Advertisment

ಇಂಡಿಗೋದ ಒಂದು ಸಾವಿರ ವಿಮಾನ ಸಂಚಾರ ರದ್ದು! : ಕಾರಣವೇನು, ಪರಿಹಾರ ಯಾವಾಗ?

ಇಂಡಿಗೋ ಇಂದು ಕೂಡ 600 ವಿಮಾನ ಸಂಚಾರ ರದ್ದುಗೊಳಿಸಿದೆ. ಕಳೆದ ನಾಲ್ಕು ದಿನದಲ್ಲಿ ಒಂದು ಸಾವಿರ ವಿಮಾನ ಸಂಚಾರ ರದ್ದಾಗಿದೆ. ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಂದ ಪೈಲಟ್ ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಾಗಿದೆ. ಇದರಿಂದ ಇಂಡಿಗೋ ಬಳಿ ಪೈಲಟ್ ಗಳಿಲ್ಲದೇ, ವಿಮಾನಗಳು ಟೇಕಾಫ್ ಆಗುತ್ತಿಲ್ಲ!

author-image
Chandramohan
indigo airlines cancelled02

ಡಿಸೆಂಬರ್ 8 ರವರೆಗೂ ಇಂಡಿಗೋ ವಿಮಾನ ಸಂಚಾರ ವ್ಯತ್ಯಯ!

Advertisment
  • ಡಿಸೆಂಬರ್ 8 ರವರೆಗೂ ಇಂಡಿಗೋ ವಿಮಾನ ಸಂಚಾರ ವ್ಯತ್ಯಯ!
  • ನಾಲ್ಕು ದಿನದಲ್ಲಿ 1 ಸಾವಿರ ವಿಮಾನ ಸಂಚಾರ ರದ್ದು


ದೆಹಲಿಯಿಂದ ಹೊರಡುವ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳನ್ನು  ಇಂದು  ಮಧ್ಯರಾತ್ರಿಯವರೆಗೆ ರದ್ದುಪಡಿಸಲಾಗಿದೆ ಎಂದು ಇಂಡಿಗೋ  ಶುಕ್ರವಾರ ಬೆಳಿಗ್ಗೆ  ಟ್ವೀಟರ್‌ನ ಸಂಕ್ಷಿಪ್ತ ಪೋಸ್ಟ್‌ನಲ್ಲಿ ತಿಳಿಸಿದೆ. 
ಇಂಡಿಗೋ ಪ್ರಯಾಣಿಕರು ಇಂಡಿಗೋ ಕಂಪನಿಯ ವಿರುದ್ಧ ಏರ್ ಪೋರ್ಟ್ ಗಳಲ್ಲಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರ ಆಕ್ರೋಶವನ್ನು ಎದುರಿಸಲು ಇಂಡಿಗೋ ಕಂಪನಿಗೆ ಸಾಧ್ಯವಾಗುತ್ತಿಲ್ಲ . 
ಇನ್ನೂ ಚೆನ್ನೈ ವಿಮಾನ ನಿಲ್ದಾಣದಲ್ಲೂ ಇಂಡಿಗೋ ಏರ್ ಲೈನ್ಸ್ ವಿಮಾನಗಳ ಸಂಚಾರವನ್ನು ಇಂದು ಸಂಜೆ 6 ಗಂಟೆಯವರೆಗೂ ರದ್ದುಪಡಿಸಲಾಗಿದೆ. 
ಪ್ರಯಾಣ ವಿಳಂಬದಿಂದ ಮತ್ತು ಪ್ರಯಾಣ ವೆಚ್ಚ ಏರಿಕೆಯಿಂದ ಹತ್ತಾರು ಸಾವಿರ ಪ್ರಯಾಣಿಕರು ಇಂಡಿಗೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರು ಕೂಡ ಗೊಂದಲಕ್ಕೀಡಾಗಿದ್ದಾರೆ. ಜೊತೆಗೆ ಏರ್ ಪೋರ್ಟ್ ನಲ್ಲಿ ಗಂಟೆಗಟ್ಟಲೇ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಏರ್ ಪೋರ್ಟ್ ನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ವಿಮಾನದ ಮೂಲಕ ತಮ್ಮ ಗಮ್ಯ ಸ್ಥಳಗಳಗತ್ತಲೂ ಹೋಗಲಾಗುತ್ತಿಲ್ಲ. ಮಹಿಳೆಯರು, ಮಕ್ಕಳನ್ನು ಕಟ್ಟಿಕೊಂಡು ಏರ್ ಪೋರ್ಟ್ ನಲ್ಲಿ ಲಾಂಜ್ ನಲ್ಲಿ ಪರದಾಡುವ ಸ್ಥಿತಿಯಲ್ಲಿ ಪ್ರಯಾಣಿಕರಿದ್ದಾರೆ. 

