/newsfirstlive-kannada/media/media_files/2025/09/03/nirmala-seetaraman-2025-09-03-22-18-20.jpg)
ಜಿಎಸ್‌ಟಿ ಕೌನ್ಸಿಲ್ನ (GST Council) 56ನೇ ಸಭೆಯು ಇಂದಿನಿಂದ ಪ್ರಾರಂಭವಾಗಿದೆ. ನಿರ್ಮಲಾ ಸೀತಾರಾಮನ್ ನೆತೃತ್ವದಲ್ಲಿ ನಡೆದ ಇವತ್ತಿನ ಸಭೆಯಲ್ಲಿ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ.
ಇನ್ಮೇಲೆ ಕೇವಲ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳು ಮಾತ್ರ ಇರಲಿವೆ. ಶೇಕಡಾ 5 ಮತ್ತು ಶೇ 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ಜಾರಿಗೆ ಬರಲಿದೆ.
ಐಷಾರಾಮಿ ವಸ್ತುಗಳಿಗೆ ಪ್ರತ್ಯೇಕ ಸ್ಲ್ಯಾಬ್
ಇನ್ಮುಂದೆ ಜಿಎಸ್‌ಟಿಯಲ್ಲಿ ಕೇವಲ 5% ಮತ್ತು 18% ಸ್ಲ್ಯಾಬ್‌ಗಳು ಇರುತ್ತವೆ. ಇನ್ನು ಐಷಾರಾಮಿ ವಸ್ತುಗಳಿಗೆ ಪ್ರತ್ಯೇಕ ಸ್ಲ್ಯಾಬ್ ಇರಲಿದೆ. ತೆರಿಗೆದಾರರಿಗೆ ದೊಡ್ಡ ಪರಿಹಾರ ನೀಡಲು ಜಿಎಸ್‌ಟಿ ಕೌನ್ಸಿಲ್ ಸಿದ್ಧತೆ ನಡೆಸುತ್ತಿದೆ. ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಅಗ್ಗವಾಗುವಂತೆ ಮಾಡುವ ವಿಮಾ ಪಾಲಿಸಿಗಳ ಮೇಲಿನ ಜಿಎಸ್‌ಟಿ ದರಗಳಲ್ಲಿ ಕಡಿತವನ್ನು ಕೌನ್ಸಿಲ್ ಅನುಮೋದಿಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಮ್ಮ ಗಮನ ದೇಶದ ಸಾಮಾನ್ಯ ಜನರ ಮೇಲಿದೆ. ರೈತರಿಂದ ಕಾರ್ಮಿಕರವರೆಗೆ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ಸ್ಲ್ಯಾಬ್ಗಳ ಕಡಿತಕ್ಕೆ ಅನುಮೋದನೆ ನೀಡಲಾಗಿದೆ. ನಮ್ಮ ನಿರ್ಧಾರಕ್ಕೆ ಸಭೆಯಲ್ಲಿದ್ದ ಎಲ್ಲಾ ಸದಸ್ಯರ ಒಪ್ಪಿಗೆ ಇದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