/newsfirstlive-kannada/media/media_files/2025/12/24/wife-poornima-murders-husband-ashok-2025-12-24-13-59-33.jpg)
ಪತಿ ಅಶೋಕ್ ಕೊಲೆಗೈದ ಪತ್ನಿ ಪೂರ್ಣಿಮಾ, ಲವ್ವರ್ ಮಹೇಶ್, ಸಾಯಿಕುಮಾರ್
ಹೈದರಾಬಾದ್ ನಲ್ಲಿ ಲವ್ವರ್ ಜೊತೆ ಸೇರಿ ಹೆಂಡತಿಯೇ ಗಂಡನ ಕೊಲೆ ಮಾಡಿದ್ದಾಳೆ.
ಸುಂದರಿ ಹೆಂಡತಿ ಗಂಡನೇಕೆ ಕೊಲ್ಲುತ್ತಿ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
2011 ರಲ್ಲಿ ಪೂರ್ಣಿಮಾ ಎಂಬಾಕೆ ಅಶೋಕ್ ನನ್ನು ಮದುವೆಯಾಗಿದ್ದಳು. ಇವರ ದಾಂಪತ್ಯಕ್ಕೆ 11 ವರ್ಷದ ಮಗನಿದ್ದಾನೆ . ಪತಿ ಅಶೋಕ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದರು. ಆದರೇ, ಪತ್ನಿ ಪೂರ್ಣಿಮಾಗೆ ಮಹೇಶ್ ಎಂಬಾತನ ಜೊತೆ ಅಫೇರ್ ಶುರುವಾಗಿತ್ತು. ಇದು ಪತಿ ಅಶೋಕ್‌ಗೆ ಗೊತ್ತಾಗಿ ಬೇರೆ ಏರಿಯಾಗೆ ಅಶೋಕ್ ಮನೆ ಶಿಫ್ಟ್ ಮಾಡಿದ್ದರು . ಆದರೇ, ತಮ್ಮ ಅನೈತಿಕ ಸಂಬಂಧಕ್ಕೆ ಪತಿ ಅಶೋಕ್ ಅಡ್ಡಿಯಾಗುತ್ತಾನೆಂದು ಕೊಲೆ ಮಾಡಲು ಪೂರ್ಣಿಮಾ, ಮಹೇಶ್ ನಿರ್ಧಾರ ಮಾಡಿದ್ದರು. ಪತಿ ಅಶೋಕ್ ನನ್ನು ಕೊಲೆ ಮಾಡಿದರೇ, ತಮ್ಮ ಅಫೇರ್ ಅನ್ನು ನಿರಾತಂಕವಾಗಿ ಮುಂದುವರಿಸಬಹುದೆಂದು ನಿರ್ಧಾರ ಮಾಡಿದ್ದರು.
ಅಶೋಕ್ ಮನೆಗೆ ಹೋದ ಮಹೇಶ್, ಸ್ನೇಹಿತ ಸಾಯಿ ಕುಮಾರ್ ಜೊತೆ ಸೇರಿ ಅಶೋಕ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಕುತ್ತಿಗೆ ಹಿಸುಕಿ ಅಶೋಕ್ ನನ್ನು ಮಹೇಶ್ , ಸಾಯಿ ಕುಮಾರ್, ಪೂರ್ಣಿಮಾ ಹತ್ಯೆಗೈದಿದ್ದರು. ಬಳಿಕ ಹಾರ್ಟ್ ಅಟ್ಯಾಕ್ ನಿಂದ ಅಶೋಕ್ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಪೂರ್ಣಿಮಾ ಕಥೆ ಕಟ್ಟಿದ್ದಳು. ಬಾತ್ ರೂಮುನಲ್ಲಿ ಪ್ರಜ್ಞೆ ತಪ್ಪಿ ಅಶೋಕ್ ಬಿದ್ದಿದ್ದರು. ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ಪೂರ್ಣಿಮಾನೇ ಪೊಲೀಸರಿಗೆ ದೂರು ನೀಡಿದ್ದಳು. ಕೊಲೆ ಮಾಡಿದ ಬಳಿಕ ಅಶೋಕ್‌ನ ಬಟ್ಟೆಗಳನ್ನು ಬದಲಾಯಿಸಿದ್ದರು.
ಆದರೇ, ಹೈದರಾಬಾದ್ ಮೇಡಿಪಲ್ಲಿ ಪೊಲೀಸರಿಗೆ ಅಶೋಕ್ ಶವ ನೋಡಿದಾಗ ಅನುಮಾನ ಶುರುವಾಗಿತ್ತು. ಅಶೋಕ್ ಶವದ ಕುತ್ತಿಗೆ ಮೇಲೆ ಗಾಯದ ಗುರುತುಗಳಿದ್ದವು. ಜೊತೆಗೆ ಅಶೋಕ್ ಹಲ್ಲುಗಳು ಮುರಿದಿದ್ದವು.
ಆರೋಪಿಗಳು ವ್ಯವಸ್ಥಿತವಾಗಿ ಅಶೋಕ್ ನನ್ನು ಕೊಲೆ ಮಾಡಿದ್ದರು. ಬಳಿಕ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಕೂಡ ಯತ್ನಿಸಿದ್ದರು. ಆದರೇ, ಪೊಲೀಸರು ವೈಜ್ಞಾನಿಕವಾಗಿ ಕೇಸ್ ತನಿಖೆ ನಡೆಸಿದ್ದರು. ಪೋರೆನ್ಸಿಕ್ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿ, ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ತನಿಖೆ ನಡೆಸಿದ್ದರು. ಇದರಿಂದಾಗಿ ಅಶೋಕ್ ಸಾವು, ಹಾರ್ಟ್ ಅಟ್ಯಾಕ್ ನಿಂದ ಆಗಿಲ್ಲ. ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರಿಗೆ ತನಿಖೆಯಿಂದ ದೃಢಪಟ್ಟಿತ್ತು.
ತನಿಖೆ ವೇಳೆ ಅಶೋಕ್ ಮನೆಗೆ ಮಹೇಶ್ ಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ಮಹೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/12/24/wife-poornima-murders-husband-ashok-1-2025-12-24-14-08-06.jpg)
ಹೀಗಾಗಿ ಪತ್ನಿ ಪೂರ್ಣಿಮಾ, ಆರೋಪಿ ಮಹೇಶ್, ಸಾಯಿಕುಮಾರ್ ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us