/newsfirstlive-kannada/media/media_files/2025/08/06/uttarakhandflashflood-2025-08-06-14-38-47.jpg)
ಧಾರಾಲಿ ಗ್ರಾಮದ ಧೀಡೀರ್ ಪ್ರವಾಹದ ದೃಶ್ಯ
ಮಹಾ ಸ್ಫೋಟ.. ರಣ ಭೀಕರ ಮೇಘಸ್ಫೋಟಕ್ಕೆ ಒಂದು ಗ್ರಾಮವೇ ಕೊಚ್ಚಿಕೊಂಡು ಹೋಗಿದೆ.. ಯಮ ಮೇಘಸ್ಫೋಟದ ಒಂದೊಂದು ದೃಶ್ಯಗಳು ಎದೆಯನ್ನ ನಡುಗಿಸ್ತಿದೆ.. ಅದೆಷ್ಟು ಜನ ಜಲ ಸಮಾಧಿಯಾಗಿದ್ದರೋ ಲೆಕ್ಕವೇ ಇಲ್ಲ. ಅದೆಷ್ಟು ಮನೆಗಳು ನಾಶವಾಗಿವೆ ತಿಳಿದಿಲ್ಲ.. ಗುಡ್ಡದಿಂದ ಭೂತದಂತೆ ಹರಿದು ಬಂದ ಕೆಸರು ಮಣ್ಣು ಎಲ್ಲವನ್ನೂ ಸ್ವಾಹ ಮಾಡಿದೆ. ಏಕಾಏಕಿ ಈ ಮೇಘಸ್ಫೋಟ ಸಂಭವಿಸಿದ್ದೇಕೆ? ಅನ್ನೋ ಪ್ರಶ್ನೆಗೆ ಈ ವರದಿಯಲ್ಲಿ ನಾವು ಉತ್ತರ ನೀಡುತ್ತೇವೆ, ಒಮ್ಮೆ ಈ ಡೀಟೈಲ್ ವರದಿಯನ್ನು ಓದಿ.
ಉತ್ತರಕಾಶಿಯಲ್ಲಿ ರಣ ಭೀಕರ ಮೇಘಸ್ಫೋಟ
ಬೆಟ್ಟದಿಂದ ನುಗ್ಗಿದ ಪ್ರವಾಹಕ್ಕೆ ಕೊಚ್ಚಿ ಹೋಯ್ತು ಇಡೀ ಊರು! 25 ಹೋಟೆಲ್,ಮನೆಗಳು ನಾಶ. 60ಕ್ಕೂ ಹೆಚ್ಚು ಜನ ಜಲ ಸಮಾಧಿ? ಬೆಚ್ಚಿಬೀಳಿಸಿದ್ದ ಮೇಘಸ್ಫೋಟದ ದೃಶ್ಯ.. ಝಲ್ ಅನಿಸ್ತಿದೆ ಚೀರಾಟ.. ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯದಲ್ಲಿ ಏನೇನಿದೆ? ಅಂತ ಈಗ ವಿವರಿಸುತ್ತೇವೆ.
