/newsfirstlive-kannada/media/media_files/2025/09/13/big-billion-day-sales03-2025-09-13-15-42-06.jpg)
ಬಿಗ್ ಬಿಲಿಯನ್ ಡೇಸ್ ವೇಳೆ ಭರ್ಜರಿ ಆಫರ್ ನೀಡಿದ ಪ್ಲಿಪ್ ಕಾರ್ಟ್
ಆ್ಯಪಲ್ ಕಂಪನಿಯು ಹೊಸ ಐಪೋನ್ 17 ಸೀರೀಸ್ ಅನ್ನು ಲಾಂಚ್ ಮಾಡಿದೆ. ಭಾರತದಲ್ಲಿ ನಿನ್ನೆಯಿಂದ ಇದರ ಫ್ರೀಬುಕ್ಕಿಂಗ್ ಆರಂಭವಾಗಿದೆ. ಆದರೇ, ಇದರ ಹಿಂದಿನ ಸೀರೀಸ್ ಆದ ಐಪೋನ್ 16, ಐಪೋನ್ 16 ಪ್ರೊ ಹಾಗೂ ಐಪೋನ್ 16 ಪ್ರೊ ಮ್ಯಾಕ್ಸ್ ಬೆಲೆಯನ್ನು ಕಡಿತಗೊಳಿಸಿದೆ. ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ಐಪೋನ್ 16 ಬೆಲೆಯನ್ನು ಭಾರಿ ಕಡಿತಗೊಳಿಸಿದೆ. ಸೆಪ್ಟೆಂಬರ್ 23 ರಂದು ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯಲಿದೆ.
ಸೆಪ್ಟೆಂಬರ್ 23 ರಂದು ಐಪೋನ್ 16 ಪ್ರೊ ಬೆಲೆಯು 1,12,900 ರೂಪಾಯಿಯಿಂದ 69,999 ರೂಪಾಯಿಗೆ ಇಳಿಕೆಯಾಗಲಿದೆ. ಪ್ಲಿಪ್ ಕಾರ್ಟ್ ನಲ್ಲಿ ಬರೋಬ್ಬರಿ 42,901 ರೂಪಾಯಿ ಕಡಿಮೆ ಬೆಲೆಗೆ ಐ ಪೋನ್ 16 ಪ್ರೊ ಸಿಗಲಿದೆ.
ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಪ್ಲಾಟ್ ಡಿಸ್ಕೌಂಟ್, ಬ್ಯಾಂಕ್ ಆಫರ್ ಗಳು ಸೇರಿ ಬರೋಬ್ಬರಿ 42,901 ರೂಪಾಯಿ ಕಡಿಮೆ ಬೆಲೆಗೆ ಐಪೋನ್ ಪ್ರೊ ಮಾರಾಟವಾಗಲಿದೆ.
ಇನ್ನೂ ಎಕ್ಸ್ ಚೇಂಜ್ ಆಫರ್ ಕೂಡ ಇದೆ.
ಇನ್ನೂ ಆ್ಯಪಲ್ ಐಪೋನ್ 16 ಪ್ರೊ ಮ್ಯಾಕ್ಸ್ ಬೆಲೆಯು ಭಾರತದಲ್ಲಿ 1,44,900 ರೂಪಾಯಿ ಇತ್ತು. ಐಪೋನ್ ಪ್ರೊ ಮ್ಯಾಕ್ಸ್ 89,999 ರೂಪಾಯಿಗೆ ಸಿಗಲಿದೆ. ಇದರಲ್ಲಿ ಪ್ಲಾಟ್ ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್ ಗಳು ಸೇರಿವೆ.
ಇನ್ನೂ ಐಪೋನ್ 16, ಬಿಗ್ ಬಿಲಿಯನ್ ಡೇಸ್ ವೇಳೆ 51,999 ರೂಪಾಯಿಗೆ ಸಿಗಲಿದೆ. ಐಪೋನ್ 14 ಕೂಡ 39,999 ರೂಪಾಯಿಗೆ ಸಿಗಲಿದೆ.
ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟಗಳು ಕೆಲವೇ ಗಂಟೆಗಳಲ್ಲಿ ಅಂತ್ಯವಾಗುತ್ತಾವೆ. ಹೀಗಾಗಿ ಮಾರಾಟ ಆರಂಭವಾದ ಪ್ರಾರಂಭದ ಕೆಲ ಗಂಟೆಗಳಲ್ಲಿ ಐ ಪೋನ್ ಖರೀದಿಸಿದರೇ, ಭರ್ಜರಿ ಲಾಭ ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.