Advertisment

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದ ಕೇಂದ್ರದ ಕ್ಯಾಬಿನೆಟ್‌

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರದ ಕ್ಯಾಬಿನೆಟ್ ಗುಡ್ ನ್ಯೂಸ್ ನೀಡಿದೆ. 8 ನೇ ವೇತನ ಆಯೋಗದ ರಚನೆಗೆ ಟರ್ಮ್ಸ್ ಆಫ್ ರೆಫರೆನ್ಸ್ ಗೆ ಕೇಂದ್ರದ ಕ್ಯಾಬಿನೆಟ್ ಅನುಮೋದನೆ ನೀಡಿದೆ. 8ನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ವೇತನ, ಪಿಂಚಣಿ ಮೊತ್ತ ಏರಿಕೆಯಾಗಲಿದೆ.

author-image
Chandramohan
8th pay commission

ನಿವೃತ್ತ ನ್ಯಾ.ರಂಜನಾ ಪ್ರಕಾಶ್ ದೇಸಾಯಿ, ಫುಲೋಕ್ ಘೋಷ್, ಪಂಕಜ್ ಜೈನ್‌

Advertisment
  • 8 ನೇ ವೇತನ ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್ ಗೆ ಕ್ಯಾಬಿನೆಟ್ ಒಪ್ಪಿಗೆ
  • ಆಯೋಗದ ಶಿಫಾರಸ್ಸು ಆಧಾರದ ಮೇಲೆ ವೇತನ ಪರಿಷ್ಕರಣೆ
  • ಹೆಚ್ಚಿನ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರಿ ನೌಕರ ಸಂಘಟನೆಗಳ ಆಗ್ರಹ
  • ನಿವೃತ್ತ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗ ರಚನೆ

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಕೊನೆಗೂ ಗುಡ್ ನ್ಯೂಸ್  ನೀಡಿದೆ.  ಕೇಂದ್ರ ಸರ್ಕಾರಿ ನೌಕರರ 8 ನೇ ವೇತನ ಆಯೋಗದ ರಚನೆಯ  ಟರ್ಮ್ಸ್ ಆಫ್ ರೆಫರೆನ್ಸ್  ಗೆ ಅನುಮೋದನೆ ನೀಡಿದೆ.  8ನೇ ವೇತನ ಆಯೋಗದಲ್ಲಿ ಓರ್ವ ಅಧ್ಯಕ್ಷರು, ಓರ್ವ ಪಾರ್ಟ್ ಟೈಮ್ ಸದಸ್ಯರು ಮತ್ತು ಓರ್ವ ಸದಸ್ಯರು ಕಾರ್ಯದರ್ಶಿ ಆಗಿರುತ್ತಾರೆ. ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ 8ನೇ ವೇತನ ಆಯೋಗದ ಅಧ್ಯಕ್ಷರಾಗಿರುತ್ತಾರೆ. ಐಐಎಂ ಬೆಂಗಳೂರು ಪ್ರೊಫೆಸರ್ ಫುಲೋಕ್ ಘೋಷ್ , 8 ನೇ ವೇತನ ಆಯೋಗದ ಪಾರ್ಟ್ ಟೈಮ್ ಸದಸ್ಯರಾಗಿರುತ್ತಾರೆ. ಸದ್ಯ ಪೆಟ್ರೋಲಿಯಂ ಮತ್ತು  ನ್ಯಾಚುರಲ್ ಗ್ಯಾಸ್ ಇಲಾಖೆಯ ಸೆಕ್ರೆಟರಿಯಾಗಿರುವ ಪಂಕಜ್ ಜೈನ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 


 8ನೇ ವೇತನ ಆಯೋಗವು ರಚನೆಯಾದ ದಿನದಿಂದ 18 ತಿಂಗಳೊಳಗಾಗಿ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಬೇಕು.  ಸಾಮಾನ್ಯವಾಗಿ 8ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2026ರ ಜನವರಿ 1 ರೊಳಗೆ ಸಲ್ಲಿಸುವ ನಿರೀಕ್ಷೆ ಇದೆ.  2025ರ ಜನವರಿಯಲ್ಲೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗ ರಚಿಸುವ ಘೋಷಣೆ ಮಾಡಿತ್ತು. ಈಗ 10 ತಿಂಗಳು ಕಳೆದ ಬಳಿಕ 8 ನೇ ವೇತನ ಆಯೋಗದ ಟರ್ಮ್ ಆಫ್ ರೆಫರೆನ್ಸ್ ಗೆ ಅನುಮೋದನೆ ನೀಡಿದೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕೇಂದ್ರದ ಹಣಕಾಸು ಇಲಾಖೆಯೂ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

Advertisment

24 ಗಂಟೆ ಫೋನ್ ರಿಸೀವ್ ಮಾಡಲೇಬೇಕು.. ಸರ್ಕಾರಿ ನೌಕರರಿಗೆ ಖಡಕ್ ಆದೇಶ; ಕಾರಣವೇನು?




8ನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರದ ನೌಕರರ ವೇತನ ಏರಿಕೆಯಾಗಲಿದೆ. ಜೊತೆಗೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೂ ಪಿಂಚಣಿಯೂ ಏರಿಕೆಯಾಗಲಿದೆ. 
8 ನೇ ವೇತನ ಆಯೋಗದ ಶಿಫಾರಸ್ಸುಗಳಿಂದ 48 ಲಕ್ಷ ಮಂದಿ ಕೇಂದ್ರ ಸರ್ಕಾರಿ ನೌಕರರು ಹಾಗೂ  67 ಲಕ್ಷ ನಿವೃತ್ತ ನೌಕರರ ಪಿಂಚಣಿ ಮೊತ್ತ ಏರಿಕೆಯಾಗಲಿದೆ. 
ಈ ಹಿಂದೆ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2016 ರಲ್ಲಿ ಜಾರಿಗೊಳಿಸಲಾಗಿತ್ತು.  ಆದಾದ ಬಳಿಕ ಹಣದುಬ್ಬರ ಹೆಚ್ಚಾಗಿದೆ. ಜೀವನ ವೆಚ್ಚ ಏರಿಕೆಯಾಗಿದೆ. ಜನರ ಖರ್ಚು ವೆಚ್ಚಗಳು, ಅನುಭೋಗ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.   ಹೀಗಾಗಿ 8 ನೇ ವೇತನ ಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡಬೇಕೆಂದು ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಆಗ್ರಹಿಸಿದ್ದವು
 ಇನ್ನೂ 8 ನೇ ವೇತನ ಆಯೋಗವು ಪ್ರಸ್ತುತ ಇರುವ ಕೇಂದ್ರ ಸರ್ಕಾರಿ ನೌಕರರ ಸಂಬಳದ ಸ್ಲ್ಯಾಬ್ ಪರಿಶೀಲನೆ ನಡೆಸಲಿದೆ. ಗ್ರೇಡ್ ಪೇ ಸ್ವರೂಪ, ಪೆನ್ಷನ್ ಫಾರ್ಮೂಲಾ ಮತ್ತು ಹಣಕಾಸಿವ ಇತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಬಳಿಕ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ವೇತನ ಹೆಚ್ಚಳ ಮಾಡಬೇಕೆಂದು ಶಿಫಾರಸ್ಸು ಮಾಡಲಿದೆ. 




ಸರಳವಾಗಿ ಹೇಳುವುದಾದರೇ, 8 ನೇ ವೇತನ ಆಯೋಗವು ಪ್ರಸ್ತುತ ನೀಡುತ್ತಿರುವ ಸಂಬಳವು ಸೂಕ್ತವಾಗಿದೆಯೇ ಮತ್ತು ಆ ಸಂಬಳದಿಂದ ಜೀವನ ನಡೆಸಲು ಸಾಕಾಗುತ್ತಾ ಮತ್ತು ಜೀವನ ಮಟ್ಟವನ್ನು ಕಾಪಾಡಿಕೊಂಡು ಹೋಗಲು ಎಷ್ಟರ ಮಟ್ಟಿಗೆ ಸಂಬಳ ಏರಿಕೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸುತ್ತೆ.  ಜೊತೆಗೆ ಪ್ರತಿಭಾವಂತರನ್ನು ಕೇಂದ್ರ ಸರ್ಕಾರಿ ಸೇವೆಯಲ್ಲಿ ಉಳಿಸಿಕೊಳ್ಳಲು ವೇತನವನ್ನು ಎಷ್ಟು ಏರಿಕೆ ಮಾಡಬೇಕು ಎಂಬ ಬಗ್ಗೆ ಶಿಫಾರಸ್ಸು ಮಾಡಲಿದೆ. 

Advertisment



ಕೇಂದ್ರ  ಸರ್ಕಾರಿ ನೌಕರರು ಭಾರಿ ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಆದರೇ, ಭಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದರೇ, ಕೇಂದ್ರ ಸರ್ಕಾರದ ವಿತ್ತೀಯ ಶಿಸ್ತಿಗೆ ಧಕ್ಕೆಯಾಗಲಿದೆ. ಕೇಂದ್ರ ಸರ್ಕಾರವು ಈಗ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಬಂಡವಾಳ ವೆಚ್ಚವನ್ನು ಹೆಚ್ಚಳ ಮಾಡಬೇಕಾಗಿದೆ. ಜೊತೆಗೆ ಕಲ್ಯಾಣ ಯೋಜನೆಗಳಿಗೂ ಹೆಚ್ಚಿನ ಹಣ ನೀಡಬೇಕಾಗಿದೆ. ಇಂಥ ಸ್ಥಿತಿಯಲ್ಲಿ  ನೌಕರರ ವೇತನ, ಪಿಂಚಣಿಗೆ ಹೆಚ್ಚಿನ ಹಣ ನೀಡಿದರೇ, ಬಂಡವಾಳ ವೆಚ್ಚಕ್ಕೆ ಹಣದ ಕೊರತೆಯಾಗುತ್ತೆ. ಹೀಗಾಗಿ  ಎಲ್ಲವನ್ನೂ ಸಮತೋಲನ ಮಾಡುವಂಥ ಶಿಫಾರಸ್ಸುಗಳನ್ನು  8ನೇ ವೇತನ ಆಯೋಗ ಮಾಡಬೇಕಾಗಿದೆ. 

central cabinet meeting




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

8th pay commission terms of reference
Advertisment
Advertisment
Advertisment