ಜಲಸ್ಫೋಟ.. ನೋಡಿದವರ ಎದೆಯನ್ನ ನಡುಗಿಸವಂತ ಮೇಘಸ್ಫೋಟವಿದು. ಒಂದೊಂದು ದೃಶ್ಯಗಳು ಭೀಕರ ಭೀಭತ್ಸ ಜಲಾರ್ಭಟಕ್ಕೆ ನೆಮ್ಮದಿಯ ಗೂಡಾಗಿದ್ದ ಒಂದು ಊರೇ ಮಂಗಮಾಯವಾಗಿದೆ, ಅಂದ್ರೆ ಪ್ರಕೃತಿಯ ಮುಂದೆ ಮನುಷ್ಯ ಅದೆಷ್ಟು ನಗಣ್ಯ ಅನ್ನೋದು ಅರ್ಥವಾಗುತ್ತೆ. ಕಳೆದ ಮೂರು ನಾಲ್ಕು ದಿನದಿಂದ ಉತ್ತರಾಖಂಡ್ ನಲ್ಲಿ ಭೂಕುಸಿತ, ಮೇಘಸ್ಫೋಟ ಸಂಭವಿಸುತ್ತಲೇ ಇದೆ. ಪರಿಣಾಮ ಹೆದ್ದಾರಿಗಳು, ಮನೆಗಳು ಕೊಚ್ಚಿಕೊಂಡು ಹೋಗಿ ಸ್ಮಶಾನ ಮೌನವೇ ಆವರಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.. ಆದ್ರೆ ಮಂಗಳವಾರ ಸಂಭವಿಸಿರೋ ಮೇಘಸ್ಫೋಟ ಒಂದು ಗ್ರಾಮವನ್ನೆ ಸ್ವಾಹ ಮಾಡಿದೆ.. ಆ ದೃಶ್ಯ ನೋಡ್ತಿದ್ರೆ, ನೀವು ಕನಸಲ್ಲೂ ಬೆಚ್ಚಿ ಬೀಳ್ತಿರಾ. ಆ ಭೀಕರ ಮೇಘಸ್ಪೋಟ, ಧೀಡೀರ್ ಪ್ರವಾಹದ ವಿಡಿಯೋ ಲಿಂಕ್ ಅನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಟ್ವೀಟರ್ ನಲ್ಲಿರುವ ಈ ವಿಡಿಯೋವನ್ನು ಒಮ್ಮೆ ನೋಡಿದರೇ, ಧೀಡೀರ್ ಪ್ರವಾಹ ಹೇಗೆ ಹರಿದು ಬಂತು ಅನ್ನೋದು ಗೊತ್ತಾಗುತ್ತೆ.
बदरी विशाल जी सबकी रक्षा करना मेरे उत्तराखंड में
— Mamta Painuly Kale (@mamta_kale) August 5, 2025
🙏🏼🙏🏼🙏🏼🙏🏼
DANGEROUS ‼️landslide visuals from
Uttarkashi’s Tharali village
Cloudburst triggers flash floods in
Uttarakhand#Viral#Trending#Cloudburst#Uttarkashipic.twitter.com/aKTtw9LWRB
ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಯ್ತು ಇಡೀ ಊರು
