Happy New Year: ಹೊಸ ವರ್ಷಕ್ಕೆ ಭರ್ಜರಿ ವೆಲ್‌ಕಮ್‌ ಹೇಳಿದ ಜಗತ್ತು

ಜಗತ್ತು 2026 ಅನ್ನು ಭರ್ಜರಿ ವೆಲ್‌ಕಮ್‌ ಮಾಡಿದೆ. ವಿಶ್ವದ ಕೋಟ್ಯಾಂತರ ಜನ 2025ಕ್ಕೆ ಟಾಟಾ ಬೈಬೈ ಹೇಳಿ 2026ಕ್ಕೆ ಹಾಯ್‌ ಹಾಯ್‌ ಹೇಳಿದ್ದಾರೆ. ಗಡಿಯಾದ ಮುಳ್ಳುಗಳು ಡಿಸೆಂಬರ್‌ 31 ಕಳೆದು ಜನವರಿ 1, 2026 ತೋರಿಸುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಡ್ಯಾನ್ಸ್‌ ಮಾಡಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

author-image
Ganesh Kerekuli
New Year
Advertisment

ಜಗತ್ತು 2026 ಅನ್ನು ಭರ್ಜರಿ ವೆಲ್‌ಕಮ್‌ ಮಾಡಿದೆ. ವಿಶ್ವದ ಕೋಟ್ಯಾಂತರ ಜನ 2025ಕ್ಕೆ ಟಾಟಾ ಬೈಬೈ ಹೇಳಿ 2026ಕ್ಕೆ ಹಾಯ್‌ ಹಾಯ್‌ ಹೇಳಿದ್ದಾರೆ. ಗಡಿಯಾದ ಮುಳ್ಳುಗಳು ಡಿಸೆಂಬರ್‌ 31 ಕಳೆದು ಜನವರಿ 1, 2026 ತೋರಿಸುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಡ್ಯಾನ್ಸ್‌ ಮಾಡಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

New Year (1)

ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ..

ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌, ಚೆನ್ನೈ, ಲಕ್ನೋ, ಕೋಲ್ಕತ್ತ, ಅಹ್ಮದಾಬಾದ್‌, ರಾಂಚಿ ಸೇರಿದಂತೆ ಹಲವು ಭಾಗಗಳಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಅಧಿಕಾರಿಗಳು ಭದ್ರತೆ ನೀಡಿದರು. ಡಿಜೆ ಮ್ಯೂಸಿಕ್‌ಗಳಿಗೆ ಹುಚ್ಚೆದ್ದು ಕುಣಿದು ಯುವ ಜನತೆ ಹೊಸ ವರ್ಷವನ್ನು ಬರಮಾಡಿಕೊಂಡರು. ಇನ್ನು ಬಹುತೇಕ ನಗರಗಳು ಲೈಟಿಂಗ್ಸ್‌ಗಳಿಂದ ಜಗಮಗಗೊಳಿಸುತ್ತಿದ್ದವು. 

ಇದನ್ನೂ ಓದಿ:New Year 2026: ಆಕ್ಲೆಂಡ್‌ನ ಸ್ಕೈ ಟವರ್‌ನಿಂದ ಬೆರಗುಗೊಳಿಸುವ ಪಟಾಕಿ ಪ್ರದರ್ಶನ

KIRIBATI WELCOMES NEWS YEAR 2026 (2)

ರಾಜ್ಯದಲ್ಲೂ ಮುಗಿಲು ಮುಟ್ಟಿದ ಸಂಭ್ರಮ..

ಇನ್ನು ರಾಜ್ಯದ ಬಹುತೇಕ ಭಾಗಗಳಲ್ಲಿ ಯುವ ಜನರು ಪಟಾಕಿ ಹೊಡೆದು ಹೊಸ ವರ್ಷವನ್ನು ಸ್ವಾಗತಿಸಿದರು. ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು, ಕಲಬುರಗಿ, ಬಳ್ಳಾರಿ, ಬೆಳಗಾವಿಯಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗೃತ ಕ್ರಮ ತೆಗೆದುಕೊಂಡರು.

New Year 2026

ಯಾವ ದೇಶದಲ್ಲಿ ಎಷ್ಟೊತ್ತಿಗೆ ವೆಲ್‌ಕಮ್..?‌ 

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30 ಹೊಸ ವರ್ಷಕ್ಕೆ ವೆಲ್‌ಕಮ್‌ ಹೇಳಿತು. ಇನ್ನು, ನ್ಯೂಜಿಲೆಂಡ್ ಮಧ್ಯಾಹ್ನ 4.30ಕ್ಕೆ, ಫಿಜಿ ಸಂಜೆ 5.30ಕ್ಕೆ, ಆಸ್ಟ್ರೇಲಿಯಾ ಸಂಜೆ 6.30ಕ್ಕೆ ಜಪಾನ್ ರಾತ್ರಿ 8.30ಕ್ಕೆ, ಚೀನಾ ರಾತ್ರಿ 9.30ಕ್ಕೆ, ಥೈಲ್ಯಾಂಡ್ ರಾತ್ರಿ 10.30ಕ್ಕೆ, ಬಾಂಗ್ಲಾದೇಶ ರಾತ್ರಿ 11.30ಕ್ಕೆ, ನೇಪಾಳ ರಾತ್ರಿ 11.45ಕ್ಕೆ, ಭಾರತ ಮತ್ತು ಶ್ರೀಲಂಕಾ ಮಧ್ಯರಾತ್ರಿ 12 ಗಂಟೆಗೆ   ಹೊಸ ವರ್ಷವನ್ನು ಸ್ವಾಗತಿಸಿದವು.

ಇದನ್ನೂ ಓದಿ:ಹೊಸ ವರ್ಷಕ್ಕೂ ಮುನ್ನ ಪ್ರಬಲ ಭೂಕಂಪ; ಸಂಭ್ರಮದಲ್ಲಿದ್ದವ್ರಿಗೆ ಬಿಗ್‌ ಶಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

New year guidelines Happy new year New Year celebration kiribati welcomes new year 2026
Advertisment