/newsfirstlive-kannada/media/media_files/2025/12/09/gps-tracker-in-necklace-2025-12-09-17-53-06.jpg)
ದಕ್ಷಿಣ ಮುಂಬೈನಲ್ಲಿ ಸಂಜೆ ವಾಕಿಂಗ್ ಹೋಗಿದ್ದ 79 ವರ್ಷದ ಮಹಿಳೆಯೊಬ್ಬರು ಹಠಾತ್ತನೆ ಕಣ್ಮರೆಯಾಗಿದ್ದರು. ಇದು ಅವರ ಕುಟುಂಬವನ್ನು ಚಿಂತೆಗೀಡು ಮಾಡಿತ್ತು, ಆದರೆ ಅವರ ಮೊಮ್ಮಗ ಅವರ ಕೊರಳಿನ ನೆಕ್ ಲೆಸ್ ನಲ್ಲಿ ಹಾಕಿದ್ದ ಜಿಪಿಎಸ್ ಟ್ರ್ಯಾಕರ್‌ಗೆ ಧನ್ಯವಾದಗಳು. ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ನಂತರ 79 ವರ್ಷದ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸೆಂಬರ್ 3 ರಂದು ಸೆವ್ರಿ ಪ್ರದೇಶದಲ್ಲಿ ದ್ವಿಚಕ್ರ ವಾಹನವೊಂದು ಸೈರಾ ಬಿ ತಾಜುದ್ದೀನ್ ಮುಲ್ಲಾ ಅವರಿಗೆ ಡಿಕ್ಕಿ ಹೊಡೆದಿದೆ. ನಂತರ ಕೆಲವು ಪಾದಚಾರಿಗಳು ಅವರನ್ನು ಕೆಇಎಂ ಆಸ್ಪತ್ರೆಗೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈರಾ ಬಿ ತಾಜುದ್ದೀನ್ ಮುಲ್ಲಾ ಮನೆಗೆ ತಲುಪದಿದ್ದಾಗ, ಅವರ ಕುಟುಂಬ ಸದಸ್ಯರು ಭಯಭೀತರಾದರು. ಅವರ ಮೊಮ್ಮಗ ಮೊಹಮ್ಮದ್ ವಾಸಿಮ್ ಅಯೂಬ್, ಅಜ್ಜಿ ಮುಲ್ಲಾ ಅವರು ಸೆವ್ರಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಪರೇಲ್‌ನಲ್ಲಿರುವ ಕೆಇಎಂ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದ್ದರು. ಅಜ್ಜಿಯ ಸ್ಥಳವನ್ನು ತೋರಿಸಿದ್ದ ಜಿಪಿಎಸ್ ಸಾಧನವನ್ನು ಸಕ್ರಿಯಗೊಳಿಸಿದ ನಂತರ ಚಿಂತೆಗಳು ಕರಗಿದವು.
ಅವರು ಮತ್ತು ಇತರ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ತಲೆಗೆ ಗಾಯವಾಗಿದ್ದ ಸೈರಾ ಬಿ ತಾಜುದ್ದೀನ್ ಮುಲ್ಲಾ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಜ್ಜಿ ನಾಪತ್ತೆಯಾದರೇ, ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲು ಅವರು ಧರಿಸಿದ್ದ ನೆಕ್ ಲೆಸ್‌ಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಮೊಮ್ಮಗನ ತಂತ್ರಜ್ಞಾನ ನಿಪುಣತೆಯಿಂದ ಅಜ್ಜಿಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯವಾಯಿತು. ವಯಸ್ಸಾದವರು ಮತ್ತು ಮರೆವಿನ ಕಾಯಿಲೆ ಇರುವವರಿಗೆ ಈ ರೀತಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದರೇ, ನಾಪತ್ತೆಯಾದಂಥ ಸಂದರ್ಭದಲ್ಲಿ ಪತ್ತೆ ಹಚ್ಚಲು ಸಹಾಯಕವಾಗುತ್ತೆ.
ಕೆಲ ವರ್ಷಗಳ ಹಿಂದೆ ಮೈಸೂರಿನಲ್ಲಿ ಆರ್‌ಎಸ್ಎಸ್ ಸರ ಸಂಘಚಾಲಕರಾಗಿದ್ದ ಸುದರ್ಶನ್ ಅವರು ವಾಕಿಂಗ್ ಹೋದವರು ನಾಪತ್ತೆಯಾಗಿದ್ದರು. ಅವರನ್ನು ಪೊಲೀಸರು ಮತ್ತು ಆರ್‌ಎಸ್ಎಸ್ ಕಾರ್ಯಕರ್ತರೆಲ್ಲಾ ಸೇರಿ ಹುಡುಕಿದ್ದರು. ಕೊನೆಗೆ ಸುದರ್ಶನ್ ಅವರು ಯಾರೋ ಒಬ್ಬರ ಮನೆಯಲ್ಲಿ ಕೂತು ಟಿವಿ ನೋಡುತ್ತಿದ್ದರು. ಟಿವಿಯಲ್ಲಿ ಸುದರ್ಶನ್ ಅವರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಬಂದಿದ್ದನ್ನು ನೋಡಿ, ಆ ಮನೆಯವರೇ ಪೊಲೀಸರಿಗೆ ಸುದರ್ಶನ್ ಅವರ ಬಗ್ಗೆ ಮಾಹಿತಿ ನೀಡಿದ್ದರು. ಆ ನಂತರ ಸುದರ್ಶನ್ ಅವರು ಸುರಕ್ಷಿತವಾಗಿ ಮನೆ ತಲುಪಿದ್ದರು. ಒಂದು ವೇಳೆ ಆಗ ಸುದರ್ಶನ್ ಅವರಿಗೆ ಜಿಪಿಎಸ್ ಟ್ರ್ಯಾಕರ್ ಇದ್ದಿದ್ದರೇ, ಅವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us