/newsfirstlive-kannada/media/media_files/2025/12/04/indigo-airlines-cancelled-2025-12-04-17-58-21.jpg)
ಇಂಡಿಗೋ ವಿಮಾನ ಸಂಚಾರ ರದ್ದುನಿಂದ ಪ್ರಯಾಣಿಕರಿಗೆ ತೊಂದರೆ
ತಾಂತ್ರಿಕ ಸಮಸ್ಯೆಯಿಂದ ದೇಶದ ಹಲವೆಡೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇಂಡಿಗೋದ 200 ವಿಮಾನಗಳ ಹಾರಾಟ ರದ್ದು ಆಗಿದೆ. ತಾಂತ್ರಿಕ ತೊಂದರೆ ಮತ್ತು ಪೈಲಟ್‌ಗಳ ಕೊರತೆಯ ಕಾರಣ ಇಂಡಿಗೋ ಏರ್ ಲೈನ್ಸ್ ನೀಡುತ್ತಿದೆ.
ದೇಶದಲ್ಲಿ ನಿನ್ನೆಯಿಂದ ಇಂಡಿಗೋ ಏರ್ ಲೈನ್ಸ್ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. 200ಕ್ಕೂ ಹೆಚ್ಚು ವಿಮಾನ ಸಂಚಾರ ರದ್ದಾಗಿದೆ. ವಿಮಾನ ಪ್ರಯಾಣಿಕರು ತಮ್ಮ ಗಮ್ಯ ಸ್ಥಾನ ತಲುಪಲಾಗದೇ ಏರ್ ಪೋರ್ಟ್ ಗಳಲ್ಲಿ ಪರದಾಡುತ್ತಿದ್ದಾರೆ. ಧೀಡೀರನೇ ಎದುರಾಗಿರುವ ಸಮಸ್ಯೆ ಬಗೆಹರಿಸಲಾಗದೇ ಇಂಡಿಗೋ ಏರ್ ಲೈನ್ಸ್ ಹತ್ತಾರು ಕಾರಣ ನೀಡುತ್ತಿದೆ.
ತಾಂತ್ರಿಕ ತೊಂದರೆಗಳು, ಚಳಿಗಾಲಕ್ಕೆ ಸಂಬಂಧಿಸಿದ ಶೆಡ್ಯೂಲ್ ಬದಲಾವಣೆಗಳು, ಹವಾಮಾನ ವೈಪರೀತ್ಯ, ಅತಿಯಾದ ಏರ್ ಟ್ರಾಫಿಕ್, ಸಿಬ್ಬಂದಿಗೆ ರೆಸ್ಟ್ ನೀಡಬೇಕೆನ್ನುವ ಹೊಸ ನಿಯಮದ ಸವಾಲುಗಳು ಇದಕ್ಕೆ ಕಾರಣ ಇಂಡಿಗೋ ಏರ್ ಲೈನ್ಸ್ ಹೇಳಿದೆ.
ಎಲ್ಲಿ ನೋಡಿದ್ರು ಲಗೇಜ್​ ಹಿಡಿದು ನಿಂತಿರೋ ಪ್ರಯಾಣಿಕರು.. ಎತ್ತ ಕಣ್ಣಾಯಿಸಿದ್ರು ಪ್ರಯಾಣಿಕರ ಗೊಣಗಾಟ.. ಫ್ಲೈಟ್​ ಶೆಡ್ಯುಲ್​ ಬೋರ್ಡಿಂಗ್​ ನೋಡಿ ಕಾಯುತ್ತಿರೋ ಮಂದಿ . ಈಗ ಬರುತ್ತೆ.. ಆಗ ಬರುತ್ತೆ ಅಂತ ಕಾದು ಕಾದು ಸುಸ್ತಾದವರು ಇಂಡಿಗೋ ಸಂಸ್ಥೆ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.
ಇಂಡಿಗೋ ಸಂಸ್ಥೆ ಏರ್​ಲೈನ್ಸ್ ವಿಮಾನ ಸಂಚಾರದಲ್ಲಿ ವ್ಯತ್ಯಯ!
200 ವಿಮಾನಗಳು ರದ್ದು.. 2 ದಿನದಿಂದ ನಿಲ್ದಾಣಗಳು ಫುಲ್​ ರಶ್!
ತಾಂತ್ರಿಕ ಕಾರಣಗಳಿಂದ ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನಗಳ ಹಾರಟದ ಟೈಮಿಂಗ್​ನಲ್ಲಿ ಭಾರೀ ವ್ಯತ್ಯಯ ಎದುರಿಸ್ತಿದೆ. ಹೇಳಿ ಕೇಳಿ ಸುಮಾರು 200ಕ್ಕೂ ಹೆಚ್ಚು ವಿಮಾನಗಳನ್ನ ರದ್ದುಗೊಳಿಸಲಾಗಿದ್ದು, ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿದ್ದಾರೆ.
