ಕೆಂಪುಕೋಟೆ ಆವರಣದಲ್ಲಿ 1.5 ಕೋಟಿ ಮೌಲ್ಯದ ಚಿನ್ನದ ಕಳಸಗಳು ಕಳ್ಳತನ..! VIDEO

ದೆಹಲಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಭದ್ರತಾಲೋಪವಾಗಿದೆ. ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಂಪು ಕೋಟೆ ಆವರಣದಲ್ಲಿದ್ದ ಎರಡು ಬಂಗಾರದ ಕಳಸಗಳು ಕಳ್ಳತನವಾಗಿವೆ.

author-image
Ganesh Kerekuli
Golden Kalash
Advertisment

ದೆಹಲಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಭದ್ರತಾಲೋಪವಾಗಿದೆ. ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಂಪು ಕೋಟೆ ಆವರಣದಲ್ಲಿದ್ದ ಎರಡು ಬಂಗಾರದ ಕಳಸಗಳು ಕಳ್ಳತನವಾಗಿವೆ. 

ಕಳ್ಳ ಜೈನ ಪಾದ್ರಿಯಂತೆ ಮಾರುವೇಷತೊಟ್ಟು ಬಂದು ಚಿನ್ನದ ಕಳಸವನ್ನು ಹೊತ್ತುಕೊಂಡು ಹೋಗಿದ್ದು, ಸಿಸಿಟಿಯವಿಯಲ್ಲಿ ಸೆರೆಯಾಗಿದೆ. ಶಂಕಿತ ಕಳ್ಳನನ್ನು ಬಂಧಿಸಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. 115 ಗ್ರಾಮ್ ತೂಕದ ಬಂಗಾರದ ಕಳಸ ಹಾಗೂ 760 ಗ್ರಾಮ್ ತೂಕದ ಗೋಲ್ಡ್​ ಕೊಕೊನಟ್​​ ಅನ್ನು ಕದ್ದೊಯ್ಯಲಾಗಿದೆ. ಪ್ರಕರಣ ಸಂಬಂಧ ಎಫ್​ಐಆರ್ ಆಗಿದೆ. ಕಾಣೆಯಾದ ಮೌಲ್ಯಯುತ ವಸ್ತುಗಳನ್ನು ಜೈನರ ಆಚರಣೆಗಾಗಿ ತೆಗೆದುಕೊಂಡು ಬರಲಾಗಿತ್ತು.   

ಉದ್ಯಮಿ ಸುಧೀರ್ ಜೈನ್ ಅನ್ನೋರು ಈ ಬೆಲೆಬಾಳುವ ವಸ್ತುಗಳ ಒಡೆತನ ಹೊಂದಿದ್ದರು. ಆಚರಣೆಗಾಗಿ ಅದನ್ನು ಅಲ್ಲಿಗೆ ತರುತ್ತಿದ್ದರು ಎನ್ನಲಾಗಿದೆ. ಕೆಂಪು ಕೋಟೆಯ ಆವರಣದಲ್ಲಿ 10 ದಿನಗಳ ಕಾಲ Daslakshan Mahaparv ಎಂಬ ಕಾರ್ಯಕ್ರಮ ಆಯೋಜನೆಗೊಂಡಿತ್ತು. 

ಇದನ್ನೂ ಓದಿ:ನಟಿ ಭಾವನಾ ರಾಮಣ್ಣ ಅವರ ಅವಳಿ IVF ಶಿಶುಗಳಲ್ಲಿ ಒಂದು ಮಗು ನಿಧನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

golden kalash stolen Red Fort
Advertisment