/newsfirstlive-kannada/media/media_files/2026/02/04/india-and-usa-trade-deal-2026-02-04-13-31-51.jpg)
ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ–ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಪರಿಷ್ಕೃತ ಫ್ಯಾಕ್ಟ್ ಶೀಟ್ ಬಿಡುಗಡೆಗೊಳಿಸಿದೆ. ಇದರಲ್ಲಿ ಏನೆಲ್ಲಾ ಭಾರತಕ್ಕೆ ಸಿಕ್ಕ ಗುಡ್​ ನ್ಯೂಸ್ ಏನು ಅನ್ನೋ ಡೀಟೇಲ್ಸ್​ ಇಲ್ಲಿದೆ.
ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ–ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಪರಿಷ್ಕೃತ ಫ್ಯಾಕ್ಟ್ ಶೀಟ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೆಲವು ದ್ವಿದಳ ಧಾನ್ಯಗಳು ಎಂಬ ಉಲ್ಲೇಖವನ್ನ ಕೈಬಿಟ್ಟಿರುವುದು ಕಂಡು ಬಂದಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸದ್ದಿಲ್ಲದೆ ಪರಿಷ್ಕರ
ಫ್ಯಾಕ್ಟ್‌ಶೀಟ್‌ನಲ್ಲಿ ದ್ವಿದಳ ಧಾನ್ಯಗಳು ಉಲ್ಲೇಖ ಕೈಬಿಟ್ಟ US
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಈಗ ಭಾರತೀಯ ರೈತರ ಅಸ್ತಿತ್ವದ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದದ ಮೂಲಕ ಭಾರತದ ಕೃಷಿ ಕ್ಷೇತ್ರವನ್ನು ಸರ್ಕಾರ ಅಮೆರಿಕಕ್ಕೆ ಮಾರಿಬಿಟ್ಟಿದೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗಳಿಗೆ ಸಜ್ಜಾಗಿವೆ. ಕೃಷಿ ಮತ್ತು ಡೈರಿ ಸೆಕ್ಟರ್​ಗಳನ್ನು ತೆರೆದಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಟ್ರಂಪ್ ಸರ್ಕಾರದ ಫ್ಯಾಕ್ಟ್ ಶೀಟ್​ನಲ್ಲಿ ಕೃಷಿ ಉತ್ಪನ್ನಗಳನ್ನು ಸೇರಿಸಲಾಗಿರುವುದು ರೈತ ಸಂಘಟನೆಗಳ ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಈ ಮಧ್ಯೆ, ಅಮೆರಿಕ ಸರ್ಕಾರವು ಈ ಒಪ್ಪಂದದ ಫ್ಯಾಕ್ಟ್ ಶೀಟ್​ನಲ್ಲಿ ಸದ್ದಿಲ್ಲದೆ ಬದಲಾವಣೆ ಮಾಡಿದೆ.
ಫ್ಯಾಕ್ಟ್‌ಶೀಟ್‌ನಲ್ಲಾದ ಬದಲಾವಣೆ!
ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್
ಕೆಂಪು ಜೋಳ, ಡ್ರೈಫ್ರೂಟ್ಸ್, ಕೆಲವು ಬೇಳೆಗಳು, ಎಣ್ಣೆ
ವೈನ್, ಮದ್ಯಪಾನ ಪದಾರ್ಥ, ಕೆಲ ಉತ್ಪನ್ನ ಸೇರಿದ್ದವು
500 ಶತಕೋಟಿ US ಡಾಲರ್ಸ್​ ಗಿಂತ ಹೆಚ್ಚಿನ ಇಂಧನ
ಕೃಷಿ.. ಕಲ್ಲಿದ್ದಲು ಮತ್ತು ಇತರೆ ಉತ್ಪನ್ನ ಖರೀದಿಸಲು ಬದ್ಧ
ನಿನ್ನೆಯ ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಬೇಳೆ ಉಲ್ಲೇಖ ರದ್ದು
ಭಾರತ ಬದ್ಧ ಎಂಬ ಪದವನ್ನ ಭಾರತ ಉದ್ದೇಶಿಸಿದೆ ಬದಲು
ಮೊನ್ನೆ ಅಂದ್ರೆ ಸೋಮವಾರ ಬಿಡುಗಡೆಗೊಂಡ ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ, ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್, ಕೆಂಪು ಜೋಳ, ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು, ಕೆಲವು ಬೇಳೆಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯಪಾನ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳು ಸೇರಿದ್ದವು. ಭಾರತವು ಹೆಚ್ಚಿನ ಅಮೇರಿಕನ್ ಉತ್ಪನ್ನಗಳನ್ನ ಖರೀದಿಸಲು ಮತ್ತು 500 ಶತಕೋಟಿ US ಡಾಲರ್ಸ್​ ಗಿಂತ ಹೆಚ್ಚಿನ ಅಮೆರಿಕಾ ಇಂಧನ.. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ.. ಕೃಷಿ.. ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನ ಖರೀದಿಸಲು ಬದ್ಧವಾಗಿದೆ ಹೇಳಲಾಗಿತ್ತು. ಆದರೆ, ನಿನ್ನೆ ಬಿಡುಗಡೆಗೊಂಡ ಟರ್ಮ್ಸ್ ಆಫ್ ಅಗ್ರೀಮೆಂಟ್​ನಲ್ಲಿ ಬೇಳೆಗಳು ಎಂಬ ಉಲ್ಲೇಖವನ್ನ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜೊತೆಗೆ, ಮೊದಲ ಪಟ್ಟಿಯಲ್ಲಿ ಬಳಸಿದ್ದ India is committed ಆಂದ್ರೆ ಭಾರತ ಬದ್ಧವಾಗಿದೆ ಎಂಬ ಪದವನ್ನ India intends ಅಂದ್ರೆ ಭಾರತ ಉದ್ದೇಶಿಸಿದೆ ಎಂದು ಬದಲಾಯಿಸಲಾಗಿದೆ.
