾಂಡ್ ಪೊಲೀಸರ ಜೊತೆಗೆ ಸಂಪರ್ಕದಲ್ಲಿದ್ದಾರೆ. ವಲಸೆ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಸಂಜೆ ಇಲ್ಲವೇ ನಾಳೆಯೊಳಗೆ ಲೂತ್ರಾ ಸೋದರರನ್ನು ಭಾರತಕ್ಕೆ ಕರೆ ತರಲಾಗುತ್ತೆ.
/filters:format(webp)/newsfirstlive-kannada/media/media_files/2025/12/11/luthra-brothers-arrested-in-thailand-1-2025-12-11-12-11-01.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us