ಉತ್ತರಾಖಂಡ್ನ ಉತ್ತರಕಾಶಿಯ ಧರಾಲಿ ಗ್ರಾಮವಿದು.. ಬೆಟ್ಟದ ಕೆಳಭಾಗದಲ್ಲಿ ಈ ಧರಾಲಿ ಗ್ರಾಮವಿತ್ತು.. ಬೆಟ್ಟದ ಮೇಲಿಂದ ಖಿರ್ ಗಂಗಾ ನದಿ ಹರಿದು ಬಂದು ಗ್ರಾಮದ ಮಧ್ಯ ಭಾಗದಿಂದ ಸಾಗ್ತಿತ್ತು. ಆದ್ರೆ ಮೇಘಸ್ಫೋಟದಿಂದ ಸಂಭವಿಸಿದ ಮಹಾ ಪ್ರವಾಹದಿಂದ ಈಗ ಇಲ್ಲೊಂದು ಗ್ರಾಮ ಇತ್ತು ಅನ್ನೋ ಸಣ್ಣ ಸುಳಿವು ಕೂಡ ಸಿಗ್ತಿಲ್ಲ. ಯಾಕಂದ್ರೆ ಬೆಟ್ಟದ ಮೇಲಿಂದ ಯಮನಂತೆ ಹರಿದು ಬಂದ ಕೆಸರು ಮಿಶ್ರಿತ ನೀರು ಎಲ್ಲವನ್ನೂ ಸ್ವಾಹ ಮಾಡಿದೆ. ಬೆಟ್ಟದಿಂದ ಹರಿದು ಬಂದ ನೀರು ಏಕಾಏಕಿ ಬುಡದಲ್ಲಿದ್ದ ಗ್ರಾಮಕ್ಕೆ ನುಗ್ಗಿದೆ.. ಪರಿಣಾಮ ಇಡೀ ಗ್ರಾಮದಲ್ಲಿದ್ದ ಮನೆಗಳು, ಹೋಟೆಲ್ಗಳು ಎಲ್ಲವೂ ಕೊಚ್ಚಿಕೊಂಡು ಹೋಗಿವೆ.. ಸಣ್ಣ ಅವಶೇಷಗಳು ಸಹ ನಿಮ್ಮ ಕಣ್ಣಿಗೆ ಕಾಣ್ತಿಲ್ಲ.. ಕಲ್ಲು ಬಂಡೆಗಳು.. ಮರದ ದಿಮ್ಮಿಗಳು ಎಲ್ಲವನ್ನೂ ತನ ಸೆಳೆಯಲ್ಲಿ ಸೆಳ್ಕೊಂಡು ಬಂದ ನೀರು, ನದಿ ಅಕ್ಕ ಪಕ್ಕದಲ್ಲಿದ್ದ ಕಟ್ಟಡಗಳನ್ನ ಕಣ್ಣು ಮಿಟುಕಿಸುವ ಕ್ಷಣದಲ್ಲೇ ನುಂಗಿ ಹಾಕಿದೆ.. ನಿಜಕ್ಕೂ ಎದೆಯನ್ನ ಝಲ್ ಅನ್ನಿಸುವಂತ ದೃಶ್ಯವಿದು..
25 ಹೋಟೆಲ್,ಮನೆಗಳು ನಾಶ
ಧರಾಲಿ ಗ್ರಾಮದಿಂದ ಸ್ವಲ್ಪ ದೂರದಲ್ಲಿರ ನಿಂತರು ಯಾರೋ ಈ ವಿಡಿಯೋವನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.. ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದ್ರೆ, ಎರಡಂತಸ್ತಿನ ಕಟ್ಟಡವೇ ಬೆಟ್ಟದಿಂದ ಹರಿದು ಬಂದ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ.. ಉತ್ತರಕಾಶಿ ಪ್ರವಾಸಿತಾಣ.. ಪ್ರವಾಸಿಗರಿಂದ ತುಂಬಿರೋ ಜಾಗ ಇದು.. ಹೀಗಾಗಿ ಇಲ್ಲಿ ಹೋಟೆಲ್ಗಳ ಸಂಖ್ಯೆ ಹೇರಳವಾಗಿಯೇ ಇರುತ್ತೆ.. ಆದ್ರೀಗ ಸಂಭವಿಸಿರೋ ರಣ ಬೀಕರ ಮೇಘಸ್ಫೋಟದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 25 ಕ್ಕೂ ಹೆಚ್ಚು ಹೋಟೆಲ್ಗಳು ಹಾಗೂ ನದಿ ಅಕ್ಕಪಕ್ಕದಲ್ಲಿದ್ದ ಮನೆಗಳು ಕೊಚ್ಚಿಕೊಂಡು ಹೋಗಿರುವ ಮಾಹಿತಿ ಸಿಕ್ಕಿದೆ.. ಆದ್ರೆ ಈ ಹೋಟೆಲ್ನಲ್ಲಿದ್ದವರು ಮನೆಯಲ್ಲಿದ್ದವರು ಬದುಕಿದಾರ? ಇಲ್ವಾ? ಅನ್ನೋ ಮಾಹಿತಿ ಕೂಡ ಸಿಗಬೇಕಿದೆ.