Advertisment





ಗುರುವಾರ ಒಂದೇ ದಿನ ಇಂಡಿಗೋ 550 ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಇನ್ನೂ ಶುಕ್ರವಾರವಾದ ಇಂದು ಕೂಡ 550 ರಿಂದ 600 ವಿಮಾನ ಸಂಚಾರವನ್ನು ಇಂಡಿಗೋ ರದ್ದುಪಡಿಸಿದೆ.  ಮಂಗಳವಾರ, ಬುಧವಾರ 200 ವಿಮಾನ ಸಂಚಾರವನ್ನು ರದ್ದುಪಡಿಸಿತ್ತು. ಇಂಡಿಗೋ ಏರ್ ಲೈನ್ಸ್ 20 ವರ್ಷಗಳ ಇತಿಹಾಸ ಇದೆ. 20 ವರ್ಷದ ಇಂಡಿಗೋ ಇತಿಹಾಸದಲ್ಲೇ ಇದೇ ಮೊದಲ ಭಾರಿಗೆ ಇಷ್ಟೊಂದು ಭಾರಿ ಸಂಖ್ಯೆಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.  ಮಂಗಳವಾರದಿಂದ ಒಟ್ಟಾರೆ 1 ಸಾವಿರ ವಿಮಾನ ಸಂಚಾರ ರದ್ದಾಗಿದೆ. 

INDIGO PILOTS



ಡಿಸೆಂಬರ್ 8 ರ ಸೋಮವಾರದವರೆಗೂ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲ್ಲ ಎಂದು ಇಂಡಿಗೋ ಹೇಳಿದೆ . 

ಡಿಜಿಸಿಎ ಹೊಸದಾಗಿ ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ಅನ್ನು ಪೈಲಟ್ ಗಳಿಗೆ ಜಾರಿಗೊಳಿಸಿದೆ. ಇದರ ಪ್ರಕಾರ, 7 ದಿನಗಳಲ್ಲಿ ಪೈಲಟ್ ಗಳಿಗೆ 48 ಗಂಟೆ ವಿಶ್ರಾಂತಿ ಸಮಯವನ್ನು ಕಡ್ಡಾಯವಾಗಿ ನೀಡಬೇಕು. ಈ ಮೊದಲು 7 ದಿನಗಳಲ್ಲಿ ಈ ವಿಶ್ರಾಂತಿಯ ಸಮಯವೂ 36 ಗಂಟೆ ಇತ್ತು .  ಪೈಲಟ್ ಗಳ ವಿಶ್ರಾಂತಿಯ ಸಮಯವನ್ನು ಒಂದು ವಾರಕ್ಕೆ 48 ಗಂಟೆಗೆ ಏರಿಸಲಾಗಿದೆ. 48 ಗಂಟೆ ಅಂದರೇ, 2 ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಿದಂತಾಗುತ್ತೆ. ಇದರಿಂದ ಪೈಲಟ್ ಗಳು ವಿಮಾನ ಚಲಾಯಿಸುವ ಅವಧಿ ಕಡಿಮೆಯಾಗುತ್ತೆ. 

