Advertisment

ಮುಂದಿನ 1 ತಿಂಗಳು ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಭಾರತ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬಗ್ಗೆ ಪ್ಯಾನಿಕ್ ಅಗತ್ಯವೇ ಇಲ್ಲ!

ಇರಾನ್ ದೇಶವು ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತಕ್ಕೆ ಗಲ್ಪ್ ರಾಷ್ಟ್ರಗಳಿಂದ ಕಚ್ಚಾತೈಲದ ಪೂರೈಕೆಗೆ ಸಮಸ್ಯೆಯಾಗಿತ್ತು. ಆದರೇ, ಈಗ ಭಾರತವು ತನ್ನ ಸ್ನೇಹಿ ರಾಷ್ಟ್ರ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ನಿರ್ಧರಿಸಿದೆ. ಇದಕ್ಕೆ ಅಮೆರಿಕಾದ ಒಪ್ಪಿಗೆಯೂ ಸಿಕ್ಕಿದೆ. ದೇಶದಲ್ಲಿ ಪೆಟ್ರೋಲ್ ಕೊರತೆ ಇಲ್ಲ.

author-image
Chandramohan
indian strategic petroleum reserves
Advertisment

ಇರಾನ್ ವರ್ಸಸ್​ ಇಸ್ರೇಲ್ ಹಾಗೂ ಅಮೆರಿಕ ಯುದ್ದದಿಂದ ವಿಶ್ವದ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ. ಅದರಲ್ಲೂ ಕಚ್ಚಾ ತೈಲದ ಬೆಲೆ ಏರಿಕೆಯಾಗೋ ಮೂಲಕ ವಾಹನ ಮಾಲೀಕರಿಗೆ ಶಾಕ್ ನೀಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದ್ರೂ ಭಾರತದಲ್ಲಿ ಯಾರೂ ಆತಂಕಪಡಬೇಕಿಲ್ಲ ಅಂತ ಕೇಂದ್ರ ಸರ್ಕಾರ ಅಭಯ ಕೊಟ್ಟಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಗತ್ತಿನ ಮೇಲೆ ಹಲವು ರೀತಿ ಪರಿಣಾಮಗಳು ಆಗುತ್ತಿವೆ. ಅರಬ್ ದೇಶಗಳಂತೂ ಪತರುಗುಟ್ಟುತ್ತಿವೆ. ಅದರಲ್ಲೂ ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡಿದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ದಿಢೀರ್​ ಗಗನಕ್ಕೆ ಏಣಿ ಹಾಕಿದೆ. ಆದ್ರೆ ಭಾರತ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ.
‘ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕವೇ ಮನವಿ ಮಾಡಿತ್ತು’
ನಿನ್ನೆಯಷ್ಟೇ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿದೆ. ಇಲ್ಲಿ ನಾವು ರಷ್ಯಾದಿಂದ ದುಡ್ಡು ಕೊಟ್ಟು ಖರೀದಿಸಲು ದೊಡ್ಡಣ್ಣ ಎಂಬ ದೊಣ್ಣೆನಾಯಕನ ಅಪ್ಪಣೆ ಬೇಕಾ ಅನ್ನೋ ಆಕ್ರೋಶವೂ ಹೆಚ್ಚಾಗಿದೆ. ಈ ಬೆನ್ನಲ್ಲೇ ತೈಲ ಖರೀದಿಸಲು ನಮಗೆ ಯಾರ ಅಪ್ಪಣೆಯೂ ಬೇಕಿಲ್ಲ ಅಂತ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕಡಿಮೆ ದರದಲ್ಲಿ ಲಭ್ಯವಿರುವ ಕಡೆ ಭಾರತ ತೈಲ ಖರೀದಿಸುತ್ತದೆ ಎಂದು ಟಕ್ಕರ್ ಕೊಟ್ಟಿದೆ. ಇತ್ತ ಭಾರತ ಈ ರೀತಿ ಕಟುವಾಗಿ ಉತ್ತರ ಕೊಡುತ್ತಿದ್ದಂತೆ ಅತ್ತ ಅಮೆರಿಕದಿಂದಲೇ ಹೊಸ ವಿಚಾರ ಬೆಳಕಿಗೆ ಬಂದಿದೆ. ರಷ್ಯಾ ತೈಲ ಖರೀದಿಸುವಂತೆ ಭಾರತಕ್ಕೆ ಅಮೆರಿಕವೇ ಮನವಿ ಮಾಡಿದೆ ಅಂತ ಅಮೆರಿಕದ ಇಂಧನ ಸಚಿವ ಕ್ರಿಸ್​ ತಿಳಿಸಿದ್ದಾರೆ. 