ಝಲ್ ಅನಿಸ್ತಿದೆ ಜನರ ಚೀರಾಟ
ಪ್ರಿಯ ವೀಕ್ಷಕರೇ ವಿಡಿಯೋದಲ್ಲಿರೋ ಕೂಗಾಟ ಚೀರಾಟ ಕೇಳ್ತಿದ್ರೆ ನಿಮಗೆ ಅರ್ಥ ಆಗಿರುತ್ತೆ.. ಪ್ರವಾಹದ ಭೀಕರತೆ ಎಷ್ಟಿದೆ ಅಂತ. ಬೆಟ್ಟದ ಮೇಲೆ ನಿಂತು ವಿಡಿಯೋ ಮಾಡ್ತಿರೋ ಚೀರಾಟ ಕೇಳ್ತಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ. ದೂರದಲ್ಲಿ ನಿಂತವರಿಗೆ ಮೇಲಿಂದ ಕಲ್ಲು ಮಣ್ಣು ಮಿಶ್ರಿತ ಕೆಸರು ಹರಿದು ಬರ್ತಿರೋದು ಕಂಡಿದೆ... ಇಲ್ಲಿಂದಲೇ ಜನರಿಗೆ ಓಡಿ ಓಡಿ ಅಂತಿದ್ದಾರೆ.. ಆದ್ರೆ ಸಮಯ ಮೀರಿ ಹೋಗಿತ್ತು... ರಭಸವಾಗ ನುಗ್ಗಿ ಬಂದ ಪ್ರವಾಹ ಇಡೀ ಊರನ್ನೆ ನುಂಗಿ ಹಾಕಿತ್ತು..
ಮೇಘಸ್ಪೋಟ ಸಂಭವಿಸಿ, ಧೀಢೀರ್ ಪ್ರವಾಹ ಹರಿದು ಬಂದಾಗ ಜನರ ಭಯ, ಆತಂಕದ ಕ್ಷಣಗಳು ಹೇಗಿದ್ದವು, ಆಗ ಜನರು ಹೇಳಿದ್ದೇನು ಅನ್ನೋದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋದಲ್ಲಿ ಧೀಡೀರ್ ಪ್ರವಾಹಕ್ಕೆ ಜನರು ಆತಂಕದ ಪ್ರತಿಕ್ರಿಯೆ ಹೇಗಿತ್ತು? ಅಂತ ನೋಡಿದರೇ,
ಓಡಿ... ಓಡಿ.. ಅರೇ.. ಓಡಿ ಓಡಿ.. ಅಯ್ಯೋ.. ಹೋಯ್ತು.. ಎಲ್ಲ ಹೋಯ್ತು.. ಹೇಯ್ ಫೋನ್ ಮಾಡು .. ಫೋನ್ ಮಾಡೋ.. ಫೋನ್ ಮಾಡಪ್ಪ.. ಅಯ್ಯೋ ದೇವರೇ.. ಎಲ್ಲ ಕೊಚ್ಚಿಕೊಂಡು ಹೋಯ್ತು.. ಸರ್ವನಾಶ ಆಯ್ತು..ಅಂತ ಜನರು ಹೇಳಿದ್ದಾರೆ.
ಮೇಘಸ್ಫೋಟ ಸಂಭವಿಸಿದ್ದೇಗೆ?
ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಮಂಗಳವಾರ ಮೇಘಸ್ಫೋಟ ಉಂಟಾಗಿದೆ.. ಇದ್ರಿಂದ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ಇದು ಗಂಗೋತ್ರಿ ಧಾಮಕ್ಕೆ ಹೋಗುವ ದಾರಿಯಲ್ಲಿ ಪ್ರಮುಖ ನಿಲ್ದಾಣವಾಗಿದೆ. ಜಿಲ್ಲಾ ಪೊಲೀಸರ ಪ್ರಕಾರ, ಹರ್ಸಿಲ್ ಪ್ರದೇಶದ ಖೀರ್ ಗಢ್ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದಿದ್ದಾರೆ.
