/newsfirstlive-kannada/media/media_files/2025/12/24/new-airlines-to-launch-in-2026-2025-12-24-17-56-26.jpg)
ಹೊಸ ಏರ್ ಲೈನ್ಸ್ ಆರಂಭಕ್ಕೆ ಕೇಂದ್ರದ ಒಪ್ಪಿಗೆ!
ಭಾರತದಲ್ಲಿ ಸದ್ಯ ವಿಮಾನಯಾನ ಕ್ಷೇತ್ರದಲ್ಲಿ ಎರಡು ಕಂಪನಿಗಳ ಏಕಸ್ವಾಮ್ಯವಿದೆ. ಇಂಡಿಗೋ ಮತ್ತು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಶೇ.90 ರಷ್ಟು ಪ್ರಯಾಣಿಕರನ್ನು ತಮ್ಮತ್ತ ಸೆಳೆದಿವೆ. ಈ ತಿಂಗಳ ಆರಂಭದಲ್ಲಿ ಇಂಡಿಗೋ ಸಂಸ್ಥೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿತ್ತು ನಾಲ್ಕೈದು ದಿನ ಸಾವಿರಾರು ವಿಮಾನಗಳ ಹಾರಾಟ ರದ್ದಾಯಿತು. ಇದರಿಂದ ದೇಶದ ಜನರು ತೊಂದರೆ ಅನುಭವಿಸಿದ್ದರು. ಇದರಿಂದಾಗಿ ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯದ ಬದಲು ಹೆಚ್ಚಿನ ಏರ್ ಲೈನ್ಸ್ ಗಳಿಗೆ ಅವಕಾಶ ಕೊಡಬೇಕು. ಹೆಚ್ಚಿನ ಏರ್ ಲೈನ್ಸ್ ಗಳು ಇದ್ದಾಗ, ಒಂದೇ ಕಂಪನಿಯ ಮೇಲೆ ಪ್ರಯಾಣಿಕರು ಅವಲಂಬನೆ ಆಗುವುದನ್ನು ತಪ್ಪಿಸಬಹುದು ಎಂಬೆಲ್ಲಾ ಚರ್ಚೆಗಳು ನಡೆದಿದ್ದವು.
ಹೀಗಾಗಿ ಈಗ ಕೇಂದ್ರ ಸರ್ಕಾರ ಹೆಚ್ಚಿನ ಏರ್ ಲೈನ್ಸ್ ಗಳಿಗೆ ಅನುಮತಿ ನೀಡುತ್ತಿದೆ. ಹೆಚ್ಚಿನ ಏರ್ ಲೈನ್ಸ್ ಗಳ ನಡುವೆ ಸ್ಪರ್ಧೆ ಇದ್ದಷ್ಟು ಜನರಿಗೆ ಅನುಕೂಲವಾಗುತ್ತೆ.
ಹೀಗಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಕಳೆದೊಂದು ವಾರದಲ್ಲಿ ಮೂರು ಖಾಸಗಿ ಏರ್ ಲೈನ್ಸ್ ಗಳ ಆರಂಭಕ್ಕೆ ಅನುಮತಿ ನೀಡಿದೆ. ಅಂದರೇ, ಏರ್ ಲೈನ್ಸ್ ಆರಂಭಿಸಲು ತನ್ನ ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಈ ಮಾಹಿತಿಯನ್ನು ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು ಅಧಿಕೃತವಾಗಿ ಟ್ವೀಟರ್ ನಲ್ಲಿ ನೀಡಿದ್ದಾರೆ.
ಶಂಖ್ ಏರ್ , ಆಲ್ ಹಿಂದ್ ಏರ್ ಮತ್ತು ಪ್ಲೈ ಎಕ್ಸ್ ಪ್ರೆಸ್ ಕಂಪನಿಗಳಿಗೆ ಕೇಂದ್ರ ಸರ್ಕಾರವು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಈ ಮೂಲಕ ಹೊಸ ಹೊಸ ಖಾಸಗಿ ಏರ್ ಲೈನ್ಸ್ ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಕಳೆದ ಒಂದು ವಾರದಿಂದ, ಭಾರತೀಯ ಆಕಾಶದಲ್ಲಿ ಹಾರಲು ಬಯಸುವ ಹೊಸ ವಿಮಾನಯಾನ ಸಂಸ್ಥೆಗಳಾದ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್‌ಗಳ ತಂಡಗಳನ್ನು ಭೇಟಿಯಾಗಿ ಸಂತೋಷವಾಗಿದೆ.
ಶಂಖ್ ಏರ್ ಈಗಾಗಲೇ ಸಚಿವಾಲಯದಿಂದ NOC ಪಡೆದಿದ್ದರೂ, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಈ ವಾರ ತಮ್ಮ NOC ಗಳನ್ನು ಪಡೆದಿವೆ.
ಗೌರವಾನ್ವಿತ ಪ್ರಧಾನಿ ಶ್ರೀ
@narendramodi
ಅವರ ಸರ್ಕಾರದ ನೀತಿಗಳಿಂದಾಗಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತೀಯ ವಿಮಾನಯಾನದಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಸಚಿವಾಲಯದ ಪ್ರಯತ್ನವಾಗಿದೆ. ಉಡಾನ್‌ನಂತಹ ಯೋಜನೆಗಳು, ಸಣ್ಣ ವಿಮಾನಯಾನ ಸಂಸ್ಥೆಗಳಾದ ಸ್ಟಾರ್ ಏರ್, ಇಂಡಿಯಾ ಒನ್ ಏರ್, ಫ್ಲೈ91 ಇತ್ಯಾದಿಗಳು ದೇಶದೊಳಗಿನ ಪ್ರಾದೇಶಿಕ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಟ್ಟಿವೆ. ಮತ್ತು ಮತ್ತಷ್ಟು ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ ಎಂದು ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು ಟ್ವೀಟ್ ಮಾಡಿದ್ದಾರೆ.
Over the last one week, pleased to have met teams from new airlines aspiring to take wings in Indian skies—Shankh Air, Al Hind Air and FlyExpress.
— Ram Mohan Naidu Kinjarapu (@RamMNK) December 23, 2025
While Shankh Air has already got the NOC from Ministry, Al Hind Air and FlyExpress have received their NOCs in this week.
It has… pic.twitter.com/oLWXqBfSFU
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us