Advertisment

ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮವು ಜುಲೈ 1 ರಿಂದಲೇ ಮೊದಲ ಹಂತವಾಗಿ ಜಾರಿಯಾಗಿದೆ. ಬಳಿಕ ನವಂಬರ್ 1 ರಿಂದ 2ನೇ ಹಂತದಲ್ಲಿ ಜಾರಿಯಾಗಿದೆ. ಈ ಹೊಸ ಕಡ್ಡಾಯ ನಿಯಮದಿಂದಾಗಿ ಇಂಡಿಗೋ ಬಳಿ ಪ್ರತಿ ನಿತ್ಯದ 2,200 ವಿಮಾನ ಹಾರಾಟ ನಡೆಸಲು ಬೇಕಾದ ಪೈಲಟ್ ಗಳೇ ಇಲ್ಲ. ಈ ಮೊದಲು ಡ್ಯೂಟಿಯಲ್ಲಿದ್ದ ಪೈಲಟ್ ಗಳು ಈಗ ಹೊಸ ನಿಯಮದಿಂದ ವಿಮಾನ ಹಾರಾಟ ನಡೆಸುವಂತಿಲ್ಲ.  ಬದಲಾದ ನಿಯಮದಿಂದ ಪೈಲಟ್ ಗಳ ಕೊರತೆ ಆಗುತ್ತೆ ಎಂಬುದನ್ನು ಮುಂಚಿತವಾಗಿಯೇ ಗ್ರಹಿಸಿ ಹೆಚ್ಚಿನ ಸಂಖ್ಯೆಯ ಪೈಲಟ್ ಗಳನ್ನು ಇಂಡಿಗೋ ನೇಮಿಸಿಕೊಳ್ಳಬೇಕಾಗಿತ್ತು. ಆ ಮುಂಜಾಗ್ರತೆಯನ್ನು ಇಂಡಿಗೋ ವಹಿಸಿಲ್ಲ. 
ಸಾಮಾನ್ಯ ಸ್ಥಿತಿಯಲ್ಲಿ ಇಂಡಿಗೋ ಪ್ರತಿ ನಿತ್ಯ 2,200 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ಹಾರಾಟ ನಡೆಸುತ್ತೆ. ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ ವೇಳೆ ವಿಮಾನ ಹಾರಾಟ ನಡೆಸುತ್ತೆ. ಆದರೇ, ಹೊಸ ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ಪ್ರಕಾರ ರಾತ್ರಿ ವೇಳೆ ಹಾರಾಟ ನಡೆಸುವ ವಿಮಾನಗಳ ಮೇಲೆ ಮಿತಿ ವಿಧಿಸಲಾಗಿದೆ. ಇದರಿಂದಲೂ ಇಂಡಿಗೋ ಗೆ ಸಮಸ್ಯೆ ಎದುರಾಗಿದೆ. ಹಗಲು ವೇಳೆ ಹೆಚ್ಚಿನ ವಿಮಾನ ಹಾರಾಟ ನಡೆಸಬೇಕಾಗಿದೆ. 

INDIGO PILOTS02



ಇಂಡಿಗೋ ಕಂಪನಿಯು ಈಗ ಸಮಸ್ಯೆ ಪರಿಹಾರಕ್ಕೆ 2026ರ ಫೆಬ್ರವರಿ 10 ರವರೆಗೆ ಹೊಸ ನಿಯಮದಿಂದ ವಿನಾಯಿತಿ ನೀಡುವಂತೆ ಡಿಜಿಸಿಎಗೆ ಮನವಿ ಮಾಡಿಕೊಂಡಿದೆ. 
ಇಂಡಿಗೋ ಸಿಇಓ ಪೀಟರ್ ಎಲಬರ್ಸ್ , ಇಂಡಿಗೋ ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಡಿಜಿಸಿಎ ಜೊತೆ ಸೇರಿ ಕೆಲಸ ಮಾಡುತ್ತಿದ್ದ, ವಿಮಾನ ಸಂಚಾರದ ವಿಳಂಬವನ್ನು ಕಡಿಮೆ ಮಾಡಿ, ಸಹಜ ಸ್ಥಿತಿಗೆ ತರಲು ಯತ್ನ  ನಡೆಸುತ್ತಿರುವುದಾಗಿ ಹೇಳಿದ್ದಾರೆ. 
ಇಂಡಿಗೋ ಬಳಿ ಅಗತ್ಯ ಸಂಖ್ಯೆಯ ಪೈಲಟ್ ಗಳು ಇಲ್ಲದೇ ಇರುವುದರಿಂದ ವಿಮಾನ ಸಂಚಾರ ವ್ಯತ್ಯಯವಾಗಿದೆ ಎಂದು ಫೆಡರೇಷನ್ ಆಫ್ ಇಂಡಿಯನ್  ಪೈಲಟ್ ಅಸೋಸಿಯೇಷನ್ ಹೇಳಿದೆ. ಈ ಸಮಸ್ಯೆಗೆ ಪೈಲಟ್ ಗಳು ಕಾರಣವಲ್ಲ, ಇಂಡಿಗೋ ಕಂಪನಿಯೇ ಕಾರಣ ಎಂದು ಫೆಡರೇಷನ್ ಆಫ್ ಇಂಡಿಯನ್ ಪೈಲಟ್ ಹೇಳಿದೆ. 

INDIGO PILOTS passenger proublem



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Indigo airlines flights cancelled
Advertisment
Advertisment
Advertisment