ಧರಾಲಿಯಲ್ಲಿ ಬೆಟ್ಟದ ಮೇಲೆ ಖೀರ್ ಗಂಗಾ ನದಿಯಿದೆ.. ನೀವು ವಿಡಿಯೋದಲ್ಲಿ ನೋಡ್ಬಹುದು. ಮೇಘಸ್ಫೋಟದಿಂದ ನೀರು ರಭಸವಾಗಿ ಹರಿದು ಬಂದಿದೆ. ಅಲ್ಲಿ ಮನೆಗಳಿದ್ವು, ರೆಸ್ಟೋರೆಂಟ್ಗಳಿದ್ವು, ಹೋಟೆಲ್ಗಳಿದ್ವು. ನಾವು ಈಗಾಗಲೇ ರಕ್ಷಣಾ ತಂಡವನ್ನ ಅಲ್ಲಿಗೆ ಕಳಿಸಿದ್ದೇವೆ. ಸಧ್ಯಕ್ಕೆ ನೆಟ್ವರ್ಕ್ ಇಲ್ಲದೇ ಇರೋ ಕಾರಣಕ್ಕೆ ಸಂಪರ್ಕ ಮಾಡೋದಕ್ಕೆ ಸಾಧ್ಯವಾಗ್ತಿಲ್ಲ. ಕೆಲವರು ಸಾವನ್ನಪ್ಪಿರೋ ಬಗ್ಗೆಯೂ ಮಾಹಿತಿಯಿದೆ. ನಾಲ್ಕು ಜನರ ಪ್ರಾಣ ಹೋಗಿರಬಹುದು ಎನ್ನಲಾಗಿದೆ ಎಂದು ಉತ್ತರ ಕಾಶಿ ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ಹೇಳಿದ್ದಾರೆ
ಸ್ಥಳೀಯರು ಮತ್ತು ಪೊಲೀಸರ ಪ್ರಕಾರ ಬಹುತೇಕ ಈ ಗ್ರಾಮ ಇರೋದೆ ಅನುಮಾನ ಅಂತಿದ್ದಾರೆ.. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸೇನೆ ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳು ಪರಿಹಾರ ಮತ್ತು ರಕ್ಷಣಾ ಕೆಲಸ ನಡೆಸ್ತಿದ್ದು, ಧರಾಲಿ ಗ್ರಾಮಕ್ಕೆ ಹರಿದು ಬಂದ ಪ್ರವಾಹದ ನೀರು, ಮನೆಗಳು, ಅಂಗಡಿಗಳು ಮತ್ತು ರಸ್ತೆಗಳನ್ನು ಕೊಚ್ಚಿಹಾಕಿದೆ. ಇಡೀ ಊರಿನ ತುಂಬಾ ಬರೀ ಅವಶೇಷಗಳು ಹಾಗೂ ಮಣ್ಣಿನ ಜಾಡನ್ನು ಮಾತ್ರವೇ ಬಿಟ್ಟಿದೆ. ಇದರ ಭೀಕರತೆ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ರಾಮವೇ ಸರ್ವನಾಶ! ಉಳಿದಿದ್ದು ಒಂಟಿ ಮನೆ!
ಈ ದೃಶ್ಯವನ್ನ ಸೂಕ್ಷ್ಮವಾಗಿ ಗಮನಿಸಿ.. ಬೆಟ್ಟದ ಮೇಲಿಂದ ಹರಿದು ನೀರು ಇಡೀ ಗ್ರಾಮವನ್ನೆ ಸ್ವಾಹ ಮಾಡಿದೆ.. ನಡೆದ ಅನಾಹುತಕ್ಕೆ ಒಂಟಿಯಾಗಿ ಉಳಿದಿರೋ ಈ ಮನೆಯೇ ಸಾಕ್ಷಿ ನುಡಿಯುತ್ತಿದೆ. ಅಕ್ಕ ಪಕ್ಕದಲ್ಲಿದ್ದ ಒಂದೇ ಒಂದು ಕಟ್ಟಡ ಉಳಿದಿಲ್ಲ.. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದೊಂದೆ ಮನೆ ಉಳಿದು ಕೊಂಡಿದೆ.. ಇನ್ನೂ ಆ ಮನೆಯಲ್ಲಿದ್ದವರ ಪರಿಸ್ಥಿತಿಯಂತೂ ಆ ದೇವರೇ ಬಲ್ಲ.. ಬದುಕಿದ್ದಾರೋ, ಇಲ್ವೋ? ಅನ್ನೋದು ಗೊತ್ತಿಲ್ಲ..
