/newsfirstlive-kannada/media/media_files/2025/08/17/shubhanshu-shukla-4-2025-08-17-07-05-33.jpg)
ಶುಭಾಂಶು ಶುಕ್ಲಾ
ಭಾರತದ ಹೆಮ್ಮೆಯ ಗಗನಯಾತ್ರಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಗೆ ಭೇಟಿ ನೀಡಿದ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Astronaut Shubhanshu Shukla) ಸ್ವದೇಶಕ್ಕೆ ಮರಳಿದ್ದಾರೆ.
ಐಎಸ್ಎಸ್ನಲ್ಲಿ ಹಾರಾಟ ನಡೆಸಿದ ಬಳಿಕ ಜುಲೈ 15 ರಂದು ಕ್ಯಾಲಿಫೋರ್ನಿಯಾ ಕರಾವಳಿಗೆ (coast of California) ಸುರಕ್ಷಿತವಾಗಿ ಬಂದಿಳಿದಿದ್ದರು. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೂಲಕ ಶುಕ್ಲಾ ತವರಿಗೆ ವಾಪಸ್ ಆಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿ ಅನೇಕ ಗಣ್ಯರು ಬರಮಾಡಿಕೊಂಡರು.
ಇದನ್ನೂ ಓದಿ:ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ.. ಏನ್ ಹೇಳಿದರು?
ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಆಕ್ಸಿಯಮ್ -4 ಮಿಷನ್‌ನ (Axiom-4 mission) ಪೈಲಟ್ ಆಗಿದ್ದರು. ಈ ಮಿಷನನ್ನು ಜೂನ್ 25 ರಂದು ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಜೂನ್ 26 ರಂದು ISSಗೆ ಸಂಪರ್ಕ ಕಲ್ಪಿಸಲಾಯಿತು. ಶುಕ್ಲಾ ಕಳೆದ ಒಂದು ವರ್ಷದಿಂದ ಯುಎಸ್‌ನಲ್ಲಿರುವ NASA, Axiom ಮತ್ತು Spacex ಸಹಾಯದಿಂದ ತರಬೇತಿ ಪಡೆಯುತ್ತಿದ್ದರು.
ಇದನ್ನೂ ಓದಿ: ಭಾರತಕ್ಕೆ ಆಗಮಿಸ್ತಿರೋ ಗಗನಯಾತ್ರಿ ಶುಭಾಂಶು ಶುಕ್ಲಾ.. ಮೊದಲು ಭೇಟಿ ಮಾಡೋದು ಯಾರನ್ನ?
ಶುಕ್ಲಾ ಅವರ ಈ ಅನುಭವ ಭಾರತದ ಬಾಹ್ಯಾಕಾಶ ಕನಸಿಗೆ ದೊಡ್ಡ ಬೂಸ್ಟ್ ನೀಡಿದೆ. ಭಾರತದ ಮಹತ್ವಾಕಾಂಕ್ಷೆಯ ಮಾನವ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನ (2027) ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರ ಹೊರತಾಗಿ 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ಮತ್ತು 2040ರ ವೇಳೆಗೆ ಮಾನವಸಹಿತ ಚಂದ್ರನ ಕಾರ್ಯಾಚರಣೆಗೆ ದೊಡ್ಡ ಸಹಕಾರ ಸಿಗಲಿದೆ.
ಪ್ರಧಾನಿ ಮೋದಿ ಜೊತೆ ಭೇಟಿ
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಶುಕ್ಲಾ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತಕ್ಕೆ ಬಂದಿರುವ ಶುಕ್ಲಾ ಅವರು ಪ್ರಧಾನಿಯನ್ನು ಭೇಟಿ ಆಗಲಿದ್ದಾರೆ. ಅಲ್ಲದೇ ಆಗಸ್ಟ್ 23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಸಂಸತ್ತಿನಲ್ಲಿ ಚರ್ಚೆ
ಮೂಲಗಳ ಪ್ರಕಾರ, ಸೋಮವಾರ ಲೋಕಸಭೆಯಲ್ಲಿ ಶುಕ್ಲಾ ಅವರ ಧ್ಯೇಯದ ಕುರಿತು ವಿಶೇಷ ಚರ್ಚೆ ನಡೆಯಲಿದೆ.
ಇದನ್ನೂ ಓದಿ:ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!
A moment of pride for India! A moment of glory for #ISRO! A moment of gratitude to the dispensation that facilitated this under the leadership of PM @narendramodi.
— Dr Jitendra Singh (@DrJitendraSingh) August 16, 2025
India’s Space glory touches the Indian soil… as the iconic son of Mother India, #Gaganyatri Shubhanshu Shukla… pic.twitter.com/0QJsYHpTuS
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