/newsfirstlive-kannada/media/media_files/2025/08/06/uttarakhandflashflood10-2025-08-06-14-56-11.jpg)
/newsfirstlive-kannada/media/media_files/2025/08/06/uttarakhandflashflood5-2025-08-06-14-38-47.jpg)
ದೇವಭೂಮಿ ಉತ್ತರಾಖಂಡ್ನಲ್ಲಿ ಭಾರಿ ಮಳೆ. ದಿಢೀರ್ ಪ್ರವಾಹ, ಮೇಘಸ್ಫೋಟದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.. ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ಕೆಸರಿನಡಿ ಸಮಾಧಿಯಾಗಿದೆ. ನೋಡ ನೋಡುತ್ತಲೇ ಮನೆಗಳು, ಕಟ್ಟಡಗಳು ಕುಸಿದಿದ್ದು ದುರಂತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
/newsfirstlive-kannada/media/media_files/2025/08/06/uttarakhandflashflood6-2025-08-06-14-38-47.jpg)
ಬೆಟ್ಟದ ಮೇಲಿಂದ ಬಿರುಗಾಳಿಯಂತೆ ನುಗ್ಗಿದ ಕೆಸರು ಮಿಶ್ರಿತ ನೀರು ಪ್ರಳಯ ಸೃಷ್ಟಿಸಿದ್ದು ಒಂದೊಂದು ದೃಶ್ಯಗಳೂ ಬೆಚ್ಚಿ ಬೀಳಿಸುವಂತಿದೆ. ದಿಢೀರ್ ಮೇಘಸ್ಫೋಟಕ್ಕೆ ಹೆದರಿದ ಧರಾಲಿ ಗ್ರಾಮದ ಜನ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿದ್ದಾರೆ.
/newsfirstlive-kannada/media/media_files/2025/08/06/uttarakhandflashflood-2025-08-06-14-38-47.jpg)
ನೀರಿನ ರಭಸಕ್ಕೆ ಬಹುಮಹಡಿ ಕಟ್ಟಡಗಳು ಆಟಿಕೆಗಳಂತೆ ಕೊಚ್ಚಿ ಹೋಗಿವೆ. ಗ್ರಾಮದಲ್ಲಿದ್ದ 25ಕ್ಕೂ ಹೆಚ್ಚು ಹೋಟೆಲ್ ಹಾಗೂ ಮನೆಗಳು ಧ್ವಂಸಗೊಂಡಿವೆ. ಇಡೀ ಪ್ರದೇಶ ಕೆಸರುಮಯವಾಗಿದೆ. ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಹೊರಗೆ ಎದ್ದು ಬರಲು ಹರಸಾಹಸ ಪಟ್ಟು ಪಾರಾಗಿದ್ದಾರೆ.
/newsfirstlive-kannada/media/media_files/2025/08/06/uttarakhandflashflood3-2025-08-06-14-38-47.jpg)
ಮೇಘಸ್ಫೋಟ ಸಂಭವಿಸುವ ವೇಳೆ ನೂರಾರು ಜನರು ತಮ್ಮ ಮನೆಗಳಲ್ಲೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮನೆಗಳಲ್ಲಿ ಸಿಲುಕಿದವರನ್ನ ಹುಡುಕಿ ರಕ್ಷಣಾ ಕಾರ್ಯ ನಡೀತಿದೆ. ಮುಕ್ಕಾಲು ಭಾಗ ಮುಳುಗಿರುವ ಕಟ್ಟಡಗಳಲ್ಲಿ ಆಪರೇಷನ್ ಕಡುಕಷ್ಟವಾಗಿದೆ.
/newsfirstlive-kannada/media/media_files/2025/08/06/uttarakhandflashflood8-2025-08-06-14-38-47.jpg)
ಇದರ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೀತಿದೆ. ಹರ್ಸಿಲ್, ಭಟ್ವಾರಿಯಿಂದ ಇನ್ನಷ್ಟು ಸಿಬ್ಬಂದಿ ತೆರಳಿದ್ದಾರೆ. ಹರಿದ್ವಾರ-ಡೆಹ್ರಾಡೂನ್ ಮಾರ್ಗದಲ್ಲಿ ಹರಿದ್ವಾರ-ಮೋತಿಚೂರು ವಿಭಾಗದ ನಡುವೆ ರೈಲ್ವೆ ಹಳಿಯ ಮೇಲೆ ಬೆಟ್ಟದ ಮೇಲಿಂದ ಬೃಹತ್ ಬಂಡೆಯೊಂದು ಬಿದ್ದಿದೆ.
/newsfirstlive-kannada/media/media_files/2025/08/06/uttarakhandflashflood2-2025-08-06-14-38-47.jpg)
ರೈಲ್ವೆ ಹಳಿಯ ಮೇಲೆ ಕಬ್ಬಿಣದ ರಾಡ್ ಹಾಕಿರೋದ್ರಿಂದ, ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ಇನ್ನು ಬೆಟ್ಟದಿಂದ ಬಂಡೆ ಉರುಳಿ ಬಿದ್ದ ಘಟನೆಯನ್ನ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವು-ನೋವು ವರದಿಯಾಗಿಲ್ಲ. ವಿಭಾಗೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಪುನಃಸ್ಥಾಪನೆ ಕಾರ್ಯ ಪ್ರಾರಂಭವಾಗಿದೆ.