60ಕ್ಕೂ ಹೆಚ್ಚು ಜನ ಜಲ ಸಮಾಧಿ?
ಮೇಘಸ್ಫೋಟದ ತೀವ್ರತೆ ನೋಡಿದ್ರೆ ಎದೆ ಝಲ್ ಅಂದುಬಿಡುತ್ತೆ.. ಇನ್ನೂ ಈ ಮೇಘಸ್ಫೋಟದ ಪ್ರವಾಹಕ್ಕೆ ಸಿಲುಕಿದವರ ಪರಿಸ್ಥಿತಿ ಏನಾಗಿರಬೇಡ.. ಕನಿಷ್ಠ ಪಕ್ಷ ಬರೀ ನೀರು ಇದ್ದಿದ್ರೆ, ಅದೇಗೋ ಜೀವ ಉಳಿಸಕೊಳ್ಳಬಹುದು.. ಆದ್ರೆ, ಮಣ್ಣು ಮಿಶ್ರಿ ಕೆಸರಲ್ಲಿ ಬದುಕಿ ಬರೋದಾದ್ರೂ ಹೇಗೆ.. ಮೇಘಸ್ಪೋಟಕ್ಕೆ ಗ್ರಾಮಕ್ಕೆ ಗ್ರಾಮ ಕೊಚ್ಚಿಹೋಗಿದ್ದು, ಸಧ್ಯದ ಮಾಹಿತಿ ಪ್ರಕಾರ 60 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ನಾಲ್ಕು ಜನರ ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಸಿಕ್ಕಿದೆ.. ಸದ್ಯ ಪ್ರವಾಹದಲ್ಲಿ ಸಿಲುಕಿರೋ ಜನರನ್ನ ಭಾರತೀಯ ಸೇನೆ ರಕ್ಷಣೆ ಮಾಡ್ತಿದ್ದು, 20 ಕ್ಜೂ ಹೆಚ್ಚು ಜನರನ್ನ ಕಾಪಾಡಿರೋ ಮಾಹಿತಿ ಸಿಕ್ಕಿದೆ.
ಧರಾಲಿಯಲ್ಲಿ ಮೇಘಸ್ಫೋಟ ಸಂಭವಿಸಿರೋ ಬಗ್ಗೆ ಮಾಹಿತಿ ಸಿಕ್ಕಿದೆ.. ಭೀಕರ ಪ್ರವಾಹ ಬಂದಿದ್ದು, ಈ ಟೈಮ್ನಲ್ಲಿ ಆದಷ್ಟು ಬೇಗ ರಕ್ಷಣೆ ಮಾಡೋದು ನಮ್ಮ ಕೆಲಸವಾಗಿದೆ. ಜಿಲ್ಲಾಡಳಿತ ಘಟನೆ ಸ್ಥಳಕ್ಕೆ ಹೋಗ್ತಿದೆ. ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಜಂಟಿಯಾಗಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಎಲ್ಲರನ್ನ ಸುರಕ್ಷಿತವಾಗಿ ರಕ್ಷಣೆ ಮಾಡೋದು ನಮ್ಮ ಕರ್ತವ್ಯವಾಗಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
उत्तरकाशी में नदी के बढ़े जल स्तर व आस-पास के क्षेत्रों का स्थलीय निरीक्षण कर अधिकारियों को 24 घंटे अलर्ट मोड पर रहने के निर्देश दिए।
— Pushkar Singh Dhami (@pushkardhami) August 6, 2025
धराली उत्तरकाशी में सभी सरकारी एजेंसियां, विभाग और सेना आपसी समन्वय से राहत एवं बचाव कार्य में लगे हुए हैं। बीती रात 130 से ज्यादा लोगों को… pic.twitter.com/9kWrnt9Uwg
ಸದ್ಯದ ಮಾಹಿತಿ ಪ್ರಕಾರ ಐದು ಜನ ಸಾವನ್ನಪ್ಪಿರೋ ಮಾಹಿತಿ ಸಿಕ್ಕಿದೆ.. ಆದ್ರೆ ಮೇಘಸ್ಫೋಟದ ಭೀಕರತೆ ನೋಡಿದ್ರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದ್ದು, ಅದೆಷ್ಟು ಬಡಪಾಯಿಗಳ ಜೀವ ಹೋಗಿದ್ಯೋ ಗೊತ್ತಿಲ್ಲ.