ಭಾರತಕ್ಕೆ ತೈಲದ ಬಗ್ಗೆ ಯಾವುದೇ ಆತಂಕ ಬೇಡ ಎಂದು ಕೇಂದ್ರ ಅಭಯ
ಇನ್ನು ಇಸ್ರೇಲ್ ವರ್ಸಸ್ ಇರಾನ್ ಯುದ್ಧದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಆಗಿದೆ. ಆದ್ರೆ ಭಾರತದಲ್ಲಿ ಇಂಧನ ಕೊರತೆಯಿಲ್ಲ. ಈ ಬಗ್ಗೆ ಗ್ರಾಹಕರು ಯಾವುದೇ ಚಿಂತೆ ಮಾಡಬೇಕಿಲ್ಲ ಅಂತ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅಭಯ ನೀಡಿದ್ದಾರೆ. ನಮ್ಮ ನಾಗರಿಕರಿಗೆ ಕೈಗೆಟುಕುವ ಮತ್ತು ಸುಸ್ಥಿರ ಇಂಧನ ನೀಡುವುದು ನಮ್ಮ ಮೊದಲ ಆದ್ಯತೆ. ನಾವು ಅದನ್ನು ಯಾವುದೇ ಒತ್ತಡಗಳ್ಳಿಲ್ಲದೆ ಮಾಡಿ ಮುಗಿಸುತ್ತಿದ್ದೇವೆ. ಭಾರತದಲ್ಲಿ ಇಂಧನ ಕೊರತೆಯಿಲ್ಲ. ಯಾರೂ ಕೂಡ ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಅಂತ ಸಚಿವರು X ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ತೈಲ ಕೊರತೆ ಇದೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
‘ಸಾಕಷ್ಟು ಇಂಧನ ಸಂಗ್ರಹವಿದೆ’
ಭಾರತದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಪೂರೈಕೆ ಮತ್ತು ವಿತರಣಾ ಜಾಲ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ನಿರಂತರ ಇಂಧನ ಪೂರೈಕೆಯನ್ನು ನಿರ್ವಹಿಸಲು ಇಂಡಿಯನ್ ಆಯಿಲ್ ಬದ್ಧವಾಗಿದೆ. ದೇಶದ ಜನತೆ ತೈಲದ ಬಗ್ಗೆ ಗಾಬರಿಯಾಗುವುದು ಬೇಡ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನ, LPG ಕೊರತೆ ಇಲ್ಲ. ಹಾರ್ಮುಜ್ ಜಲಸಂಧಿ ಬಂದ್​ನಿಂದ ತೊಂದರೆಯಾಗಿಲ್ಲ. ವಿವಿಧ ಕಡೆಯಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರೋದ್ರಿಂದ ಭಾರತದಲ್ಲಿ ಸದ್ಯಕ್ಕೆ ಯಾವುದೇ ತೊಂದರೆ ಆಗಲ್ಲ.
- ಹರ್ದೀಪ್ ಸಿಂಗ್ ಪುರಿ, ಪೆಟ್ರೋಲಿಯಂ ಸಚಿವ 

Advertisment

ಇನ್ನು ಇರಾನ್ ಸದ್ಯ ಬಂದ್ ಮಾಡಿರುವ ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರುವ ಕಚ್ಚಾ ತೈಲದ ಪ್ರಮಾಣಕ್ಕಿಂತ, ಬೇರೆ ಮೂಲಗಳಿಂದ ಹೆಚ್ಚಿನ ಇಂಧನ ಬರುವಂತೆ ಭಾರತ ವ್ಯವಸ್ಥೆ ಮಾಡಿಕೊಂಡಿದೆ. ಒಟ್ಟಾರೆ ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲವಾಗಿದ್ರೂ ಭಾರತಕ್ಕೆ ಅದರ ಎಳ್ಳಷ್ಟೂ ಪರಿಣಾಮವಾಗಿಲ್ಲ. 

