/newsfirstlive-kannada/media/media_files/2025/12/09/highcourt-judge-swaminathan-2025-12-09-17-03-37.jpg)
ಮದ್ರಾಸ್ ಹೈಕೋರ್ಟ್ ಜಡ್ಜ್ ಜಿ.ಆರ್. ಸ್ವಾಮಿನಾಥನ್
ಮದ್ರಾಸ್ ಹೈಕೋರ್ಟ್ ಜಡ್ಜ್ ಜಿ.ಆರ್.ಸ್ವಾಮಿನಾಥನ್ ವಿರುದ್ಧ ಮಹಾಭಿಯೋಗ ನೋಟೀಸ್ ಅನ್ನು ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್ ಓಂಬಿರ್ಲಾಗೆ ಸಲ್ಲಿಸಿದ್ದಾರೆ. ನೂರು ಸಂಸದರ ಸಹಿ ಇರುವ ಮಹಾಭಿಯೋಗ ನೋಟೀಸ್ ಸ್ಪೀಕರ್‌ಗೆ ಸಲ್ಲಿಕೆಯಾಗಿದೆ. ಮಧುರೈ ಪೀಠದ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರನ್ನು ಜಡ್ಜ್ ಸ್ಥಾನದಿಂದ ಪದಚ್ಯುತಿಗೊಳಿಸಲು ಕೋರಿ ನೋಟೀಸ್ ನೀಡಲಾಗಿದೆ.
ಮಧುರೈ ಬಳಿಯ ತಿರುಪರನ್ ಕುಂಡ್ರಂ ಬೆಟ್ಟದ ಕಲ್ಲಿನ ದೀಪಸ್ತಂಭ ದೀಪೋಥೋನ್ ನಲ್ಲಿ ದೀಪ ಬೆಳಗಲು ಅವಕಾಶ ನೀಡಿ ಜಸ್ಚೀಸ್ ಸ್ವಾಮಿನಾಥನ್ ಆದೇಶ ನೀಡಿದ್ದರು. ಹಿಂದೂ ಭಕ್ತರಿಗೆ ದೀಪ ಬೆಳಗಲು ಅವಕಾಶ ನೀಡಿ ಆದೇಶ ನೀಡಿದ್ದ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರ ಆದೇಶಕ್ಕೆ ಡಿಎಂಕೆ ಪಕ್ಷ ವಿರೋಧ ವ್ಯಕ್ತಪಡಿಸಿತ್ತು.
ಅದೇ ಬೆಟ್ಟದಲ್ಲಿ ಸಿಕಂದರ್ ಬಾದ್‌ಶಾ ದರ್ಗಾ ಇದ್ದು, ಹೈಕೋರ್ಟ್ ಆದೇಶದಿಂದ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತೆ ಎಂದು ಡಿಎಂಕೆ ಪಕ್ಷ ಹಾಗೂ ಸರ್ಕಾರ ಹೇಳಿತ್ತು.
ಲೋಕಸಭೆಯಲ್ಲಿ ಡಿಎಂಕೆ ಪ್ರಸ್ತಾಪಿಸಿದ ಮಹಾಭಿಯೋಗ ನೋಟೀಸ್ ಗೆ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ನಿಂದ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಸ್ಪೀಕರ್ ಓಂಬಿರ್ಲಾ ಭೇಟಿಯಾದ ನಿಯೋಗದಲ್ಲಿ ಭಾಗಿಯಾಗಿದ್ದರು. ಹೀಗಾಗಿ ನೂರು ಮಂದಿ ಲೋಕಸಭಾ ಸದಸ್ಯರ ಸಹಿ ಉಳ್ಳ ನೋಟೀಸ್ ಸ್ಪೀಕರ್‌ಗೆ ಸಲ್ಲಿಕೆಯಾಗಿದೆ. ಈಗ ಲೋಕಸಭೆ ಈ ಬಗ್ಗೆ ತನಿಖೆಗೆ ಮೂವರು ಸದಸ್ಯರ ತನಿಖಾ ಸಮಿತಿ ರಚಿಸಲಿದೆ. ಬಳಿಕ ಅದರ ವರದಿ ಆಧಾರದ ಮೇಲೆ ಲೋಕಸಭೆಯಲ್ಲಿ ಚರ್ಚೆ ನಿಗದಿಯಾಗಲಿದೆ.
ಹಿಂದೂ ಭಕ್ತರಿಗೆ ಬೆಟ್ಟದಲ್ಲಿ ದೀಪ ಬೆಳಗಲು ಅವಕಾಶ ನೀಡಿರುವ ಹೈಕೋರ್ಟ್ ಜಡ್ಜ್ ಜಿ.ಆರ್.ಸ್ವಾಮಿನಾಥನ್ ಅವರ ಆದೇಶವನ್ನು ಹಿಂದೂಗಳು ಸ್ವಾಗತಿಸುತ್ತಿದ್ದಾರೆ. ಹೀಗಾಗಿ ಕೇಂದ್ರದ ಆಡಳಿತರೂಢ ಎನ್‌ಡಿಎ, ಜಡ್ಜ್ ಪರ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಹಾಭಿಯೋಗಕ್ಕೆ ಲೋಕಸಭೆಯಲ್ಲಿ ಸೋಲಾಗುವ ಸಾಧ್ಯತೆಯೇ ಹೆಚ್ಚು.
/filters:format(webp)/newsfirstlive-kannada/media/media_files/2025/12/09/madras-high-court-2025-12-09-17-06-03.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us