ಮೇಘ ಸ್ಪೋಟ ಅಂದರೇನು?
ಕಡಿಮೆ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಹೆಚ್ಚಿನ ಮಳೆಯಾಗುವುದನ್ನು ಮೇಘಸ್ಪೋಟ ಎಂದು ಕರೆಯುತ್ತೇವೆ. ಕೇವಲ 30 ನಿಮಿಷದಲ್ಲಿ 5 ಸೆಂಟಿಮೀಟರ್ ಹಾಗೂ ಅದಕ್ಕೂ ಹೆಚ್ಚಿನ ಮಳೆಯಾಗುವುದನ್ನು ಮೇಘಸ್ಪೋಟ ಎಂದು ಕರೆಯಲಾಗುತ್ತೆ. ಮೇಘಸ್ಪೋಟ ಹೆಚ್ಚಾಗಿ ಬೆಟ್ಟಗುಡ್ಡ, ಹಿಮಾಲಯ ಪ್ರದೇಶಗಳಲ್ಲಿ ಸಂಭವಿಸುತ್ತಾವೆ.
10 ಕಿಲೋಮೀಟರ್ ಚದರ ಪ್ರದೇಶದಲ್ಲಿ ಕೇವಲ ಒಂದು ಗಂಟೆಯಲ್ಲಿ 10 ಸೆಂಟಿಮೀಟರ್ ನಷ್ಟು ಭಾರಿ ಮಳೆ ಸುರಿದರೇ, ಅದನ್ನು ಮೇಘಸ್ಪೋಟ ಎಂದು ಕರೆಯುತ್ತೇವೆ. ಬೆಟ್ಟಗುಡ್ಡ ಪ್ರದೇಶಗಳಲ್ಲಿ ಮೇಘಸ್ಪೋಟ ಸಾಮಾನ್ಯ.
ಓರೋಗ್ರಾಫಿಕ್ ಲಿಫ್ಟ್ ನ ಕಾರಣದಿಂದ ಮೇಘಸ್ಪೋಟ ಸಂಭವಿಸುತ್ತೆ. ಮೇಘಸ್ಪೋಟ ಸಂಭವಿಸುವುದನ್ನು ಮುಂಚಿತವಾಗಿಯೇ ತಿಳಿಸಲು ಹವಾಮಾನ ಇಲಾಖೆಗೆ ಸಾಧ್ಯವಾಗಲ್ಲ. ಮೇಘಸ್ಪೋಟ ಸಂಭವಿಸಿದಾಗ, ಧೀಡೀರ್ ಪ್ರವಾಹ (ಪ್ಲ್ಯಾಶ್ ಫ್ಲಡ್ )ಮತ್ತು ಭೂ ಕುಸಿತ ಸಂಭವಿಸುತ್ತಾವೆ. ಎರಡು ಮೂರು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆ ಮಾರ್ಗದಲ್ಲೂ ಮೇಘಸ್ಪೋಟ ಸಂಭವಿಸಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.