/newsfirstlive-kannada/media/media_files/2025/08/06/uttarakhandflashflood1-2025-08-06-14-38-47.jpg)
ಇನ್ನು, ನಿನ್ನೆ ಸಂಜೆ ವೇಳೆಗೆ ಗಂಗೋತ್ರಿ ಬಳಿಯ ಸುಖಿ ಗ್ರಾಮದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದೆ. ಸುಖಿ ಗ್ರಾಮ ಕೂಡ ಧರಾಲಿ ಗ್ರಾಮದಿಂದ ಸ್ವಲ್ಪವೇ ದೂರದಲ್ಲಿದ್ದು ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಸದ್ಯ ಐಟಿಬಿಪಿ, NDRF, SDRF ರಾಜಸ್ಥಾನ ರೈಫಲ್ಸ್ ತುಕಡಿಯಿಂದ ರಕ್ಷಣಾ ಕಾರ್ಯಾಚರಣೆ ನಡೀತಿದೆ. ರಾಜಸ್ಥಾನ ರೈಫಲ್ನ ಕಮಾಂಡಿಂಗ್ ಆಫೀಸರ್ ಹರ್ಷವರ್ಧನ್ ನೇತೃತ್ವದಲ್ಲಿ 150 ಜನರ ತಂಡ ರಕ್ಷಣಾ ಕಾರ್ಯಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿದೆ.
/newsfirstlive-kannada/media/media_files/2025/08/06/uttarakhandflashflood7-2025-08-06-14-38-47.jpg)
ಧಾರಾಲಿ ಪ್ರವಾಹದಲ್ಲಿ 22 ಪುರುಷರು, 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ 37 ಗ್ರಾಮಸ್ಥರನ್ನ ರಕ್ಷಿಸಿ, ಚಿಕಿತ್ಸೆ ನೀಡಲಾಗ್ತಿದೆ. ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದ್ದು ರೆಸ್ಕ್ಯೂ ಆಪರೇಷನ್ ಮುಂದುವರಿದಿದೆ. ಈ ಮಧ್ಯೆ ಧರಾಲಿಯಲ್ಲಿ ರಕ್ಷಣೆಗೆ ಹೋಗಿದ್ದ 11 ಸೈನಿಕರು ಹಾಗೂ ಓರ್ವ ಜೆಸಿಓ ನಾಪತ್ತೆಯಾಗಿದ್ದಾರೆ. ಉತ್ತರಾಖಂಡದ ಭೀಕರ ಮೇಘಸ್ಪೋಟದಲ್ಲಿ ಇಲ್ಲೀವರೆಗೂ 60ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ರೆ, 150 ಜನರನ್ನು ರಕ್ಷಿಸಲಾಗಿದೆ ಅನ್ನೋ ಮಾಹಿತಿ ಇದೆ. ದುರಂತದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
/newsfirstlive-kannada/media/media_files/2025/08/06/uttarakhandflashflood4-2025-08-06-14-38-47.jpg)
ಎಸ್ಡಿಆರ್ಎಫ್, ಎನ್ಡಿಆರ್ಎಫ್, ಐಟಿಬಿಪಿ, ಸೇನೆ ಮತ್ತು ಎರಡು ಎಂಐಜಿ ಹಾಗೂ ಎರಡು ಚಿನೂಕ್ ಹೆಲಿಕಾಪ್ಟರ್ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ಮಾಡ್ತಿದೆ. ಆಧುನಿಕ ಡ್ರೋನ್ಗಳನ್ನು ಬಳಸಿ ನಾಪತ್ತೆಯಾದವರ ಹುಡುಕಾಟ ನಡೆಸಲಾಗ್ತಿದೆ. ಧರಾಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿರೋದ್ರಿಂದ, ಬುಲ್ಡೋಸರ್ಗಳು ಮತ್ತು ಇತರ ಯಂತ್ರಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
/newsfirstlive-kannada/media/media_files/2025/08/05/uttarakhand-2025-08-05-19-07-39.jpg)
ಉತ್ತರಕಾಶಿ ಹಾಗೂ ಹಾರ್ಸಿಲ್ಗೆ ಸಂಪರ್ಕ ಕಲ್ಪಿಸುವ ಬಟ್ವಾಡಿ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದೆ. ನಿನ್ನೆ ರಾತ್ರಿಯಿಂದಲೂ ಬಟ್ವಾಡಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಈ ಪ್ರದೇಶ ಧರಾಲಿಯಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿದ್ದು, ಸವಾರರಿಗೆ ಅಕ್ಷರಷಃ ನರಕಯಾತನೆ ಆಗ್ಬಿಟ್ಟಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಏರಿಯಲ್ ಸರ್ವೇ ಕೂಡಾ ಮಾಡಿರೋ ಸಿಎಂ ಪುಷ್ಕರ್, ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಿಂದ 20 ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
/newsfirstlive-kannada/media/media_files/2025/08/06/uttarakhandflashflood9-2025-08-06-14-51-22.jpg)
ಇತ್ತ ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗ್ತಿದ್ದು, ಮೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಮಾರು 167 ಕ್ಕೂ ಹೆಚ್ಚು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ರಣಭೀಕರ ಮೇಘಸ್ಫೋಟದಿಂದ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಕಲಬುರಗಿ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಉತ್ತರಾಖಂಡಕ್ಕೆ ಪ್ರವಾಸಕ್ಕೆ ಹೋಗಿರುವವರು ಹಾಗೂ ಅಲ್ಲಿ ಸಿಲುಕಿಕೊಂಡಿರುವವರ ಬಗ್ಗೆ ಮಾಹಿತಿ ನೀಡುವಂತೆ ಕಲಬುರಗಿ ಡಿಸಿ ಬಿ. ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ ಸಂಖ್ಯೆ 08472-278677 ಹಾಗೂ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.