/newsfirstlive-kannada/media/media_files/2026/03/07/lottery-2026-03-07-09-41-46.jpg)
ಸತತ 15 ವರ್ಷಗಳ ಕಾಲ ಪ್ರತಿ ತಿಂಗಳು ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಶಾರ್ಜಾದ ಪಿಕಪ್ ಡ್ರೈವರ್ ಒಬ್ಬರ ಅದೃಷ್ಟ ಕೊನೆಗೂ ಖುಲಾಯಿಸಿದೆ. ಬಿಗ್ ಟಿಕೆಟ್‌ನ (Big Ticket) ಬರೋಬ್ಬರಿ 15 ಮಿಲಿಯನ್ ದಿರ್ಹಮ್ (ಸುಮಾರು 34 ಕೋಟಿ ರೂ.) ಬಂಪರ್ ಜಾಕ್‌ಪಾಟ್ ಹೊಡೆದಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಶಾರ್ಜಾದಲ್ಲಿ ಸಾರಿಗೆ ಕಂಪನಿಯೊಂದರ ವಾಹನ ಚಾಲಕರಾಗಿರುವ ವಿಬೀಶ್ ಪಲ್ಲಿಯಾಲಿ ಈ ಬಂಪರ್ ಬಹುಮಾನ ಗೆದ್ದ ಅದೃಷ್ಟಶಾಲಿ. ಈ ಬಹುಮಾನವನ್ನು ಅವರು ಇತರ ಮೂವರೊಂದಿಗೆ ಹಂಚಿಕೊಳ್ಳಲಿದ್ದು, ವಿಬೀಶ್ ಪಾಲಿಗೆ 4 ಮಿಲಿಯನ್ ದಿರ್ಹಮ್ (ಸುಮಾರು 10 ಕೋಟಿ ರೂ.) ಸಿಗಲಿದೆ. ಕೋಟಿ ಕೋಟಿ ಹಣದೊಂದಿಗೆ ಭಾರತಕ್ಕೆ ಮರಳಿ ನೆಲೆಸುವ ಪ್ಲಾನ್ ಅವರದ್ದಾಗಿದೆ.
ಸ್ನೇಹಿತರ ಬಲವಂತಕ್ಕೆ ಖರೀದಿಸಿದ್ದ ಟಿಕೆಟ್‌ಗೆ ಬಹುಮಾನ!
ಫೆಬ್ರವರಿ 7 ರಂದು ಭಾರತಕ್ಕೆ ಪ್ರಯಾಣಿಸ್ತಿದ್ದಾಗ 1,000 ದಿರ್ಹಮ್ ಮೌಲ್ಯದ ಒಂದು ಸೆಟ್ ಟಿಕೆಟ್ಸ್​ ಖರೀದಿಸಿದ್ದೆ. ಫೆಬ್ರವರಿ 28 ರಂದು, ನನ್ನ ಸೋದರಸಂಬಂಧಿ ಹಾಗೂ ಆತನ ಇಬ್ಬರು ಸ್ನೇಹಿತರು ಕರೆ ಮಾಡಿ, ತಮ್ಮೊಂದಿಗೆ ಸೇರಿ ಮತ್ತೊಂದು ಟಿಕೆಟ್ ಖರೀದಿಸುವಂತೆ ಒತ್ತಾಯಿಸಿದರು. ಆ ತಿಂಗಳ ನನ್ನ ಬಜೆಟ್ ಮುಗಿದಿದೆ ಎಂದು ಹೇಳಿದರೂ ಕೇಳಲಿಲ್ಲ. ಕೊನೆಗೆ ಅವರ ಮನಸ್ಸು ನೋಯಿಸಬಾರದು ಎಂದು ರಾತ್ರಿ 8 ಗಂಟೆಗೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದೆ. ಅನಿವಾರ್ಯವಾಗಿ ಖರೀದಿಸಿದ ಅದೇ ಟಿಕೆಟ್ ಈಗ ನನ್ನ ಅದೃಷ್ಟ ಬದಲಾಯಿಸಿದೆ ಎಂದು ಖಲೀಜ್ ಟೈಮ್ಸ್‌ಗೆ ವಿಬೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಅವಧಿಯಲ್ಲಿ ದೇಶದ ಸಾಲ 165 ಲಕ್ಷ ಕೋಟಿ ರೂ: ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮ- ಸಿಎಂ ಸಿದ್ದು
ಯಾರೋ ಪ್ರಾಂಕ್ ಮಾಡ್ತಿದ್ದಾರೆ ಅಂದ್ಕೊಂಡೆ
