/newsfirstlive-kannada/media/media_files/2025/12/09/gaurav-and-saurabh-luthra-03-2025-12-09-18-44-11.jpg)
ಗೋವಾದ ರೋಮಿಯೋ ಲೇನ್ ರೆಸ್ಟೊರೆಂಟ್ ಧ್ವಂಸ ಮಾಡಿದ ಸರ್ಕಾರ
ಗೋವಾದ ವಾಗೇಟರ್‌ನಲ್ಲಿರುವ ಬೀಚ್ ಗುಡಿಸಲು "ರೋಮಿಯೋ ಲೇನ್" ರೆಸ್ಟೋರೆಂಟ್ ಮಾಲೀಕರಾದ ಲುಥ್ರಾ ಸಹೋದರರ ಒಡೆತನದಲ್ಲಿದೆ . ಇದನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆದೇಶದ ಮೇರೆಗೆ ಕೆಡವಲಾಗುತ್ತಿದೆ. ಈ ರೆಸ್ಟೋರೆಂಟ್ ಅನ್ನು ಸರ್ಕಾರದ ಒಡೆತನದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ . ಲುಥ್ರಾ ಸೋದರರಿಗೆ ಸೇರಿದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿಯ ನಂತರ "ಬಿರ್ಚ್ ಬೈ ರೋಮಿಯೋ ಲೇನ್ ಗಮನ ಸೆಳೆದಿತ್ತು. ಬಿರ್ಚ್ ಬೈ ರೋಮಿಯೋ ಲೇನ್ ನಲ್ಲಿ 25 ಜನರು ಸಾವನ್ನಪ್ಪಿದ್ದರು.
ಶಿಕ್ಷಾರ್ಹ ನರಹತ್ಯೆಯ ಆರೋಪ ಹೊತ್ತಿರುವ ಗೌರವ್ ಮತ್ತು ಸೌರಭ್ ಲುಥ್ರಾ ಬೆಂಕಿಯ ದುರಂತ ಸಂಭವಿಸಿದ ನಂತರ ಕೆಲವು ಗಂಟೆಗಳಲ್ಲಿ ದೇಶವನ್ನು ಬಿಟ್ಟು ಥೈಲ್ಯಾಂಡ್‌ನ ಫುಕೆಟ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಹತ್ತಿದ್ದಾರೆ.
/filters:format(webp)/newsfirstlive-kannada/media/media_files/2025/12/09/gaurav-and-saurabh-luthra-02-2025-12-09-18-43-43.jpg)
ಇಂಟರ್‌ಪೋಲ್ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ. ಸದಸ್ಯ ರಾಷ್ಟ್ರಗಳಿಂದ ಶಂಕಿತನ ಇರುವಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ತನಿಖಾಧಿಕಾರಿಗಳಿಗೆ ಈ ನೋಟಿಸ್ ಹಸಿರು ಸಂಕೇತವಾಗಿದೆ.
ದೆಹಲಿಯಲ್ಲಿ ತಮ್ಮ ಮೊದಲ ಉದ್ಯಮವಾದ ನೈಟ್‌ಕ್ಲಬ್ ಮಾಮಾಸ್ ಬುಯೋಯ್ ರನ್‌ಅವೇ ಸಕ್ಸಸ್ ಆದ ನಂತರ ಲುಥ್ರಾಸ್ ದೆಹಲಿ, ಗೋವಾ ಮತ್ತು ಹರಿಯಾಣದ ಯಮುನಾ ನಗರ ಸೇರಿದಂತೆ ಅನೇಕ ನಗರಗಳಲ್ಲಿ ರೋಮಿಯೋ ಲೇನ್ ಸರಪಳಿಯನ್ನು ನಿರ್ಮಿಸಿದ್ದರು.
ಗೋವಾದ ರೋಮಿಯೋ ಲೇನ್ ಮಹತ್ವಾಕಾಂಕ್ಷೆಯ ಹ್ಯಾಂಗ್‌ಔಟ್ ಆಯಿತು. ಇದರ ಪ್ರವೇಶವನ್ನು ಗ್ಲಾಮರ್ ಜಗತ್ತಿನ ಎಂಟ್ರಿಯಾಗಿ ನೋಡಲಾಗುತ್ತಿತ್ತು. ಲೂಥ್ರಾ ಸೋದರರು ತಮ್ಮದೇ ಆದ ಜೀವನಶೈಲಿಯೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿದೇಶಿ ಸ್ಥಳಗಳ ಪೋಟೋಗಳು, ಲಕ್ಷುರಿ ಜೀವನದ ಪೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us