Advertisment

ಪಾಕ್ ಗಡಿಯಲ್ಲಿ ನಾಡಿದ್ದಿನಿಂದ ಭಾರತದ ಯುದ್ಧ ವಿಮಾನಗಳ ಸಮರಾಭ್ಯಾಸ: ಪಾಕ್‌ಗೆ ಏಕೆ ಭಯ?

ಮಾರ್ಚ್ 5 ರಿಂದ 12 ರವರೆಗೆ ಪಾಕಿಸ್ತಾನದ ಗಡಿಯಲ್ಲಿ ಭಾರತದ ವಾಯುಪಡೆಯು ಸಮರಾಭ್ಯಾಸ ನಡೆಸಲು ನಿರ್ಧರಿಸಿದೆ. ಇದಕ್ಕಾಗಿ NOTAM ಅಂದರೇ, ನೋಟೀಸ್ ಟು ಏರ್ ಮೆನ್ ಹೊರಡಿಸಿದೆ. ಇದು ನೆರೆಯ ಪಾಕಿಸ್ತಾನದಲ್ಲಿ ಭಾರಿ ಭಯ, ಭೀತಿಗೆ ಕಾರಣವಾಗಿದೆ. ಭಾರತವು ಮತ್ತೊಂದು ಯುದ್ಧಕ್ಕೆ ಸಿದ್ದತೆ ನಡೆಸುತ್ತಿದೆ ಎಂದು ಪಾಕ್ ಹೇಳಿದೆ.

author-image
Chandramohan
NOTAM ISSUED BY INDIA

NOTAM ಹೊರಡಿಸಿದ ಭಾರತದ ವಾಯುಪಡೆ

Advertisment
  • ಪಾಕ್ ಗಡಿಯಲ್ಲಿ ಭಾರತದ ಯುದ್ಧ ವಿಮಾನಗಳಿಂದ ಸಮರಾಭ್ಯಾಸ
  • ಮಾರ್ಚ್ 5 ರಿಂದ 12 ರವರೆಗೆ ಫೈಟರ್ ಜೆಟ್ ಗಳ ಸಮರಾಭ್ಯಾಸ
  • NOTAM ಹೊರಡಿಸಿದ ಭಾರತದ ವಾಯುಪಡೆ

ಭಾರತವು ಮಾರ್ಚ್ 5 ರಿಂದ 12 ರವರೆಗೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ವಲಯದ ಬಳಿ ನೋಟೀಸ್ ಟು ಏರ್ ಮೆನ್  ಅಂದರೇ   NOTAM  ಹೊರಡಿಸಿದೆ. ಅಂದರೇ ಈ ಪ್ರದೇಶ ಸಂಪೂರ್ಣವಾಗಿ ವಾಯುಪಡೆಯ ಯುದ್ಧ ವಿಮಾನಗಳ ಹಾರಾಟಕ್ಕೆ ಸೀಮಿತವಾಗಿರುತ್ತೆ. ವಾಯುಪಡೆಯ ವಿಮಾನಗಳು ಈ ಪ್ರದೇಶದಲ್ಲಿ ಸಮರಾಭ್ಯಾಸ ನಡೆಸಲಿವೆ. ಹೀಗಾಗಿ ಬೇರೆ ವಾಣಿಜ್ಯ ವಿಮಾನಗಳಿಗೆ ಈ ಪ್ರದೇಶದಲ್ಲಿ ಹಾರಾಟ ನಡೆಸಲು ಅವಕಾಶ ಇಲ್ಲ.  ಇದು ಭಾರತ- ಪಾಕಿಸ್ತಾನ ಗಡಿಯಲ್ಲಿ ಹೈ ಆಲರ್ಟ್ ಗೆ ಕಾರಣವಾಗಿದೆ. 

Advertisment

ಅಧಿಕೃತ ವಾಯುಯಾನ ಅಧಿಸೂಚನೆಗಳ ಪ್ರಕಾರ, ತಾತ್ಕಾಲಿಕ ವಾಯುಪ್ರದೇಶ ಮೀಸಲು ಈ ಪ್ರದೇಶದಲ್ಲಿ ನಿಗದಿತ ಭಾರತೀಯ ವಾಯುಪಡೆಯ ಯುದ್ಧ ವಿಮಾನ ನಡೆಸಲು ಪ್ಲ್ಯಾನ್ ಮಾಡಲಾಗಿದೆ.
ನಾಗರಿಕ ವಿಮಾನಗಳು ಗೊತ್ತುಪಡಿಸಿದ ವಲಯಗಳನ್ನು ತಪ್ಪಿಸುವುದನ್ನು ಖಚಿತಪಡಿಸಿಕೊಳ್ಳಲು ಮಿಲಿಟರಿ ಸಮರಾಭ್ಯಾಸಗಳಿಗೆ  ಮುಂಚಿತವಾಗಿ ಇಂತಹ ಸೂಚನೆಗಳನ್ನು ನಿಯಮಿತವಾಗಿ ನೀಡಲಾಗುತ್ತದೆ.
ಈ ಬೆಳವಣಿಗೆಯು ಪಾಕಿಸ್ತಾನದ ರಕ್ಷಣಾ ಇಲಾಖೆಯಲ್ಲಿ  ಕಳವಳವನ್ನು ಉಂಟುಮಾಡಿದೆ, ಇದು ಈಗಾಗಲೇ ಬಹು ರಂಗಗಳಲ್ಲಿ ಹೆಚ್ಚಿದ ಕಾರ್ಯಾಚರಣೆಯ ಬೇಡಿಕೆಗಳನ್ನು ನಿರ್ವಹಿಸುತ್ತಿದೆ.

