/newsfirstlive-kannada/media/media_files/2025/08/15/pm_modi_red_port_1-2025-08-15-08-15-22.jpg)
ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು. ಇದಾದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿಯವರು, ಸಂವಿಧಾನ ನಿರ್ಮಾತೃಗಳಿಗೆ ಕೋಟಿ ಕೋಟಿ ನಮನಗಳು, 140 ಕೋಟಿ ಜನರಲ್ಲೂ ಸ್ವತಂತ್ರ್ಯೋತ್ಸವ ಸಂಭ್ರಮ ತುಂಬಿದೆ. ಆಪರೇಷನ್ ಸಿಂಧೂರುನಿಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿದೆ ಎಂದು ಹೇಳಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ದೇಶದ್ಯಾಂತ ಹರ್ ಘರ್ ತಿರಂಗಾ ಸಂಭ್ರಮ ಮನೆ ಮಾಡಿದೆ. 140 ಕೋಟಿ ಜನರಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ ತುಂಬಿದೆ. ನಾರಿ ಶಕ್ತಿಯರು ಸ್ವಾತಂತ್ರ್ಯಕ್ಕೆ ಶಕ್ತಿ ನೀಡಿದ್ದಾರೆ. ಮಹಾತ್ಮ ಗಾಂಧಿ ಆಶಯದಂತೆ ಸಂವಿಧಾನ ರಚನೆ ಆಗಿದೆ. ಸಂವಿಧಾನ ನಿರ್ಮಾತೃಗಳಿಗೆ ಕೋಟಿ ಕೋಟಿ ನಮನಗಳು. ಸಂವಿಧಾನ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ನಡೆದ ಮೇಲೆ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರು ಮೂಲಕ ತಕ್ಕ ಉತ್ತರ ನೀಡಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್. ಆಪರೇಷನ್ ಸಿಂಧೂರು ಭಾರತದ ಹೊಸ ಭರವಸೆ ಆಗಿದೆ. ನಮ್ಮ ಸೇನೆ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ. ಉಗ್ರವಾದವಾದವು ಯಾವಾಗಲೂ ಮಾನವನಿಗೆ ಕಂಟಕವಾಗಿದೆ. ನ್ಯೂಕ್ಲೀಯರ್ ಬ್ಲ್ಯಾಕ್ ಮಾಡಿದವರಿಗೆ ವೀರ ಯೋಧರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯ ಕೆಂಪು ಕೋಟೆಯಲ್ಲಿ 12ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ನಮ್ಮ ಪ್ರಾಣಕ್ಕಿಂತ ದೇಶ ಮುಖ್ಯ. ಕೋಟ್ಯಂತರ ಜನರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಪಹಲ್ಗಾಮ್ನಲ್ಲಿ ಧರ್ಮ ಕೇಳಿ ಜನರನ್ನು ಹತ್ಯೆ ಮಾಡಲಾಗಿದೆ. ಮಕ್ಕಳ ಮುಂದೆಯೇ ಪೋಷಕರನ್ನು ಮುಗಿಸಲಾಗಿದೆ. ಇದಕ್ಕೆ ನಾವು ಉತರ ಕೊಟ್ಟಿದ್ದೇವೆ. ಉಗ್ರರಿಗೆ ಮುಂದೆಯೂ ತಕ್ಕ ಉತ್ತರ ನೀಡಲಾಗುತ್ತದೆ. ರಕ್ತ ಮತ್ತು ನೀರು ಒಂದೇ ಬಾರಿಗೆ ಹರಿಯುವುದಿಲ್ಲ ಎಂದು ಪ್ರಧಾನಿ ಮೋದಿಯವರು ಸಂದೇಶ ರವಾನೆ ಮಾಡಿದ್ದಾರೆ.
ನಮ್ಮ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಕಂಡು ಎದುರಾಳಿ ರಾಷ್ಟ್ರ ಭಯ ಬಿದ್ದಿದೆ. ಆತ್ಮ ನಿರ್ಭಾರದಿಂದ ಈ ಮಹತ್ತರವಾದ ಸಾಧನೆ ಸಾಧ್ಯವಾಗಿದೆ. ಆಪರೇಷನ್ ಸಿಂಧೂರುನಲ್ಲಿ ಮೇಡ್ ಇನ್ ಇಂಡಿಯಾ ಬಳಕೆ ಆಗಿದೆ. ಇದರಿಂದ ನಮ್ಮ ಯೋಧರು ವಿರೋಧಿಗಳಿಗೆ ಕಲ್ಪನೆಗೆ ಮೀರಿ ಉತ್ತರಿಸಿದ್ದಾರೆ. ಆತ್ಮನಿರ್ಭರದಿಂದ ನಮ್ಮ ಸಾಮರ್ಥ್ಯ, ಶಕ್ತಿ, ವಿಶ್ವಾಸ ಹೆಚ್ಚಲಿದೆ. ನ್ಯೂಕ್ಲಿಯರ್ ಬ್ಲ್ಯಾಕ್ಮೇಲ್ ಬೆದರಿಕೆಗೆ ನಾವು ಹೆದರಲ್ಲ, ಬಗ್ಗುವುದಿಲ್ಲ. ನಮ್ಮ ಶಕ್ತಿ, ಸಾಮರ್ಥ್ಯ ಏನು ಎಂಬುದನ್ನು ತೋರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