ಭಾರತಕ್ಕೆ ಈಗ ಕಚ್ಚಾತೈಲದ ಟೆನ್ಷನ್ ಇಲ್ಲ, ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ ಹಿನ್ನಲೆಯಲ್ಲಿ ಗಲ್ಪ್ ರಾಷ್ಟ್ರಗಳಿಂದ ಕಚ್ಚಾ ತೈಲದ ಸಾಗಣೆ ಸ್ಥಗಿತವಾಗಿತ್ತು, ಆದರೆ ಈಗ ಮತ್ತೆ ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಅಮೆರಿಕಾದ ಒಪ್ಪಿಗೆ ಪಡೆದಿದೆ.  ಮುಂದಿನ ಒಂದು ತಿಂಗಳು ರಷ್ಯಾದಿಂದ ಭಾರತ ಕಚ್ಚಾತೈಲದ ಖರೀದಿಗೆ ಅಮೆರಿಕಾದ ಒಪ್ಪಿಗೆ ಕೂಡ ಸಿಕ್ಕಿದೆ.  ಹೀಗಾಗಿ ಭಾರತದಲ್ಲಿ ಜನರು ಪೆಟ್ರೋಲ್, ಡೀಸೆಲ್ ಬಗ್ಗೆ ಪ್ಯಾನಿಕ್ ಆಗುವ ಅಗತ್ಯತೆ ಇಲ್ಲ. ಒಂದೆಡೆ ಭಾರತದಲ್ಲಿ 50-60 ದಿನಕ್ಕಾಗುವಷ್ಟು ಪೆಟ್ರೋಲ್, ಡೀಸೆಲ್ ಸಂಗ್ರಹ ಇದೆ. ಮತ್ತೊಂದೆಡೆ ಮುಂದಿನ ಒಂದು ತಿಂಗಳು ರಷ್ಯಾದಿಂದ ಕಚ್ಚಾತೈಲ ಅಮದು ಆಗಲಿದೆ.  ಹೀಗಾಗಿ ಭಾರತಕ್ಕೆ ಈಗ ಕಚ್ಚಾತೈಲದ ಟೆನ್ಷನ್ ಇಲ್ಲ.
ಆದ್ರೆ ಭಾರತಕ್ಕೆ ರಷ್ಯಾ ಸಣ್ಣ ಶಾಕ್ ನೀಡಿದೆ.​ ರಷ್ಯಾದ ಕಚ್ಚಾ ತೈಲ ಬ್ಯಾರೆಲ್‌ಗೆ $4-5 ಕ್ಕೆ  ದುಬಾರಿ ಸಾಧ್ಯತೆ ಇದೆ.  ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 55 ರೂಪಾಯಿ ಏರಿಕೆಯಾಗಿದೆ.  1 ಲೀಟರ್  ಪೆಟ್ರೋಲ್  321 ರೂಪಾಯಿಗೆ ಏರಿಕೆಯಾಗಿದೆ.
ಅಮೆರಿಕದ ಪ್ರಮುಖ ಒಪ್ಪಂದವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 5.7 ರಷ್ಟು ಏರಿಕೆಯಾಗಿ $85.61 ಕ್ಕೆ ತಲುಪಿದೆ. ಇದು ಏಪ್ರಿಲ್ 2024 ರ ನಂತರದ ಅತ್ಯುನ್ನತ ಮಟ್ಟದ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 4.3 ರಷ್ಟು ಏರಿಕೆಯಾಗಿ $89.06 ಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 91.89 ಡಾಲರ್‌(8,440 ರೂ.) ಏರಿಕೆಯಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

NO PETROL PROUBLEM IN INDIA
Advertisment
Advertisment
Advertisment