‘ನಾನು ಖಾಯಂ ಗ್ರಾಹಕನಾಗಿರುವುದರಿಂದ ಕಂಪನಿಯಿಂದ ಆಗಾಗ ಕರೆಗಳು ಬರುತ್ತಿರುತ್ತವೆ. ಆದರೆ ತಿಂಗಳ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಆಫರ್‌ಗಳ ಬಗ್ಗೆ ಹೇಳಲು ಕರೆ ಮಾಡುತ್ತಾರೆ. ಆದರೆ ತಿಂಗಳ ಆರಂಭದಲ್ಲಿ ಸಂಜೆ ವೇಳೆ ಏಕೆ ಕರೆ ಮಾಡಿದರು ಎಂದು ಆಶ್ಚರ್ಯವಾಯಿತು. ಬಹುಮಾನ ಗೆದ್ದಿರುವ ವಿಚಾರ ಕೇಳಿದಾಗ, ಯಾರೋ ನನ್ನನ್ನು ಪ್ರಾಂಕ್ (ತಮಾಷೆ) ಮಾಡುತ್ತಿದ್ದಾರೆ ಎಂದುಕೊಂಡೆ. ಬಳಿಕ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಆಕೆ ತಕ್ಷಣ ವೆಬ್‌ಸೈಟ್ ಪರಿಶೀಲಿಸಿ ವಿಬೀಶ್ ಅವರ ಹೆಸರು ವಿಜೇತರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿದ್ದಾರೆ. ಬಳಿಕವೇ ಅವರಿಗೆ ತಾವು ಕೋಟ್ಯಾಧಿಪತಿಯಾಗಿರುವ ಸತ್ಯ ಅರಿವಾಗಿದೆ.
ಟಿಕೆಟ್‌ಗಾಗಿ ಪತ್ನಿ ಜೊತೆ ಜಗಳವಾಗಿತ್ತು..
ಕಳೆದ 15 ವರ್ಷಗಳಿಂದ ಡ್ರೈವರ್ ವೃತ್ತಿಯ ಸಣ್ಣ ಸಂಬಳದಲ್ಲಿ ದುಬಾರಿ ಬೆಲೆಯ ಟಿಕೆಟ್ ಖರೀದಿಸುವುದು ಸವಾಲಿನ ಕೆಲಸವಾಗಿತ್ತು. ಟಿಕೆಟ್‌ಗೆ ಹಣ ಸುರಿಯುವುದನ್ನು ಕಂಡು ಪತ್ನಿ ಎಷ್ಟೋ ಬಾರಿ ಜಗಳವಾಡಿದ್ದೂ ಉಂಟು ಎನ್ನುತ್ತಾರೆ ವಿಬೀಶ್.
ಆ ಹಣವನ್ನು ಬೇರೆ ಅಗತ್ಯಗಳಿಗೆ ಬಳಸಬಹುದು ಎಂದು ಪತ್ನಿ ಕೋಪಗೊಳ್ಳುತ್ತಿದ್ದಳು. ಹಾಗಾಗಿ ಕೆಲವು ತಿಂಗಳು ನಾನು ಟಿಕೆಟ್ ಖರೀದಿಸಿದ ವಿಚಾರವನ್ನೇ ಆಕೆಯಿಂದ ಮುಚ್ಚಿಡುತ್ತಿದ್ದೆ ಎಂದು ವಿಬೀಶ್ ನೆನಪಿಸಿಕೊಂಡರು. ಅವರ ಆ ಹವ್ಯಾಸ ಹಾಗೂ ನಿರಂತರ ಪ್ರಯತ್ನ ಕೊನೆಗೂ ದೊಡ್ಡ ಪ್ರತಿಫಲವನ್ನೇ ನೀಡಿದೆ.
ಬೆಂಗಳೂರಲ್ಲಿ ಓದುತ್ತಿರುವ ಮಗಳು
ದುಬೈನಿಂದ ಭಾರತಕ್ಕೆ ಮರಳಿ ನೆಲೆಸುವ ಜೊತೆಗೆ, ಸದ್ಯ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಪುತ್ರಿ ವಂದನಾಳ ಭವಿಷ್ಯವನ್ನು ಭದ್ರಪಡಿಸಲು ಈ ಹಣ ಬಳಸುವುದಾಗಿ ವಿಬೀಶ್ ಸಂತಸದಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಗ್ರಾಹಕರಿಗೆ ಬಿಗ್ ಶಾಕ್: ಗೃಹಬಳಕೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us