ಪಾಕಿಸ್ತಾನವು ಪ್ರಸ್ತುತ ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಗಡಿಯಲ್ಲಿ ತನ್ನ ಸೇನೆ ನಿಯೋಜಿಸಿದೆ. ಅಫ್ಘನಿಸ್ತಾನದೊಂದಿಗೆ ಘರ್ಷಣೆ ನಡೆಸುತ್ತಿದೆ.  ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅರೇಬಿಯನ್ ಸಮುದ್ರದಲ್ಲಿ ನೌಕಾಪಡೆ ಆಲರ್ಟ್ ಆಗಿದೆ. 

ರಾಜಸ್ಥಾನ ಮತ್ತು ಸಿಂಧ್ ಬಳಿಯ ಪ್ರದೇಶಗಳನ್ನು ವ್ಯಾಪಿಸಿರುವ ಭಾರತ-ಪಾಕಿಸ್ತಾನ ಗಡಿಯ ದಕ್ಷಿಣ ವಲಯವು ಐತಿಹಾಸಿಕವಾಗಿ ಎರಡೂ ಕಡೆಯಿಂದ ಮಿಲಿಟರಿ ಅಭ್ಯಾಸ ಕಂಡಿದೆ.  ವಿಶೇಷವಾಗಿ ಹೆಚ್ಚಿನ ಪ್ರಾದೇಶಿಕ ಉದ್ವಿಗ್ನತೆಯ ಸಮಯದಲ್ಲಿ ಭಾರತವು ವಾಯು ಪಡೆಯ ಸಮರಾಭ್ಯಾಸ ನಡೆಸುತ್ತಿರುವುದು ವಿಶೇಷವಾಗಿದೆ. 

Advertisment

ಮಾರ್ಚ್ 5-12 ರಂದು ನಡೆಯಲಿರುವ  ಭಾರತೀಯ ವಾಯು ಪಡೆಯ ಸಮರಾಭ್ಯಾಸ  ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಅಸ್ಥಿರತೆಯ ಹಿನ್ನೆಲೆಯಲ್ಲಿ ನಡೆಯುತ್ತಿದೆ.  ಅಲ್ಲಿ ನಡೆಯುತ್ತಿರುವ ದಾಳಿ, ಪ್ರತಿ ದಾಳಿಗಳು ಈಗಾಗಲೇ ನಾಗರಿಕ ವಾಯು ಸಂಚಾರವನ್ನು ಅಡ್ಡಿಪಡಿಸಿವೆ. 
ಆಪರೇಷನ್ ಸಿಂದೂರ್ ನಂತರ, ಈ ರೀತಿಯ ಕಾರ್ಯತಂತ್ರದ ಸಿಗ್ನಲಿಂಗ್ ಭಾರತ-ಪಾಕಿಸ್ತಾನ ಸಂಬಂಧಗಳ  ಲಕ್ಷಣವಾಗಿದೆ, ಎರಡೂ ಕಡೆಯವರು ಮಿಲಿಟರಿ ಕವಾಯತುಗಳಿಗಾಗಿ ವಾಯುಪ್ರದೇಶವನ್ನು ಸುತ್ತುವರಿಯಲು ತಮ್ಮ ಗಡಿಗಳಲ್ಲಿ ಆಗಾಗ್ಗೆ NOTAM ಗಳನ್ನು ನೀಡುತ್ತಾರೆ.
ಇನ್ನೂ ಭಾರತವು  ಪಾಕಿಸ್ತಾನದ ಗಡಿಯಲ್ಲಿ ವಾಯುಪಡೆಯ ಸಮರಾಭ್ಯಾಸ ನಡೆಸುವುದನ್ನು ಪಾಕಿಸ್ತಾನವು ಯುದ್ಧದ ತಯಾರಿ ಎಂದೇ ಭಾವಿಸಿದೆ. ಇಂದು ಪಾಕಿಸ್ತಾನದ ಹಾಲಿ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಭಾರತವು ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ. ಭಾರತದ ವಾಯುಪಡೆಯ ಸಮರಾಭ್ಯಾಸ ರೆಗ್ಯುಲರ್ ಆಗಿ ನಡೆಯುವಂಥದ್ದು. ಆದರೇ, ಇದಕ್ಕೆ ಪಾಕಿಸ್ತಾನ ಭಯ ಬಿದ್ದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತೆ. 

PAK PREZ ASIF ALI ZARDARI SAYS INDIA PREPARING FOR WAR

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

NOTAM ISSUED BY INDIA
Advertisment
Advertisment
Advertisment