Advertisment

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ದಿಢೀರ್ ಏರಿಕೆ..!

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಿಸಿ ಇದೀಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಮಾರುಕಟ್ಟೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೇ ಸೈಲೆಂಟ್ ಆಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ.

author-image
Ganesh Kerekuli
oil
Advertisment

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಿಸಿ ಇದೀಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಮಾರುಕಟ್ಟೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೇ ಸೈಲೆಂಟ್ ಆಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ.

Advertisment

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿಗಳವರೆಗೆ ದಿಢೀರ್ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗದೇ ಹೋದರೆ, ಮುಂಬರುವ ವಾರದಲ್ಲಿ ಪ್ರತಿ ಲೀಟರ್ ಎಣ್ಣೆ ಮೇಲೆ ಬರೋಬ್ಬರಿ 10 ರಿಂದ 15 ರೂಪಾಯಿಗಳವರೆಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್: ಟೀಮ್ ಇಂಡಿಯಾದ ಬಲಿಷ್ಟ ಪ್ಲೇಯಿಂಗ್ 11 ಹೇಗಿರಲಿದೆ..?

ಯಾವ ಬ್ರ್ಯಾಂಡ್ ಎಣ್ಣೆ ಬೆಲೆ ಎಷ್ಟು ಏರಿಕೆಯಾಗಿದೆ? 

  • ಗೋಲ್ಡ್ ವಿನ್ನರ್ (Gold Winner): ಕಳೆದ ವಾರ ಒಂದು ಲೀಟರ್‌ಗೆ 161 ರೂ. ಇತ್ತು. ಈ ವಾರ 165 ರೂ.ಗೆ ಏರಿಕೆಯಾಗಿದೆ.
  • ಸನ್ ಫ್ಯೂರ್ (Sunpure): ಕಳೆದ ವಾರ ಒಂದು ಲೀಟರ್‌ಗೆ 161 ರೂ. ಇತ್ತು, ಈ ವಾರ 165 ರೂ. ಆಗಿದೆ.
  • ಫಾರ್ಚೂನ್ (Fortune): ಕಳೆದ ವಾರ ಒಂದು ಲೀಟರ್‌ಗೆ 152 ರೂ. ಇತ್ತು, ಈ ವಾರ 157 ರೂ.ಗೆ ತಲುಪಿದೆ.
  • ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳ ಮೇಲೂ ಸರಾಸರಿ 4 ರಿಂದ 5 ರೂಪಾಯಿಗಳವರೆಗೆ ದರ ಏರಿಕೆ ಮಾಡಲಾಗಿದೆ.
Advertisment

ಯುದ್ಧದ ನೆಪ ಹೇಳಿ ದಿಢೀರ್ ಬೆಲೆ ಹೆಚ್ಚಿಸಿದ್ರಾ ವರ್ತಕರು?

ಅಡುಗೆ ಎಣ್ಣೆ ಬೆಲೆ ಏರಿಕೆಯ ಹಿಂದೆ ವರ್ತಕರ ಕೈವಾಡವಿದೆ ಎಂಬ ಅನುಮಾನಗಳು ದಟ್ಟವಾಗಿವೆ. ಮಾರುಕಟ್ಟೆಯಲ್ಲಿ ಮತ್ತು ಗೋದಾಮುಗಳಲ್ಲಿ ಇನ್ನೂ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ಸಂಗ್ರಹ (Stock) ಇದೆ. ದಾಸ್ತಾನು ಇದ್ದರೂ ಸಹ, ಕೇವಲ ಯುದ್ಧದ ನೆಪ ಹೇಳಿ ವರ್ತಕರು ಉದ್ದೇಶಪೂರ್ವಕವಾಗಿ ಬೆಲೆ ಏರಿಕೆ ಮಾಡಿ ಕಾಸು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃತಕ ಅಭಾವ ಸೃಷ್ಟಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆಯತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ: ಸಿಬಿಐ ತನಿಖೆಗೆ ಜೀವರಾಜ್ ಒತ್ತಾಯ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cooking Oil Price Hike
Advertisment
Advertisment
Advertisment