Advertisment

ಗೋವಾದ ಜನಪ್ರಿಯ ಕ್ಲಬ್​​ನಲ್ಲಿ ಘೋರ ದುರಂತ.. 20 ಮಂದಿ ಸಜೀವ ದಹನ..

ನಿನ್ನೆ ತಡರಾತ್ರಿ ಗೋವಾದ ನೈಟ್ ಕ್ಲಬ್ ( Goa Club) ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಕ್ಲಬ್​ನಲ್ಲಿರುವ ಸಿಲಿಂಡರ್ ಸ್ಫೋಟಗೊಂಡಿದ್ದು ಬೆಂಕಿ ಹೊತ್ತಿದೆ. ದುರ್ಘಟನೆಯಲ್ಲಿ 20 ಮಂದಿ ಪುರುಷರು ಸೇರಿ 3 ಮಹಿಳೆಯರು ಸಜೀವ ದಹನವಾಗಿದ್ದಾರೆ.

author-image
Ganesh Kerekuli
Goa
Advertisment

ನಿನ್ನೆ ತಡರಾತ್ರಿ ಗೋವಾದ ಜನಪ್ರಿಯ ನೈಟ್ ಕ್ಲಬ್ ( Goa Club)  ಅಗ್ನಿ ದುರಂತ ಸಂಭವಿಸಿದೆ. ಕ್ಲಬ್​ನಲ್ಲಿರುವ ಸಿಲಿಂಡರ್ ಸ್ಫೋಟಗೊಂಡಿದ್ದು ಬೆಂಕಿ ಹೊತ್ತಿದೆ. ದುರ್ಘಟನೆಯಲ್ಲಿ 20 ಮಂದಿ ಪುರುಷರು ಸೇರಿ 3 ಮಹಿಳೆಯರು ಸಜೀವ ದಹನವಾಗಿದ್ದಾರೆ.

Advertisment

ಪಣಜಿಯಿಂದ 25 ಕಿಲೋ ಮೀಟರ್ ದೂರದ ಅರ್ಪೋರದ ಕ್ಲಬ್​ವೊಂದರಲ್ಲಿ (Arpora Club)  ಘಟನೆ ನಡೆದಿದೆ. ಇನ್ನು ಕ್ಲಬ್​ನಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನ ಕೈಗೊಂಡಿರಲಿಲ್ಲ ಎಂಬುವುದು ತಿಳಿದು ಬಂದಿದೆ. ದುರ್ಘಟನಾ ಸ್ಥಳಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ಕೊಟ್ಟಿದ್ದು, 23 ಮೃತದೇಹಗಳನ್ನ ಬಾಂಬೋಲಿನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೋದಿ ಸಂತಾಪ

ತಡರಾತ್ರಿ ಗೋವಾದಲ್ಲಿ ನಡೆದ ಅಗ್ನಿ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಅರ್ಪೋರಾದಲ್ಲಿ ಸಂಭವಿಸಿದ ಅಗ್ನಿ ಅವಘಡ ತೀವ್ರ ದುಃಖಕರ, ಪ್ರೀತಿ ಪಾತ್ರರನ್ನ ಕಳೆದುಕೊಂಡವರ ಜೊತೆ ನಾವಿದ್ದೇವೆ. ದುರಂತದಲ್ಲಿ ಗಾಯಗೊಂಡಿರುವವರು ಆದಷ್ಟು ಬೇಗ ಗುಣಮುಖರಾಗಿ ಬರಲಿ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವನ್ನ ನೀಡುತ್ತೆ ಅಂತ ಪ್ರಧಾನಿ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನ ಘೋಷಣೆ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Goa Club Arpora
Advertisment
Advertisment
Advertisment