ವಿಪಕ್ಷಗಳು ಸಂಸತ್‌ನಲ್ಲಿ ಆಕ್ರೋಶ ಹೊರ ಹಾಕಿದ್ವು. ಸಂಯುಕ್ತ್ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಹಲವಾರು ರೈತ ಸಂಘಟನೆಗಳು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದವನ್ನ ಟೀಕಿಸಿ ಫೆಬ್ರವರಿ 12ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನ ನಡೆಸೋದಾಗಿ ಘೋಷಿಸಿತ್ತು. ಇದ್ರ ಬೆನ್ನಲ್ಲೇ ಈ ಮಹತ್ವದ ಬೆಳವಣಿಕೆ ಹಾಗೂ ಬದಲಾವಣೆಗಳು ಕಂಡು ಬಂದಿದೆ.
ಅಮೆರಿಕಾದ ದಾನ್ಯಗಳು, ಸಂಸ್ಕರಿಸಿದ ಹಣ್ಣು ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ಭಾರತಕ್ಕೆ ರಫ್ತಾಗಲಿದೆ ಎಂದು ಅಮೆರಿಕಾದ United States Trade Representative ಪೋಸ್ಟ್ ಹಾಕಿತ್ತು. ಅಚ್ಚರಿಯೆಂಬಂತೆ ಅದ್ರಲ್ಲಿನ ಭಾರತದ ನಕ್ಷೆಯಲ್ಲಿ ಪಿಓಕೆ ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಒಳಗೊಂಡ ಭಾರತದ ಭೂಪಟವನ್ನ ಪೋಸ್ಟ್ ಮಾಡಿತ್ತು.
ಸಾಮಾನ್ಯವಾಗಿ ಪಿಓಕೆ ಮತ್ತು ಅಕ್ಸಾಯ್‌ಚಿನ್ ಪ್ರದೇಶಗಳನ್ನ ವಿವಾದಿತ ಪ್ರದೇಶವೆಂದು ಮಾರ್ಕ್ ಮಾಡಿರುತ್ತಿದ್ದ ಅಮೆರಿಕಾ.. ಈ ಬಾರಿ ಸಂಪೂರ್ಣವಾಗಿ ಈ ಭಾಗಗಳು ಭಾರತದ್ದೆ ಭಾಗ ಅನ್ನೋದನ್ನ ಒಪ್ಪಿಕೊಂಡಂತೆ ನಕ್ಷೆ ಹಾಕಿರೋದು ವ್ಯಾಪಕ ಚರ್ಚೆ ಶುರು ಮಾಡಿತ್ತು. ಅಮೆರಿಕಾ ಈ ಪ್ರದೇಶಗಳು ಭಾರತದ್ದೆಂದು ಒಪ್ಪಿಕೊಂಡಿದೆ ಎಂದೇ ಬಿಂಬಿಸಲಾಗಿತ್ತು. ಇದರ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿರೋ ಯುಎಸ್‌ಟಿಆರ್. ಧಾನ್ಯಗಳನ್ನ ರಫ್ತು ಮಾಡುವ ನಿರ್ಧಾರದಿಂದ ಹಿಂದೆ ಸರಿದ ಕಾರಣಕ್ಕೋ, ಅಥವಾ ನಕ್ಷೆ ವಿವಾದಕ್ಕೋ ಅನ್ನೋದು ಈಗಲೂ ಪ್ರಶ್ನೆಯಾಗೇ ಉಳಿದಿದೆ.
ನ್ಯೂಸ್​ ಫಸ್ಟ್​ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us