ಎಲ್ಲಿ, ಎಷ್ಟು ವಿಮಾನಗಳು ರದ್ದು?
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 42 ವಿಮಾನ ರದ್ದು
ದೆಹಲಿಯ ವಿಮಾನ ನಿಲ್ದಾಣದಲ್ಲಿ 33 ವಿಮಾನಗಳು ರದ್ದು
ಮುಂಬೈ ವಿಮಾನ ನಿಲ್ದಾಣದಲ್ಲಿ 51ಕ್ಕೂ ಹೆಚ್ಚು ಫ್ಲೈಟ್ ರದ್ದು
ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದು
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 42 ದೇಶೀಯ ವಿಮಾನಗಳು 22 ಆಗಮನ, 20 ನಿರ್ಗಮನ ಫ್ಲೈಟ್​ಗಳು ರದ್ದಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ 33 ವಿಮಾನಗಳು ರದ್ದಾಗಿದ್ರೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ 51ಕ್ಕೂ ಹೆಚ್ಚು ವಿಮಾನಗಳು ನಿಂತಿವೆ. ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದಾಗಿದೆ.)
ಮುಂದುವರೆದು, ಬೆಂಗಳೂರಿನಿಂದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಗೋವಾ, ಕೋಲ್ಕತ್ತಾ ಮತ್ತು ಲಕ್ನೋವನ್ನ ಸಂಪರ್ಕಿಸುವ ವಿಮಾನಗಳು ಸಹ ಈ ಅಡಚಣೆಗಳಿಗೆ ಸಾಕ್ಷಿಯಾದವು. ಏತನ್ಮಧ್ಯೆ, ಮಂಗಳವಾರದಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ 20 ಇಂಡಿಗೋ ವಿಮಾನಗಳು ರದ್ದಾಗಿರೋದು ಪ್ರಯಾಣಿಕರನ್ನ ಕೆರಳಿಸಿದೆ.
/filters:format(webp)/newsfirstlive-kannada/media/media_files/2025/12/04/indigo-airlines-cancelled02-2025-12-04-18-06-27.jpg)
ನವಂಬರ್ ತಿಂಗಳಲ್ಲಿ 1232 ಇಂಡಿಗೋ ವಿಮಾನ ರದ್ದು ಬಗ್ಗೆ ತನಿಖೆ
ಇನ್ನೂ ಕಳೆದ ನವಂಬರ್ ತಿಂಗಳಿನಲ್ಲಿ ದೇಶದಲ್ಲಿ 1,232 ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿದೆ. ಈ ವಿಷಯ ಡಿಜಿಸಿಎ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಗ್ಗೆ ತನಿಖೆ ಆರಂಭಿಸಿದೆ. ಇಂಡಿಗೋ ಏರ್ ಲೈನ್ಸ್ ನ ಉನ್ನತ ಅಧಿಕಾರಿಗಳನ್ನು ಡಿಜಿಸಿಎ ತನ್ನ ಕಚೇರಿಗೆ ಕರೆಸಿ ವಿವರಣೆ ನೀಡುವಂತೆ ಕೇಳಿದೆ.
1,232 ವಿಮಾನ ಸಂಚಾರ ರದ್ದಾಗಲು ಕೂಡ ಇಂಡಿಗೋ ಏರ್ ಲೈನ್ಸ್ ಬೇರೆ ಬೇರೆ ಕಾರಣ ನೀಡಿದೆ. ಸಿಬ್ಬಂದಿ ಕೊರತೆಯಿಂದ 755 ವಿಮಾನ ಸಂಚಾರ ರದ್ದಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ವೈಫಲ್ಯದಿಂದ 92 ವಿಮಾನ ಸಂಚಾರ ರದ್ದಾಗಿದೆ. ಏರ್ ಪೋರ್ಟ್ ಗಳ ನಿರ್ಬಂಧದಿಂದಾಗಿ 258 ವಿಮಾನ ಸಂಚಾರ ರದ್ದಾಗಿದೆ. 127 ವಿಮಾನಗಳು ಇನ್ನಿತರೆ ಕಾರಣದಿಂದ ರದ್ದಾಗಿವೆ ಎಂದು ಇಂಡಿಗೋ ಏರ್ ಲೈನ್ಸ್ , ಡಿಜಿಸಿಎ ಗೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us