/newsfirstlive-kannada/media/media_files/2025/10/11/gold-price-today-2025-10-11-13-02-31.jpg)
ಏರುತ್ತಿರುವ ಚಿನ್ನ, ಬೆಳ್ಳಿ ಬೆಲೆ
ದೇಶದಲ್ಲಿ ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ 10 ಗ್ರಾಂಗೆ 1,43,100 ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ಶುದ್ದ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ. 2,33,300 ರೂಪಾಯಿಗೆ ಏರಿಕೆಯಾಗಿದೆ.
ಚಿನ್ನದ ಬೆಲೆಯು ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ಬೆಲೆ, ಅಮೆರಿಕಾದ ಡಾಲರ್ ಮೌಲ್ಯದ ಏರಿಳಿತ ಹಾಗೂ ಚಿನ್ನದ ಮೇಲಿನ ಅಮದು ದರದ ಮೇಲೆ ನಿರ್ಧಾರವಾಗುತ್ತೆ. ಜೊತೆಗೆ ಜಾಗತಿಕ ರಾಜಕೀಯ, ಆರ್ಥಿಕ ಅನಿಶ್ಚಿತತೆಯೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತೆ. ಅಮೆರಿಕಾ ಈಗ ವೆನಿಜುವೆಲಾ ಮೇಲೆ ದಾಳಿ ನಡೆಸುವ ಮೂಡ್ ನಲ್ಲಿದೆ. ರಷ್ಯಾ- ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ. ಇವೆಲ್ಲವೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿ ಬೆಲೆ ಏರಿಕೆಗೆ ಕಾರಣವಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us